w
Headlines

545 PSI ಹುದ್ದೆಗಳ ಮರು ಪರೀಕ್ಷೆ ಜ.23ಕ್ಕೆ ಮುಂದೂಡಿಕೆ

545 PSI ಹುದ್ದೆಗಳ ಮರು ಪರೀಕ್ಷೆ ಜ.23ಕ್ಕೆ ಮುಂದೂಡಿಕೆ ಇದೇ ಡಿಸೆಂಬರ್​ 23ಕ್ಕೆ ನಿಗದಿಯಾಗಿದ್ದ 545 PSI ಹುದ್ದೆಗಳ ಮರು ಪರೀಕ್ಷೆಯನ್ನು ಒಂದು ತಿಂಗಳ ಕಾಲ ಮುಂದೂಡಲಾಗಿದ್ದು, ಜನವರಿ 23ಕ್ಕೆ ಪರೀಕ್ಷೆ ನಡೆಯಲಿದೆ. ಇಂದಿನಿಂದ ಚಳಿಗಾಲ ಅಧಿವೇಶನ ಆರಂಭವಾಗಿದ್ದು, ಬೆಳಗಾವಿಯ ಸುವರ್ಣಸೌಧದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್​ ಅವರು ಪರೀಕ್ಷೆ ಮುಂದೂಡಿರುವುದಾಗಿ ಘೋಷಿಸಿದರು. ಮರು ಪರೀಕ್ಷೆಯನ್ನು ಮುಂದೂಡುವಂತೆ ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಆಗ್ರಹಿಸಿದ ಹಿನ್ನೆಲೆಯಲ್ಲಿ ಡಿ.23ರಿಂದ ಜ. 23ಕ್ಕೆ ಮುಂದೂಡಿರುವುದಾಗಿ ಪರಮೇಶ್ವರ್​ ಮಾಹಿತಿ ನೀಡಿದರು. ಪೊಲೀಸ್​…

Read Full News

Sagara | ಉಸ್ತುವಾರಿ ಸಚಿವ ಮಧುಬಂಗಾರಪ್ಪ ವಿರುದ್ದ ಸಾಗರ ಪತ್ರಕರ್ತರಿಂದ ಪ್ರತಿಭಟನೆ

Sagara | ಉಸ್ತುವಾರಿ ಸಚಿವ ಮಧುಬಂಗಾರಪ್ಪ ವಿರುದ್ದ ಸಾಗರ ಪತ್ರಕರ್ತರಿಂದ ಪ್ರತಿಭಟನೆ ಸಾಗರ : ಪತ್ರಕರ್ತರ ಆತ್ಮಗೌರವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಮಾತನಾಡಿದ ವಾರ್ತಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರವರ ನಡೆಯನ್ನು ಖಂಡಿಸಿ ಸಾಗರದ ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ. ಉಪ ವಿಭಾಗಾಧಿಕಾರಿಗಳ ಕಛೇರಿಯ ಎದುರು ಪತ್ರಕರ್ತರು ಕಪು ಬಟ್ಟೆ ಕಟ್ಟಿಕೊಂಡು ಸಚಿವರು ಹಾಗೂ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ಡಿ. ಒಂದರಂದು ಜಿಲ್ಲಾ…

Read Full News

Thirthahalli | ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ

ತೀರ್ಥಹಳ್ಳಿಯ ಕುಶಾವತಿ ಬಳಿ ಎರಡು ಕಾರುಗಳ ನಡುವೆ ಅಪಘಾತ  ತೀರ್ಥಹಳ್ಳಿ : ಪಟ್ಟಣದ ಕುಶಾವತಿ ಸೇತುವೆ ಬಳಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಬ್ರೀಜಾ ಕಾರು ಹಾಗೂ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಬರುತ್ತಿದ್ದ ಸಿಯಾಜ್ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ.  ಒಂದು ಕಾರಿನ ಮುಂಭಾಗ ಹಾಗೂ ಮತ್ತೊಂದು ಕಾರಿನ ಬಲ ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಸಣ್ಣ ಪುಟ್ಟ ಗಾಯವಾಗಿದ್ದರಿಂದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ತೀರ್ಥಹಳ್ಳಿ…

Read Full News

ಆಸ್ತಿ ವಿಚಾರಕ್ಕೆ ಕಲಹ – ಪೆಟ್ರೋಲ್ ಸುರಿದು,ಬೆಂಕಿ ಹಚ್ಚಿ ಚಿಕ್ಕಪ್ಪನ ಕೊಲೆಗೈದ ದುರುಳರು |Crime News

ಆಸ್ತಿ ವಿಚಾರಕ್ಕೆ ಕಲಹ – ಪೆಟ್ರೋಲ್ ಸುರಿದು,ಬೆಂಕಿ ಹಚ್ಚಿ ಚಿಕ್ಕಪ್ಪನ ಕೊಲೆಗೈದ ದುರುಳರು ಶಿವಮೊಗ್ಗ : ಬೆಳಲಕಟ್ಟೆ ಗ್ರಾಮದಿಂದ ಮಗಳ ಮನೆಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಪೆಟ್ರೋಲ್ ಎರಚಿ ಜೀವಂತವಾಗಿ ಸುಟ್ಟಿರುವ ಘಟನೆ ನಡೆದಿದೆ. ಬೆಳಲಕಟ್ಟೆ ಗ್ರಾಮದ  ಮಹೇಶಪ್ಪ (60) ಕೊಲೆಯಾದ ವ್ಯಕ್ತಿ. ಬಿಕ್ಕೋನಹಳ್ಳಿಯ ಮಗಳ ಮನೆಯಿಂದ ಬರುತ್ತಿದ್ದ ವೇಳೆ ಅಡ್ಡಗಟ್ಟಿ ಪೆಟ್ರೋಲ್ ಎರಚಿ ಕೊಲೆ ಮಾಡಲಾಗಿದೆ. ಬೆಳಲಕಟ್ಟೆಯ ಕಾರ್ತಿಕ್ ಮತ್ತು ಕುಮಾರ್ ಎಂಬುವರಿಂದ ಈ ಕೃತ್ಯ ನೆಡೆದಿದೆ. ಮಹೇಶಪ್ಪನವರಿಗೆ ಬೆಳಲಕಟ್ಟೆಯಲ್ಲಿ ಮೂರು ಎಕರೆ ಜಮೀನು ಇದ್ದು ನ್ಯಾಯಾಲಯದಲ್ಲಿ…

