Headlines

ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ನಾಳೆ ರಿಪ್ಪನ್ ಪೇಟೆಯಲ್ಲಿ ಶಾಂತಿಸಭೆ – ಎಸ್ ಪಿ ಮಿಥುನ್ ಕುಮಾರ್ ಭಾಗಿ

ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ನಾಳೆ ರಿಪ್ಪನ್ ಪೇಟೆಯಲ್ಲಿ ಶಾಂತಿಸಭೆ – ಎಸ್ ಪಿ ಮಿಥುನ್ ಕುಮಾರ್ ಭಾಗಿ ರಿಪ್ಪನ್ ಪೇಟೆ : ಮುಂಬರುವ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಾಳೆ (ಆ.21) ಬೆಳಗ್ಗೆ 10:30ಕ್ಕೆ ರಿಪ್ಪನ್‌ಪೇಟೆಯ ಶಿವಮೊಗ್ಗ ರಸ್ತೆಯಲ್ಲಿರುವ ಶಿವಮಂದಿರದಲ್ಲಿ ಶಿವಮೊಗ್ಗ ಎಸ್.ಪಿ. ಮಿಥುನ್ ಕುಮಾರ್ ನೇತೃತ್ವದಲ್ಲಿ ಶಾಂತಿಸಭೆ ಏರ್ಪಡಿಸಲಾಗಿದೆ ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ. ಈ ಸಭೆಗೆ ಠಾಣಾ ವ್ಯಾಪ್ತಿಯ ಎಲ್ಲಾ…

Read More

ಮೈಸೂರು-ತಾಳಗುಪ್ಪ ರೈಲು | ಅರಸಾಳು, ಕುಂಸಿ ಪ್ರಯಾಣಿಕರಿಗೆ ಬಿಗ್ ಗುಡ್ ನ್ಯೂಸ್

ಮೈಸೂರು-ತಾಳಗುಪ್ಪ ರೈಲು | ಅರಸಾಳು, ಕುಂಸಿ ಪ್ರಯಾಣಿಕರಿಗೆ ಬಿಗ್ ಗುಡ್ ನ್ಯೂಸ್ ಶಿವಮೊಗ್ಗ: ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಮುಂದುವರೆಸಲಾಗುತ್ತಿದೆ.ಈ ಕುರಿತಂತೆ ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಅರಸಾಳು ಹಾಗೂ ಕುಂಸಿ ರೈಲು ನಿಲ್ದಾಣಗಳಲ್ಲಿ ಕೆಳಗಿನ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. ರೈಲು ಸಂಖ್ಯೆ 16227/16228 ಮೈಸೂರು – ತಾಳಗುಪ್ಪ – ಮೈಸೂರು ಎಕ್ಸ್’ಪ್ರೆಸ್ ಅರಸಾಳು ನಿಲ್ದಾಣದಲ್ಲಿ 1 ನಿಮಿಷ ನಿಲ್ಲುತ್ತದೆ. ರೈಲು ಸಂಖ್ಯೆ…

Read More

ತೀರ್ಥಹಳ್ಳಿಯಲ್ಲಿ ಲಾರಿ ಮಾಲೀಕ ನೇಣು ಬಿಗಿದುಕೊಂಡು ಸಾವು!

ತೀರ್ಥಹಳ್ಳಿಯಲ್ಲಿ ಮತ್ತೊಬ್ಬ ಲಾರಿ ಮಾಲೀಕ ನೇ*ಣಿಗೆ ಶರಣು! ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿಯ ಲಾರಿ ಮಾಲೀಕರೊಬ್ಬರು ಮಂಗಳವಾರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ. ಲಾರಿ ಮಾಲೀಕರದ ಮೇಗರವಳ್ಳಿಯ ಮಂಜುನಾಥ್ (42 ) ಸಾಲಬಾದೆಯಿಂದ ಮನನೊಂದು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಇವರು ಅವಿವಾಹಿತರಾಗಿದ್ದು ಎನ್ನಲಾಗಿದ್ದು ಸಾವಿಗೆ ನಿಖರವಾದ ಮಾಹಿತಿ ಪೊಲೀಸ್ ಮಹಜರಿನ ನಂತರ ತಿಳಿದು ಬರ ಬೇಕಿದೆ. ಇತ್ತೀಚಿಗೆ ಮೇಲಿನಕುರುವಳ್ಳಿಯಲ್ಲೂ ಇದೆ ರೀತಿ ಪ್ರಕರಣ ನಡೆದಿತ್ತು. ಒಂದೇ ತಿಂಗಳಲ್ಲಿ ಇದು ಎರಡನೇ ಪ್ರಕರಣ…

Read More

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಇಬ್ಬರು ಮೆಡಿಕಲ್‌ ವಿದ್ಯಾರ್ಥಿಗಳ ದುರ್ಮರಣ

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಇಬ್ಬರು ಮೆಡಿಕಲ್‌ ವಿದ್ಯಾರ್ಥಿಗಳ ದುರ್ಮರಣ ಶಿವಮೊಗ್ಗ: ನಗರದ ಸರ್ಕ್ಯೂಟ್‌ ಹೌಸ್‌ ಸರ್ಕಲ್‌ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಎಂಬಿಬಿಎಸ್‌ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ ಹಾಗೂ ನಂದಿನಿ ಹಾಲಿನ ವಾಹನ ಪರಸ್ಪರ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ನಡೆದಿದೆ. ಮೃತರನ್ನು ಮೂರನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳಾದ ಆದಿತ್ಯ ಮತ್ತು ಸಂದೀಪ್ ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ಇಬ್ಬರೂ ತೀವ್ರವಾಗಿ ರಸ್ತೆ ಮೇಲೆ ಬಿದ್ದು…

Read More

RIPPONPETE | ಬಾವಿಗೆ ಬಿದ್ದು ಯುವಕ ಸಾವು – ಕಾಲು ಜಾರಿ ಬಿದ್ದಿರುವ ಶಂಕೆ

RIPPONPETE | ಬಾವಿಗೆ ಬಿದ್ದು ಯುವಕ ಸಾವು – ಕಾಲು ಜಾರಿ ಬಿದ್ದಿರುವ ಶಂಕೆ ರಿಪ್ಪನ್ ಪೇಟೆ : ಇಲ್ಲಿನ ನೆವಟೂರು ಗ್ರಾಮದ ಯುವಕನೊಬ್ಬ ಬಾವಿಗೆ ಬಿದ್ದು ಮೃತಪಟ್ಟಿದ್ದು ಆತ್ಮಹತ್ಯೆಯೋ ಅಥವಾ ಕಾಲುಜಾರಿ ಬಿದ್ದಿದ್ದಾನೋ ಎಂಬ ಶಂಕೆ ವ್ಯಕ್ತವಾಗಿದೆ. ನೆವಟೂರು ಗ್ರಾಮದ ಆನಂದ್ (30) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಇಂದು ಬೆಳಿಗ್ಗೆ ಮೃತ ಯುವಕನ ಮನೆ ಸಮೀಪದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದ್ದು ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ , ನೆವಟೂರು ಗ್ರಾಮದ ಭರ್ಮಪ್ಪ ಎಂಬುವವರ ಪುತ್ರನಾದ ಆನಂದ್ ಇಂದು…