Read Full News

Thirthahalli | ಸೆಮಿಫೈನಲ್ ನಲ್ಲಿ ಗೆದ್ದಿದ್ದೇವೆ, ಖಂಡಿತವಾಗಿ ಫೈನಲ್ ಮೋದಿಯದ್ದೆ – ಆರಗ ಜ್ಞಾನೇಂದ್ರ

ಸೆಮಿಫೈನಲ್ ನಲ್ಲಿ ಗೆದ್ದಿದ್ದೇವೆ, ಖಂಡಿತವಾಗಿ ಫೈನಲ್ ಮೋದಿಯದ್ದೆ – ಆರಗ ಜ್ಞಾನೇಂದ್ರ  ತೀರ್ಥಹಳ್ಳಿ : ಇಂದು ಬಿಜೆಪಿ ಕಾರ್ಯಕರ್ತರ ಪಾಲಿಗೆ ಸಂಭ್ರಮದ ದಿನ. ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅತ್ಯುತ್ತಮ ಲೀಡ್ ನಲ್ಲಿ ಇದೆ. ಇಂಡಿಯನ್ ಅಲೆಯನ್ಸ್ ನೆಲ ಕಚ್ಚುತ್ತಿದೆ. ಗ್ಯಾರೆಂಟಿ ನೀಡಿದರು ಜನ ಒಪ್ಪದೇ ಕಾಂಗ್ರೆಸ್ ಗೆ ತಪರಾಕಿ ಹೊಡೆದಿದ್ದಾರೆ ಎಂದು ಮಾಜಿ ಗೃಹಸಚಿವ, ಶಾಸಕರಾದ ಆರಗ ಜ್ಞಾನೇಂದ್ರ ಹೇಳಿದರು. ಭಾನುವಾರ ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಮೂರು ರಾಜ್ಯ ಬಿಜೆಪಿ ಪರವಾಗಿ …

Read Full News

MENs DAY | ಹೊಸನಗರದಲ್ಲಿ ಪುರುಷ ದಿನಾಚರಣೆ ಸಂಭ್ರಮ

ಹೊಸನಗರದಲ್ಲಿ ಪ್ರಪ್ರಥಮವಾಗಿ ಕ್ರೈಸ್ತ ಯುವತಿ ಮಂಡಳಿಯವರಿಂದ ಪುರುಷ ದಿನಾಚರಣೆ ಸಂಭ್ರಮ ಹೊಸನಗರ : ಪಟ್ಟಣದ ಸಂತ ಅಂತೋನಿ ದೇವಾಲಯದ ಸಭಾಂಗಣದಲ್ಲಿ ಇಂದು ಕ್ರೈಸ್ತ ಯುವತಿ ಸಂಘದವರು ಹೊಸನಗರದಲ್ಲಿ ಪ್ರಪ್ರಥಮವಾಗಿ ಪುರುಷರ ದಿನಾಚರಣೆಯನ್ನು ಆಚರಿಸಿದರು ಸಮಾರಂಭವನ್ನು ಸಂತ ಅಂತೋನಿ ದೇವಾಲಯದ ಧರ್ಮ ಗುರುಗಳಾದ ರೆ ಫಾ ಸೈಮನ್ ಹೊರಟರವರು ದೀಪ ಬೆಳಗಿ ಉದ್ಘಾಟಿಸಿ ಪುರುಷರ ತ್ಯಾಗ ಮನೋಭಾವ ಬೆಲೆಕಟ್ಟಲಾಗದಂತಹ ಆಸ್ತಿಯಾಗಿದ್ದಾರೆ.ಪುರುಷರು ಸಂಬಂಧ ಭಾವನೆಗಳ ಮೂಲಕ ಆದರ್ಶ ಪ್ರಾಯರಾಗಿ ಸದೃಢ ಕುಟುಂಬ ರೂಪಿಸಿಕೊಂಡು ಉತ್ತಮ ಜೀವನ ನಡೆಸುವಂತೆ ಕರೆ ನೀಡಿದರು…

Read Full News

Ripponpete | ವಿನಾಯಕನಗರದಲ್ಲಿ ಅಯ್ಯಪ್ಪ ಸ್ವಾಮಿ ಪೂಜಾ ಉತ್ಸವ

ರಿಪ್ಪನ್‌ಪೇಟೆ : ಪಟ್ಟಣದ ವಿನಾಯಕನಗರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅವರಣದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ 27ನೇ ವರ್ಷದ ಅಯ್ಯಪ್ಪ ಸ್ವಾಮಿ ಯಾತ್ರೆಯ ಅಂಗವಾಗಿ ಶ್ರೀ ಅಯ್ಯಪ್ಪ ಸ್ವಾಮಿ ಪೂಜಾ ಉತ್ಸವ ಕಾರ್ಯಕ್ರಮ 03-12-23 ರ ಭಾನುವಾರದಂದು ನಡೆಯಲಿದೆ. ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯನ್ನು ತೀರ್ಥೇಶ್ ಗುರುಸ್ವಾಮಿ, ರಮೇಶ್ ಗುರುಸ್ವಾಮಿ ಮತ್ತು ಗುರುಹಿರಿಯರ ಸಮ್ಮುಖದಲ್ಲಿ ನೆರವೇರಿಸಲಾಗುವುದು. ಅಂದು ಬೆಳಗ್ಗೆ 8ಕ್ಕೆ ಗಣಪತಿ ಪೂಜೆ , 08-30 ಕ್ಕೆ ಸುಬ್ರಹ್ಮಣ್ಯ ಪೂಜೆ , 09 ಕ್ಕೆ ಇರುಮುಡಿ…

Read Full News

Ripponpete | ಕೆಂಚನಾಲ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಳಿ – ಸ್ಥಳಕ್ಕಾಗಮಿಸದೇ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ | ನರಬಲಿಗಾಗಿ ಕಾಯುತ್ತಿದೆಯಾ ಅರಣ್ಯ ಇಲಾಖೆ..!!??

Ripponpete | ಕೆಂಚನಾಲ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಳಿ – ಸ್ಥಳಕ್ಕಾಗಮಿಸದೇ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ | ನರಬಲಿಗಾಗಿ ಕಾಯುತ್ತಿದೆಯಾ ಅರಣ್ಯ ಇಲಾಖೆ ರಿಪ್ಪನ್‌ಪೇಟೆ : ಇಲ್ಲಿನ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಲವಳ್ಳಿ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆ ದಾಳಿ ನಡೆಸಿ ರೈತರ ಬೆಳೆಗಳನ್ನು ನಾಶಪಡಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಶುಕ್ರವಾರ ರಾತ್ರಿ ಘಟನೆ ನಡೆದಿದ್ದು ಸ್ಥಳೀಯರು ಆತಂಕದಲ್ಲಿ ಮುಂಜಾನೆಯೇ ಸ್ಥಳೀಯ ಅರಣ್ಯ ಸಿಬ್ಬಂದಿಗಳಿಗೆ ಮಾಹಿತಿ ತಿಳಿಸಿದರೂ ಸ್ಥಳಕ್ಕೆ ಬರಲು ಮೀನಮೇಷ ಎಣಿಸಿದ್ದಾರೆ,ಇಲಾಖೆಯವರು ನರಬಲಿಗಾಗಿ ಕಾಯುತ್ತಿದ್ದಾರೋ ಏನೋ..?…

Read Full News

Ripponpete | ಗ್ರಾಮೀಣ ಜನತೆಯ ಆರೋಗ್ಯ ಜಾಗೃತಿಗೆ ಶಿಬಿರಗಳು ಸಹಕಾರಿ – ಪಿಎಸ್‌ಐ ಪ್ರವೀಣ್

ಗ್ರಾಮೀಣ ಜನತೆಯ ಆರೋಗ್ಯ ಜಾಗೃತಿಗೆ ಶಿಬಿರಗಳ ಸಹಕಾರಿ – ಪಿಎಸ್‌ಐ ಪ್ರವೀಣ್ ರಿಪ್ಪನ್‌ಪೇಟೆ : ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಹೇಳಿದರು. ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಹಿಂದೂ ಮಹಾಸಭಾ ಪ್ರಾಂಗಣದಲ್ಲಿ ಕೆ ಎಸ್. ಹೆಗ್ಡೆ ಆಸ್ಪತ್ರೆ,ಮಂಗಳೂರು ಹಾಗೂ ಸಾಗರದ ನವಚೇತನ ವೇದಿಕೆ…

Read Full News

Ripponpete | ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು

Ripponpete | ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು ರಿಪ್ಪನ್‌ಪೇಟೆ : ಬಣ್ಣ ಬಣ್ಣದ ಮಾತುಗಳನ್ನಾಡಿ ಯುವತಿಯನ್ನು ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ರಿಪ್ಪನ್‌ಪೇಟೆ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಕೋಡೂರು ಗ್ರಾಪಂ ವ್ಯಾಪ್ತಿಯ 24ನೇ ಮೈಲಿಕಲ್ಲಿನ ಪ್ರತಾಪ್ (26) ಬಂಧಿತ ಆರೋಪಿಯಾಗಿದ್ದಾನೆ. ಕೋಡೂರು ಗ್ರಾಪಂ ವ್ಯಾಪ್ತಿಯ ಯುವತಿಯೊಬ್ಬಳ್ಳನ್ನು ಮದುವೆಯಾಗುವುದಗಿ ನಂಬಿಸಿ ನಿರಂತರ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿ ಗಂಡು ಮಗುವಿಗೆ ಜನ್ಮ ನೀಡಿದ ಮೇಲೆ ನಾನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ…

Read Full News

Home guard | ಗೃಹರಕ್ಷಕ ದಳದಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ – ರಿಪ್ಪನ್‌ಪೇಟೆ, ಆನಂದಪುರ,ಹೊಸನಗರ ಘಟಕದಲ್ಲಿದೆ ಖಾಲಿ ಹುದ್ದೆ.!!

ಗೃಹರಕ್ಷಕ ದಳದಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ – ರಿಪ್ಪನ್‌ಪೇಟೆ, ಆನಂದಪುರ,ಹೊಸನಗರ ಘಟಕದಲ್ಲಿದೆ ಖಾಲಿ ಹುದ್ದೆ… ಸರ್ಕಾರದ ಸ್ವತಂತ್ರವಾದ ಶಿಸ್ತುಬದ್ದ ಹಾಗೂ ಸಮವಸ್ತ್ರದಾರಿ ಸ್ವಯಂಸೇವಕರನ್ನು ಒಳಗೊಂಡ ಸ್ವಯಂ ಸೇವಾ ಸಂಸ್ಥೆಯಾದ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿ ಇರುವ ಪುರುಷ ಮತ್ತು ಮಹಿಳಾ ಗೃಹರಕ್ಷಕರ ಖಾಲಿ ಸ್ಥಾನಗಳನ್ನು ತುಂಬಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ರಿಪ್ಪನ್‌ಪೇಟೆಯಲ್ಲಿ 11 ಹುದ್ದೆ , ಹೊಸನಗರದಲ್ಲಿ 11 ಹುದ್ದೆ ಸೇರಿದಂತೆ ಜಿಲ್ಲಾದ್ಯಂತ ಪುರುಷ ಒಟ್ಟು 171 ಮತ್ತು ಮಹಿಳೆ 08 ಸ್ಥಾನಗಳಿಗೆ ಅರ್ಜಿ…

Read Full News

ಸಚಿವ ಮಧು ಬಂಗಾರಪ್ಪಗೆ ಅಹಂ ಜಾಸ್ತಿ ಆಗಿ ಅಧಿಕಾರದ ಪಿತ್ತ ನೆತ್ತಿಗೇರಿದೆ – ಶಾಸಕ ಬೇಳೂರು ಕಿಡಿ | GKB

ಸಚಿವ ಮಧು ಬಂಗಾರಪ್ಪಗೆ ಅಹಂ ಜಾಸ್ತಿ ಆಗಿ ಅಧಿಕಾರದ ಪಿತ್ತ ನೆತ್ತಿಗೇರಿದೆ – ಶಾಸಕ ಬೇಳೂರು ಕಿಡಿ ಸಚಿವ ಮಧು ಬಂಗಾರಪ್ಪ ರವರಿಗೆ ಅಹಂ ಜಾಸ್ತಿ ಆಗಿ ಅಧಿಕಾರದ ಪಿತ್ತ ನೆತ್ತಿಗೇರಿದೆ ಎಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ, ಎಲ್ಲಾ ಉಸ್ತುವಾರಿ ಸಚಿವರು ಸರಿ ಇದ್ದಾರೆ ಆದರೆ ನಮ್ಮ ಉಸ್ತುವಾರಿ ಸಚಿವರಿಗೆ ಅಹಂ ಜಾಸ್ತಿ ಆಗಿದೆ‌. ಎಲ್ಲಾ ವಿಚಾರದಲ್ಲಿ ಮೂಗು ತೂರಿಸುತ್ತಾರೆ….