Read More

ಸೌಜನ್ಯ ಹೆಸರಿನಲ್ಲಿ ದುಡ್ಡು ಮಾಡುವ ದಂಧೆ – ವಸಂತ್ ಗಿಳಿಯಾರ್

ಸೌಜನ್ಯ ಹೆಸರಿನಲ್ಲಿ ದುಡ್ಡು ಮಾಡುವ ದಂಧೆ – ವಸಂತ್ ಗಿಳಿಯಾರ್. ಧರ್ಮಸ್ಥಳದ ಮೇಲೆ ವ್ಯವಸ್ಥಿತ ದಾಳಿ  – ಆರಗ ಜ್ಯಾನೇಂದ್ರ. ತೀರ್ಥಹಳ್ಳಿ :- ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಸಾವನ್ನು ಅಸ್ತ್ರವಾಗಿ ಹಿಡಿದು ಒಂದಿಷ್ಟು ಮಂದಿ ದುಡ್ಡು ಮಾಡುವ ದಂಧೆ ಮಾಡುತ್ತಿದ್ದಾರೆ. ಅವರಿಗೆ ಧರ್ಮಸ್ಥಳದ ಮಂಜುನಾಥ ದೇವರು ಶಿಕ್ಷೆ ಕೊಡದೆ ಇದ್ದರೂ, ಅಣ್ಣಪ್ಪ ಶಿಕ್ಷೆ ಕೊಟ್ಟೇ ಕೊಡುತ್ತಾನೆ ಎಂದು ವಸಂತ್ ಗಿಳಿಯಾರ್ ಹೇಳಿದರು. ಇಂದು ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಬೃಹತ್ ಪ್ರತಿಭಟನೆಯಲ್ಲಿ ಅವರು…

Read More

ಲಿಂಗನಮಕ್ಕಿ ಅಣೆಕಟ್ಟಿನಿಂದ 15 ಸಾವಿರ ಕ್ಯೂಸೆಕ್ ನೀರು ಬಿಡುಗಡೆ – ಜೋಗ ಜಲಪಾತದ ಸೊಬಗು ಮತ್ತಷ್ಟು ಹೆಚ್ಚಳ

ಲಿಂಗನಮಕ್ಕಿ ಅಣೆಕಟ್ಟಿನಿಂದ 15 ಸಾವಿರ ಕ್ಯೂಸೆಕ್ ನೀರು ಬಿಡುಗಡೆ – ಜೋಗ ಜಲಪಾತದ ಸೊಬಗು ಮತ್ತಷ್ಟು ಹೆಚ್ಚಳ ಶಿವಮೊಗ್ಗ, ಆಗಸ್ಟ್ 19: ಕಳೆದ ಕೆಲವು ದಿನಗಳಿಂದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಶರಾವತಿ ನದಿಯ ಜೀವನಾಡಿಯಾದ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದೆ. ಅಣೆಕಟ್ಟಿನ ನೀರಿನ ಮಟ್ಟ 1816 ಅಡಿಗೆ ತಲುಪಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕ ವಿದ್ಯುತ್ ನಿಗಮದ ಇಂಜಿನಿಯರ್‌ಗಳು 11 ರೇಡಿಯಲ್ ಗೇಟ್‌ಗಳನ್ನು ತೆರೆಯುವ ಮೂಲಕ ಸುಮಾರು 15 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ….

Read More

RIPPONPETE | ಅಡ್ಡೇರಿ ಸರ್ಕಾರಿ ಶಾಲೆ ಕುಸಿತ – ತಪ್ಪಿದ ಭಾರಿ ಅನಾಹುತ, ಮಕ್ಕಳಿಗೆ ತಾತ್ಕಾಲಿಕ ವ್ಯವಸ್ಥೆ ಅಗತ್ಯ

ಅಡ್ಡೇರಿ ಸರ್ಕಾರಿ ಶಾಲೆ ಕುಸಿತ – ತಪ್ಪಿದ ಭಾರಿ ಅನಾಹುತ, ಮಕ್ಕಳಿಗೆ ತಾತ್ಕಾಲಿಕ ವ್ಯವಸ್ಥೆ ಅಗತ್ಯ ರಿಪ್ಪನ್ ಪೇಟೆ : ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡ್ಡೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಗೋಡೆಗಳು ಕುಸಿದು ಬಿದ್ದಿವೆ. ಘಟನೆ ಸೋಮವಾರ ರಾತ್ರಿ ನಡೆದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 17 ವಿದ್ಯಾರ್ಥಿಗಳ ಭಾರಿ ಅನಾಹುತದಿಂದ ಪಾರಾಗಿದ್ದಾರೆ. ಶಾಲೆಯ ಕಟ್ಟಡ ಸಂಪೂರ್ಣ ಹಾನಿಗೊಳಗಾದ ಹಿನ್ನೆಲೆಯಲ್ಲಿ,…