Read Full News

Accident | ಚಾಲಕನ ನಿಯಂತ್ರಣ ತಪ್ಪಿ ದೇವಸ್ಥಾನದ ಕಟ್ಟೆಗೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ

Accident | ಚಾಲಕನ ನಿಯಂತ್ರಣ ತಪ್ಪಿ ದೇವಸ್ಥಾನದ ಕಟ್ಟೆಗೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪ ಕಾರೊಂದು ಅಫಘಾತಕ್ಕೀಡಾಗಿದೆ. ಘಟನೆಯಲ್ಲಿ ಕಾರು ನುಜ್ಜುಗುಜ್ಜಾಗಿ ಮೂವರಿಗೆ ಗಾಯವಾದ ಘಟನೆ ನಡೆದಿದೆ. ಪಿಳ್ಳಂಗೇರಿ ಗ್ರಾಮದ ಹೆದ್ದಾರಿ ಸಮೀಪದಲ್ಲಿಯೇ ಇರುವ ಗಣಪತಿ ದೇವಸ್ಥಾನದ ಕಟ್ಟೆಗೆ ಕಾರು ಡಿಕ್ಕಿಯಾಗಿದೆ.  ಕಾರಿನಲ್ಲಿದ್ದವರು ಚನ್ನಗಿರಿಯ ಅರಿಶಿನಘಟ್ಟಕ್ಕೆ ಹೋಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಈ ಘಟನೆ ಸಂಭವಿಸಿದೆ. ಪಿಳ್ಳಂಗೇರಿ ಗ್ರಾಮದ ಸಮೀಪ ಚಾಲಕ ನಿಯಂತ್ರಣ ತಪ್ಪಿ, ಕಾರು ದೇವಸ್ಥಾನದ ಕಟ್ಟೆಗೆ…

Read Full News

Shivamogga | ವಕೀಲರ ಮೇಲೆ ನಡೆದ ಹಲ್ಲೆ ಖಂಡಿಸಿ ಶಿವಮೊಗ್ಗದಲ್ಲಿ ವಕೀಲರಿಂದ ಪ್ರತಿಭಟನೆ

ವಕೀಲರ ಮೇಲೆ ನಡೆದ ಹಲ್ಲೆ ಖಂಡಿಸಿ ಶಿವಮೊಗ್ಗದಲ್ಲಿ ವಕೀಲರಿಂದ ಪ್ರತಿಭಟನೆ ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದನ್ನ ಖಂಡಿಸಿ ಇಂದು ಶಿವಮೊಗ್ಗದ ಬಾರ್ ಅಸೋಸಿಯೇಷನ್ ನ್ಯಾಯಾಂಗ ಕಲಾಪ ಬಹಿಷ್ಕರಿಸಿ ಗೋಪಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು. ಜಿಲ್ಲಾ ರಕ್ಷಾಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸುವಂತೆ ಪ್ರತಿಭಟಿಸಲಾಯಿತು. ಚಿಕ್ಕಮಗಳೂರಿನ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್, ಅಸಿಸ್ಟೆಂಟ್ ಸಬ್ ಇನ್ ಸ್ಪೆಕ್ಟರ್ ಮತ್ತು ಪೊಲೀಸ್ ಇತರೆ ಸಿಬ್ಬಂದಿಗಳ ಲಾಠಿ ದೊಣ್ಣೆಯಿಂದ ವಕೀಲರ ಸಂಘದ ಸದಸ್ಯ…

Read Full News

Anandapura | ಕನ್ನಡ ರಾಜ್ಯೋತ್ಸವದಲ್ಲಿ ಅಶ್ಲೀಲ ನೃತ್ಯ ಪ್ರಕರಣ – ಆಯೋಜಕರ ವಿರುದ್ದ ದಾಖಲಾಯ್ತು ಫೋಕ್ಸೋ ಕೇಸ್

Anandapura | ಕನ್ನಡ ರಾಜ್ಯೋತ್ಸವದಲ್ಲಿ ಅಶ್ಲೀಲ ನೃತ್ಯ ಪ್ರಕರಣ – ಆಯೋಜಕರ ವಿರುದ್ದ ದಾಖಲಾಯ್ತು ಫೋಕ್ಸೋ ಕೇಸ್ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ನಡೆದಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಅಪ್ರಾಪ್ತನ ಜೊತೆಗೆ ಯುವತಿಯೊಬ್ಬಳು ಅಸಭ್ಯವಾಗಿ ಕುಣಿದ ಪ್ರಕರಣಕ್ಕೆ ಸಂಬಂದಪಟ್ಟಂತೆ ಪೋಕ್ಸೋ ಕೇಸ್ ದಾಖಲಾಗಿದೆ ಅಶ್ಲೀಲ ನೃತ್ಯದ ವೀಡಿಯೋ ಎಲ್ಲೆಡೆ ವೈರಲ್ ಆದ ಹಿನ್ನಲೆಯಲ್ಲಿ ಸದ್ಯ ಘಟನೆ ಸಂಬಂಧ ಪೊಲೀಸ್ ಇಲಾಖೆಯು ಸಹ ಎಚ್ಚೆತ್ತುಕೊಂಡಿದ್ದು, ವೈರಲ್ ವಿಡಿಯೋವನ್ನು ಆಧರಿಸಿ ಪೋಕ್ಸೋ ಕಾಯಿದೆಯಡಿ ಆನಂದಪುರ ಪೊಲೀಸ್ ಠಾಣೆಯಲ್ಲಿ…

Read Full News

ಇನೋವಾ ಕಾರಿನಲ್ಲಿ ತಂಬಾಕು ಚೀಲದಲ್ಲಿ ದಾಖಲೆಯಿಲ್ಲದ 08 ಕೋಟಿ ಪತ್ತೆ

ಇನೋವಾ ಕಾರಿನಲ್ಲಿ ತಂಬಾಕು ಚೀಲದಲ್ಲಿ ದಾಖಲೆಯಿಲ್ಲದ 08 ಕೋಟಿ ಪತ್ತೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಇನ್ನೋವಾ ಕಾರಿನಲ್ಲಿ ದಾಖಲೆಯಿಲ್ಲದ 8 ಕೋಟಿ ರೂಪಾಯಿ ಹಣ ಪತ್ತೆಯಾಗಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪೊಲೀಸರು ತಪಾಸಣೆ ವೇಳೆ ಮಲ್ಲಾಡಿ ಹಳ್ಳಿ ಬಳಿಯಲ್ಲಿ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಇನೋವಾ ಕಾರನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ ತಂಬಾಕು ಚೀಲಗಳಲ್ಲಿ ದಾಖಲೆ ಇಲ್ಲದ 8 ಕೋಟಿ ರೂಪಾಯಿ ಪತ್ತೆಯಾಗಿದೆ.   ಈ ಹಣದ ಮೂಲದ ಬಗ್ಗೆ ಚಿತ್ರದುರ್ಗದ ಪೊಲೀಸ್ ವರಿಷ್ಟಾಧಿಕಾರಿ ಸ್ಥಳೀಯ…

Read Full News

Ripponpete | ಕನಕದಾಸರು ಜಾತ್ಯತೀತ ದಾರ್ಶನಿಕರಾಗಿದ್ದರು – ಜನಾರ್ಧನ್ ಬಿ ನಾಯಕ್

ಕನಕದಾಸರು ಜಾತ್ಯತೀತ ದಾರ್ಶನಿಕರಾಗಿದ್ದರು – ಜನಾರ್ಧನ್ ಬಿ ನಾಯಕ್ ರಿಪ್ಪನ್ ಪೇಟೆ : ಜಗತ್ತು ಕಂಡ ಸರ್ವ ಶ್ರೇಷ್ಠ ಮಾನವತಾವಾದಿ ಜಾತಿ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದ ಕನಕದಾಸರು ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ? ಎಂದು ಹಾಡಿ ಜಾತ್ಯತೀತ ದಾರ್ಶನಿಕರಾಗಿ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಉಪನ್ಯಾಸಕ  ಜನಾರ್ಧನ್.ಬಿ.ನಾಯಕ್ ಹೇಳಿದರು.  ಗುರುವಾರ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಹಮ್ಮಿಕೊಂಡ ಕನಕ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.  ಸಮಾಜದಲ್ಲಿ ಸಮಾನತೆ ಪ್ರತಿಪಾದಿಸಿದ ದಾಸ…

Read Full News

Ripponpete | ಸರ್ವ ಧರ್ಮದ ಸಾರವೂ ಒಂದೇ – ಪ್ರೋ ಹೆಚ್ ವಿ ರಾಮಪ್ಪಗೌಡ

ಸಂತೃಪ್ತಿಯ ಬದುಕಿಗೆ ಧರ್ಮ ಧಾರ್ಮಿಕ ಕಾರ್ಯಗಳು ಪೂರಕ ರಿಪ್ಪನ್‌ಪೇಟೆ;-ಆಘೋಚರ ಶಕ್ತಿಯೇ ದೇವರು.ಸರ್ವಾ ಧರ್ಮದ ಸಾರವೂ ಒಂದೇ ಅಗಿದ್ದು ಏಕಾಗ್ರತೆಯಿಂದ ಭಗವಂತನಲ್ಲಿ ಪ್ರಾರ್ಥಿಸಿದಲ್ಲಿ ಪುಣ್ಯ ಪ್ರಾಪ್ತಿಯೊಂದಿಗೆ ಸಂತೃಪ್ತಿ ದೊರೆಯುವುದೆಂದು  ಶಿವಮೊಗ್ಗ ಹೆರೆಗೊಡಿಗೆ ನಿವೃತ್ತ  ಪ್ರೋ.ಹೆಚ್.ವಿ.ರಾಮಪ್ಪಗೌಡ ಹೇಳಿದರು. ರಿಪ್ಪನ್‌ಪೇಟೆಯ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಲಾದ ಹೊಸನಗರದ  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಮಿತಿ ಆಯೋಜಿಸಿದ್ದ ಗ್ರಾಮ ಸುಭಿಕ್ಷೆಗಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ೪೫೮ ನೇ ನಮ್ಮೂರ ನಮ್ಮ ಕೆರೆ ಹಸ್ತಾಂತರ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ದೇಶದಲ್ಲಿ ಭ್ರಷ್ಟಾಚಾರ…

Read Full News

ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ 40 ಶಾಸಕರಿಗೆ ನಿಗಮ ಭಾಗ್ಯ..! | ಚಳಿಗಾಲ ಅಧಿವೇಶನದೊಳಗೆ ಆದೇಶ..!!

ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ 40 ಶಾಸಕರಿಗೆ ನಿಗಮ ಭಾಗ್ಯ..! | ಚಳಿಗಾಲ ಅಧಿವೇಶನದೊಳಗೆ ಆದೇಶ..!! ಶಾಸಕರು, ವಿಧಾನಪರಿಷತ್ ಸದಸ್ಯರೂ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಸೇರಿದಂತೆ 40 ಮಂದಿಯನ್ನು ಮೊದಲ ಹಂತದಲ್ಲಿ ನಿಗಮ ಮಂಡಳಿಗೆ ನೇಮಿಸಲು ನಿರ್ಧರಿಸಲಾಗಿದ್ದು ಒಂದೆರಡು ದಿನಗಳಲ್ಲಿ ಅಂತಿಮ ಪಟ್ಟಿ ಹೊರಬಿಳಲಿದೆ.ತಪ್ಪಿದಲ್ಲಿ ವಿಧಾನಮಂಡಲ ಅಧಿವೇಶನಕ್ಕೂ ಮೊದಲೇ ಅಂತಿಮ ಪಟ್ಟಿ ಹೊರ ಬೀಳುವುದು ಗ್ಯಾರಂಟಿಯಾಗಿದೆ. ಮೂರು ಬಾರಿ ಶಾಸಕರಾಗಿರುವ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ರವರಿಗೆ ನಿಗಮ ಮಂಡಳಿ ಸ್ಥಾನಮಾನ ದೊರೆಯುವ…