Read More

RIPPONPETE | ಮದ್ಯಪಾನ ಮಾಡಿ ಬಸ್ ಚಾಲನೆ ಮಾಡಿದ ಖಾಸಗಿ ಬಸ್ ಚಾಲಕ – ಪ್ರಕರಣ ದಾಖಲಿಸಿದ ಪೊಲೀಸರು

RIPPONPETE | ಮದ್ಯಪಾನ ಮಾಡಿ ಬಸ್ ಚಾಲನೆ ಮಾಡಿದ ಖಾಸಗಿ ಬಸ್ ಚಾಲಕ – ಪ್ರಕರಣ ದಾಖಲಿಸಿದ ಪೊಲೀಸರು ರಿಪ್ಪನ್ ಪೇಟೆ : ಮದ್ಯಪಾನ ಮಾಡಿ ಸಾರ್ವಜನಿಕರ ಪ್ರಾಣದೊಂದಿಗೆ ಆಟವಾಡುತ್ತಿದ್ದ ಖಾಸಗಿ ಬಸ್ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ಇಂದು ಮಧ್ಯಾಹ್ನ ಪಟ್ಟಣದಲ್ಲಿ ನಡೆದಿದೆ. ಸಮಯೋಚಿತವಾಗಿ ಪೊಲೀಸರು ಕ್ರಮ ಕೈಗೊಂಡದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸಾಗರದಿಂದ ತೀರ್ಥಹಳ್ಳಿಯತ್ತ ತೆರಳುತ್ತಿದ್ದ ಖಾಸಗಿ ಬಸ್‌ನ ಚಾಲಕ ಕಂಠಪೂರ್ತಿ ಮದ್ಯ ಸೇವಿಸಿ ವಾಹನವನ್ನು ನಿರ್ಲಕ್ಷ್ಯದಿಂದ ಓಡಿಸುತ್ತಿದ್ದಾನೆಂಬ ಮಾಹಿತಿ ಬಸ್ಸಿನಲ್ಲಿದ್ದ…

Read More

ಹಣಗೆರೆ ಬಳಿ ಭಯಾನಕ ರಸ್ತೆ ಅಪಘಾತ – ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಹಣಗೆರೆ ಬಳಿ ಭಯಾನಕ ರಸ್ತೆ ಅಪಘಾತ – ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು ಶಿವಮೊಗ್ಗ, ಹಣಗೆರೆಕಟ್ಟೆ ರಸ್ತೆಯ ಕುಣಜೆ ಗ್ರಾಮದ ಬಳಿ ನಿನ್ನೆ ಭಯಾನಕ ರಸ್ತೆ ಅಪಘಾತ ಸಂಭವಿಸಿದೆ. ಆದರೆ ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗದೇ ಪಾರಾಗಿದ್ದಾರೆ. ಶಿವಮೊಗ್ಗದಿಂದ ಹಣಗೆರೆಕಟ್ಟೆ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಒಂದಕ್ಕೆ ಎದುರಿನಿಂದ ಬಂದ ಸ್ವಿಫ್ಟ್ ಕಾರೊಂದು ಹಿಂಬದಿ ಭಾಗದಲ್ಲಿ ಡಿಕ್ಕಿ ಹೊಡೆದ ಪರಿಣಾಮ, ಬಸ್‌ನ ಹಿಂಬದಿ ನಾಲ್ಕು ಟಯರ್‌ಗಳು ಸಂಪೂರ್ಣವಾಗಿ ಕಿತ್ತು ಹೋಗಿವೆ. ಕಾರಿನ ಮುಂಭಾಗ ತೀವ್ರವಾಗಿ ಜಕಂಗೊಂಡಿದ್ದರೂ,…

Read More