Read Full News

Ripponpete | ಬ್ರಾಹ್ಮಣ ವಿದ್ಯಾರ್ಥಿನಿಗೆ ಬಲವಂತವಾಗಿ ಮೊಟ್ಟೆ ತಿನ್ನಿಸಿದ ಪ್ರಕರಣ – ಶಿಕ್ಷಣ ಸಚಿವರಿಗೆ ಪತ್ರ ಬರೆದ ಬ್ರಾಹ್ಮಣ ಮಹಾಸಭಾ

ಶಿವಮೊಗ್ಗ : ಇತ್ತೀಚೆಗೆ ಹೊಸನಗರ ತಾಲೂಕಿನ ಅಮೃತ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಮೊಟ್ಟೆ ಬಲವಂತವಾಗಿ ಮೊಟ್ಟೆ ತಿನ್ನಿಸುತ್ತಿರುವ ಆರೋಪ ಕೇಳಿ ಬಂದಿತ್ತು.ನಂತರ ಈ ಬಗ್ಗೆ ಪೋಷಕರು ದೂರು ದಾಖಲಿಸಿದ್ದರು ಆ ನಂತರ ಹಿರಿಯ ಅಧಿಕಾರಿಗಳೆಲ್ಲಾ ಶಾಲೆಗೆ ಭೇಟಿ ನೀಡಿ ಶಿಕ್ಷಕನ ಬಳಿ ಕ್ಷಮೆ ಕೇಳಿಸಿ ಪ್ರಕರಣಕ್ಕೆ ತೇಪೆ ಹಚ್ಚುವ ಕೆಲಸವನ್ನು ಮಾಡಿದ್ದರು ಈ ಬಗ್ಗೆ ಈಗ ರಾಜ್ಯ ಸರ್ಕಾರದ ವಿರುದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಿಡಿ ಕಾರುತ್ತಿದೆ. ಸಚಿವ ಮಧುಬಂಗಾರಪ್ಪಗೆ ಪತ್ರ ಬರೆದ ಬ್ರಾಹ್ಮಣ…

Read Full News

Shivamogga | ಗದ್ದೆಯಲ್ಲಿ ಕೆಲಸ ಮಾಡುತಿದ್ದಾಗ ಸಿಡಿಲು ಬಡಿದು ಸಹೋದರರಿಬ್ಬರು ಸಾವು

ಶಿವಮೊಗ್ಗ – ಸಿಡಿಲು ಬಡಿದು ಇಬ್ಬರು ಸಹೋದರರು ಮೃತಪಟ್ಟಿರುವ ದಾರುಣ ಘಟನೆ ಭದ್ರಾವತಿ ನಗರದ ಹುಣಸಕಟ್ಟೆ ಜಂಕ್ಷನ್ ನಲ್ಲಿ ನಡೆದಿದೆ. ಮೃತರನ್ನು ಎಸ್ ಬೀರೇಶ್(33) ಮತ್ತು ಎಸ್ ಸುರೇಶ್ (30) ಎಂದು ಗುರುತಿಸಲಾಗಿದೆ. ಇಬ್ಬರೂ ತಮ್ಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಕಟಾವಿಗೆ ಸಿದ್ಧವಾಗಿದ್ದ ಭತ್ತದ ಬೆಳೆಗೆ ಕಾವಲು ಕಾಯಲು ಸಹೋದರರಿಬ್ಬರು ಹೋಗಿದ್ದರು. ರಾತ್ರಿ ಗದ್ದೆಗೆ ಕಾವಲಿಗೆಂದು ಹೋಗಿದ್ದವರು ಬೆಳಗ್ಗೆ ಮನೆಗೆ ಬಾರದ ಕಾರಣ ಆತಂಕಗೊಂಡಿದ್ದ ಕುಟುಬಸ್ಥರು ಗದ್ದೆಗೆ ತೆರಳಿ ನೋಡಿದಾಗ, ಸಹೋದರರಿಬ್ಬರೂ ಅಲ್ಲೇ…

Read Full News

Ripponpete| ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಹೊಂದಿರಬೇಕು : ಮೂಲೆಗದ್ದೇ ಶ್ರೀಗಳು

ರಿಪ್ಪನ್ ಪೇಟೆ ಶ್ರೀ ನಂದಿ ಹಾಸ್ಪಿಟಲ್ ನಲ್ಲಿ  ಉಚಿತ ವೈದ್ಯರ ಸೇವಾ ತಪಾಸಣೆಗೆ ಚಾಲನೆ. ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಹೊಂದಿರಬೇಕು : ಅಭಿನವ ಚನ್ನಬಸವ ಸ್ವಾಮೀಜಿ ರಿಪ್ಪನ್ ಪೇಟೆ : ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಒತ್ತಡದ ಜೀವನವನ್ನು ನಡೆಸುತ್ತಿರುವ ಪ್ರತಿಯೊಬ್ಬರು. ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ ಉತ್ತಮ ಆರೋಗ್ಯವನ್ನು ಹೊಂದಿರಬೇಕು ಎಂದು ಶ್ರೀ ಸದಾನಂದ ಶಿವಯೋಗಾಶ್ರಮ ಮೂಲೆ ಗೆದ್ದೆ ಮಠದ ಶ್ರೀ ಅಭಿನವ ಚೆನ್ನಬಸವ ಸ್ವಾಮೀಜಿ ಹೇಳಿದರು. ಪಟ್ಟಣದ ಶ್ರೀ ನಂದಿ ಹಾಸ್ಪಿಟಲ್ ನಲ್ಲಿ ಉಚಿತ ವೈದ್ಯರ…

Read Full News

Ripponpete | ತೋಟ ಕಾಯಲು ಮಳವಳ್ಳಿಗೆ ಬಂದ ಸುಂದರಿಯರು..!!

Ripponpete | ತೋಟ ಕಾಯಲು ಮಳವಳ್ಳಿಗೆ ಬಂದ ಸುಂದರಿಯರು..!! ಆಹಾ ಈ ಬೆದರು ಗೊಂಬೆಗೆ ಜೀವ ಬಂದಂತಾಗಿದೆ ಎಂಬ ಗಾಳಿಪಟ ಚಿತ್ರದ ಭಟ್ಟರ ಹಾಡಿನ್ನು ನೆನಪಿಸುತ್ತದೆ ಈ ಸ್ಟೋರಿ,ನಾವುಗಳು ಇಷ್ಟು ದಿನ ತೋಟ ಹೊಲಗಳಿಗೆ ದೃಷ್ಟಿ ಆಗಬಾರದೆಂದು ದೇವರ ಹರಕೆ ಹಾಗೂ ಬೆದರು ಗೊಂಬೆಗಳನ್ನ ಇಟ್ಟಿದ್ದನ್ನ ಕಂಡಿದ್ದೇವೆ. ಇದೀಗ ವಿಭಿನ್ನವಾದ ಪ್ರಯೋಗಕ್ಕೆ ಶಿವಮೊಗ್ಗದ ರೈತ ಮುಂದಾಗಿದ್ದಾರೆ. ರಸ್ತೆ ಬದಿಯಲ್ಲಿರೋ ತಮ್ಮ ಬಾಳೆತೋಟಕ್ಕೆ ನಟಿಯರ ಫೋಟೋ ಹಾಕಿಸಿದ್ದಾರೆ.ದೃಷ್ಟಿಯ ತಲೆ ನೋವನ್ನು ಭಿನ್ನ ಪ್ರಯತ್ನದಿಂದ ಬೇರೆಡೆಗೆ ಸೆಳೆಯಲು ಮಳವಳ್ಳಿ ಗ್ರಾಮದ…

Read Full News

Accident | ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ – ಕಾರು ಚಾಲಕ ಗಂಭೀರ

ತುಂಗಾ ಕಾಲೇಜ್ ಸಮೀಪ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ – ಚಾಲಕನ ಸ್ಥಿತಿ ಗಂಭೀರ  ತೀರ್ಥಹಳ್ಳಿ : ಪಟ್ಟಣದ ತುಡಕಿ ಸಮೀಪದ ತುಂಗಾ ಕಾಲೇಜ್ ಸಮೀಪದಲ್ಲಿ ಶಿವಮೊಗ್ಗದಿಂದ ಬರುವ ಖಾಸಗಿ ಬಸ್ ಮತ್ತು ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಫಾರ್ಚುನರ್ ವಾಹನ ಮುಖಾಮುಖಿ ಡಿಕ್ಕಿಯಾಗಿದ ಘಟನೆ ನಡೆದಿದೆ. ಈ ಭೀಕರ ಅಪಘಾತದಲ್ಲಿ ಟೊಯೋಟಾ ಫಾರ್ಚುನರ್ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಚಾಲಕನಿಗೆ ಗಂಭೀರವಾಗಿ ಗಾಯವಾಗಿದೆ. ಫಾರ್ಚುನರ್ ವಾಹನದಲ್ಲಿ ತೀರ್ಥಹಳ್ಳಿಯ ಪ್ರಸಿದ್ಧ ಅಡಿಗೆ ಗುತ್ತಿಗೆದಾರರಾದ ಬಳಗಟ್ಟೆ ಶಾಂತಪ್ಪ ಮತ್ತು ಕುಟುಂಬದವರಿದ್ದರು…

Read Full News

Hosanagara | ಅಕ್ರಮ ಮರಳು ಸಾಗಿಸುತಿದ್ದ ಟಿಪ್ಪರ್ ಲಾರಿ ವಶಕ್ಕೆ – ಅಕ್ರಮ ಮರಳು ಮಾಫ಼ಿಯಾಕ್ಕೆ ಸಿಂಹಸ್ವಪ್ನವಾದ ಪಿಎಸ್‌ಐ ಶಿವಾನಂದ್

Hosanagara | ಅಕ್ರಮ ಮರಳು ಸಾಗಿಸುತಿದ್ದ ಟಿಪ್ಪರ್ ಲಾರಿ ವಶಕ್ಕೆ – ಮರಳು ಮಾಫ಼ಿಯಾಕ್ಕೆ ಸಿಂಹಸ್ವಪ್ನವಾದ ಪಿಎಸ್‌ಐ ಶಿವಾನಂದ್ ಹೊಸನಗರ : ಅಕ್ರಮವಾಗಿ ಮರಳು ಸಾಗಾಟ ನಡೆಸುತಿದ್ದ ಟಿಪ್ಪರ್ ವಾಹನವನ್ನು ಪಟ್ಟಣದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಪಿಎಸ್‌ಐ ಶಿವಾನಂದ್ ವೈ ಕೆ ರವರ ನೇತೃತ್ವ ಸಿಬ್ಬಂದಿಗಳ ತಂಡ ದಾಳಿ ನಡೆಸಿ ಟಿಪ್ಪರ್ (KA 17 F 2543) ಲಾರಿಯನ್ನು ವಶಕ್ಕೆ ಪಡೆದಿದ್ದಾರೆ ಅಕ್ರಮ ಮರಳು ದಂಧೆಕೋರರಿಗೆ ಸಿಂಹಸ್ವಪ್ನವಾಗಿರುವ…

Read Full News

Sagara | ನಿವೃತ್ತ ಮೆಸ್ಕಾಂ ಇಂಜಿನಿಯರ್ ಮನೆಗೆ ನುಗ್ಗಿ 9ಲಕ್ಷ ರೂ. ಮೌಲ್ಯದ ನಗನಗದು ದೋಚಿದ ಕಳ್ಳರು

Sagara | ನಿವೃತ್ತ ಮೆಸ್ಕಾಂ ಇಂಜಿನಿಯರ್ ಮನೆಗೆ ನುಗ್ಗಿ 9ಲಕ್ಷ ರೂ. ಮೌಲ್ಯದ ನಗನಗದು ದೋಚಿದ ಕಳ್ಳರು ಸಾಗರ : ಪಟ್ಟಣದ ವಿಜಯನಗರದ ಬಾಪಟ್ ಕಲ್ಯಾಣ ಮಂಟಪ ಹಿಂಭಾಗದ ರಸ್ತೆಯ ನಿವೃತ್ತ ಮೆಸ್ಕಾಂ ಇಂಜಿನಿಯರ್ ನಾಗರಾಜ್ ಎಂಬುವವರ ಮನೆಗೆ ನುಗ್ಗಿರುವ ಕಳ್ಳರು ಸುಮಾರು 9 ಲಕ್ಷ ರೂ. ಮೌಲ್ಯದ ನಗನಾಣ್ಯ ದೋಚಿರುವ ಘಟನೆಗೆ ಸಂಬಂಧಪಟ್ಟಂತೆ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿವೃತ್ತ ಮೆಸ್ಕಾಂ ಇಂಜಿನೀಯರ್ ನಾಗರಾಜ್ ಮತ್ತವರ ಕುಟುಂಬ ಕಾರ್ಯಕ್ರಮ ನಿಮಿತ್ತ ನ. 24ರಂದು ಸಿದ್ದಾಪುರ ಸಮೀಪದ…

Read Full News

ಮನೆಮನೆಗಳಿಗೆ ನೀರು ಕೊಡಿ ಇಲ್ಲವಾದರೆ ನೀರಿಲ್ಲದ ಜಾಗಕ್ಕೆ ಕಳುಹಿಸಬೇಕಾಗುತ್ತೆ – ಪಿಡಿಓಗಳಿಗೆ ಎಚ್ಚರಿಕೆ ನೀಡಿದ ಶಾಸಕ ಬೇಳೂರು| beluru

ಪಿಡಿಓಗಳಿಗೆ ಎಚ್ಚರಿಕೆ ನೀಡಿದ ಶಾಸಕ ಬೇಳೂರು……….. “ಮನೆಮನೆಗಳಿಗೆ ನೀರು ಕೊಡಿ ಇಲ್ಲವಾದರೆ ನೀರಿಲ್ಲದ ಜಾಗಕ್ಕೆ ಕಳುಹಿಸಬೇಕಾಗುತ್ತೆ’’ ರಿಪ್ಪನ್‌ಪೇಟೆ;-ಜಲಜೀವನ ಮಿಷನ್ ಯೋಜನೆಯಡಿ ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾಲುಗುಡ್ಡೆ ಗ್ರಾಮಕ್ಕೆ ೪೫ ಲಕ್ಷ ರೂ ಅನುಧಾನ ಬಿಡುಗಡೆಯಾಗಿದ್ದು ಬಹುದಿನಗಳ ಬೇಡಿಕೆಯಂತೆ ಈ ಗ್ರಾಮದಲ್ಲಿನ ಜನಸಾಮಾನ್ಯರು ಕುಡಿಯುವ ನೀರಿಗಾಗಿ ಪರದಾಡುವಂತಾಗಿತು ಈ ಯೋಜನೆಯನ್ವಯ ಕೇಂದ್ರ ಮತ್ತು ರಾಜ್ಯಸರ್ಕಾರದಿಂದ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದೆ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಗ್ರಾಮಸ್ಥರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದರು. ಅವರು ಸಮೀಪದ…

Read Full News

ಆನಂದಪುರದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಪ್ರಾಪ್ತನೊಂದಿಗೆ ಯುವತಿಯ ಅಶ್ಲೀಲ ನೃತ್ಯ – ವೀಡಿಯೋ ವೈರಲ್ | Viral video

ಆನಂದಪುರದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಪ್ರಾಪ್ತನೊಂದಿಗೆ ಯುವತಿಯ ಅಶ್ಲೀಲ ನೃತ್ಯ – ವೀಡಿಯೋ ವೈರಲ್ | Viral video ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಡೆದಿದೆ ಎನ್ನಲಾದ ಅಶ್ಲೀಲ ನೃತ್ಯದ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.  ಕರ್ನಾಟಕ ರತ್ನ ಡಾ ಪುನೀತ್ ರಾಜ್‍ಕುಮಾರ್ ಹೆಸರಿನ ಸಂಘಟನೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ದಲ್ಲಿ ಅರೆಬರೆ ಬಟ್ಟೆ ತೊಟ್ಟ ಯುವತಿಯನ್ನು ಕುಣಿಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.ಅದರಲ್ಲೂ ಅಪ್ರಾಪ್ತ ಬಾಲಕನನ್ನು ಬಳಸಿಕೊಂಡು ಅಶ್ಲೀಲ ಭಂಗಿಗಳಲ್ಲಿ…

Read Full News

Hosanagara | ಗೋಪೂಜೆಗಾಗಿ ಇಟ್ಟಿದ್ದ ಬಂಗಾರದ ಸರ ನುಂಗಿದ ಹಸು – ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಗೋಪೂಜೆಗಾಗಿ ಇಟ್ಟಿದ್ದ ಬಂಗಾರದ ಸರ ನುಂಗಿದ ಹಸು – ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ ಹೊಸನಗರ ಇಲ್ಲಿನ ಸಮೀಪದ ಮತ್ತಿಮನೆ  ಶ್ಯಾಮ್ ಉಡುಪ ಅವರ ಮನೆಯಲ್ಲಿ ದೀಪಾವಳಿ ಹಬ್ಬದ ಗೋ  ಪೂಜೆಯ ದಿನ ಪೂಜೆಯ ಜೊತೆಗೆ ಇರಿಸಿದ್ದ ಬಂಗಾರದ ಸರ ಕಾಣೆಯಾಗಿತ್ತು. ಪೂಜೆ ಮುಗಿದ ನಂತರ ಬಂಗಾರದ ಸರ ಕಾಣದೆ ಇದ್ದಾಗ ಪೂಜೆ ಮಾಡಿದ ಸ್ಥಳದ ಅಕ್ಕಪಕ್ಕ ಹಾಗೂ ಕೊಟ್ಟಿಗೆಯಲ್ಲಿ ಹುಡುಕಲಾಗಿತ್ತು ಎಷ್ಟೇ ಹುಡುಕಿದರು ಸರ ಸಿಗದ ಕಾರಣ ಹಸುವೇ ಪ್ರಸಾದ ಜೊತೆಗೆ ನುಂಗಿರಬಹುದೇ ಎಂದು ಸಂಶಯ ಪಟ್ಟಿದ್ದರು….

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.