Headlines

Ripponpete | ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸಿದ ಕಬ್ಬಡಿ ಕ್ರೀಡಾಪಟು ಗಗನ್ ಗೌಡನಿಗೆ ಸಂಸದ ಬಿ ವೈ ರಾಘವೇಂದ್ರರಿಂದ ಸನ್ಮಾನ

ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸಿದ ಕಬ್ಬಡಿ ಕ್ರೀಡಾಪಟು ಗಗನ್ ಗೌಡನಿಗೆ  ಸಂಸದ ಬಿ ವೈ ರಾಘವೇಂದ್ರರಿಂದ ಸನ್ಮಾನ ರಿಪ್ಪನ್‌ಪೇಟೆ : ರಾಷ್ಟ್ರಮಟ್ಟದ  ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ  ಮಲೆನಾಡಿಗೆ ಕೀರ್ತಿಯನ್ನು ತಂದ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಪ್ರೋ ಕಬ್ಬಡಿ ಹತ್ತನೇ ಸೀಸನ್ ನ ಯುಪಿ ಯೋಧ ತಂಡದ ಆಟಗಾರ ಯುವ ಪ್ರತಿಭೆ ಗಗನ್ ಗೌಡನಿಗೆ ಸಂಸದ ಬಿ. ವೈ. ರಾಘವೇಂದ್ರ ಗೌರವಿಸಿ ಸನ್ಮಾನಿಸಿದರು. ಪ್ರೋ ಕಬ್ಬಡಿ ಹತ್ತನೇ ಸೀಸನ್ ನಲ್ಲಿ ಯುಪಿ ಯೋಧ ತಂಡವನ್ನು ಪ್ರತಿನಿಧಿಸಿ 13 ಪಂದ್ಯಗಳಲ್ಲಿ 90…

Read Full News

ರಿಪ್ಪನ್‌ಪೇಟೆಯಲ್ಲಿ ಲೇಔಟ್‌ಗಳು ನಕಲಿ ದಾಖಲೆ ಸೃಷ್ಟಿಸಿ ನಿಯಮವನ್ನು ಉಲ್ಲಂಘಿಸಿದ್ದಾರೆಂಬ ಗ್ರಾಪಂ ಸದಸ್ಯರ ಆರೋಪಕ್ಕೆ ಸ್ಪಷ್ಟನೆ | Ripponpet

ರಿಪ್ಪನ್‌ಪೇಟೆಯಲ್ಲಿ ಲೇಔಟ್‌ಗಳು ನಕಲಿ ದಾಖಲೆ ಸೃಷ್ಟಿಸಿ ನಿಯಮವನ್ನು ಉಲ್ಲಂಘಿಸಿದ್ದಾರೆಂಬ ಗ್ರಾಪಂ ಸದಸ್ಯರ ಆರೋಪಕ್ಕೆ ಸ್ಪಷ್ಟನೆ ರಿಪ್ಪನ್‌ಪೇಟೆ;-ಇಲ್ಲಿನ ಗ್ರಾಮಪಂಚಾಯ್ತಿ ವಸತಿ ನಿವೇಶನ ಉದ್ದೇಶಕ್ಕಾಗಿ ಭೂಪರಿವರ್ತನೆಯನ್ನು ಮಾಡಿರುವ ಕೆಲವು ಲೇಔಟ್‌ಗಳು ನಿಯಮವನ್ನು ಉಲ್ಲಂಘಿಸಿದ್ದಾರೆಂಬ ಗ್ರಾಮ ಪಂಚಾಯ್ತಿ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ ಆರೋಪದಲ್ಲಿ ಯಾವುದೇ ಹುರುಳಿಲ್ಲ ಗ್ರಾಪಂ ಸದಸ್ಯನಾಗಿ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚಕಾರವೆತ್ತದೇ ಈಗ ಬಹಿರಂಗವಾಗಿ ಆರೋಪಿಸುತ್ತಿರುವುದು ಖಂಡನೀಯ ಎಂದು ಗ್ರಾಮ ಪಂಚಾಯ್ತಿ ಸದಸ್ಯ  ನಿರೂಪ್ ಕುಮಾರ್ ಹೇಳಿದರು. ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಗವಟೂರು ಗ್ರಾಮದ…

Read Full News

Ripponpete | ಪೋಲಿಯೊ ಮುಕ್ತ ಸಮಾಜ ನಿರ್ಮಾಣಕ್ಕೆ ಪೋಷಕರ ಸಹಕಾರ ಅಗತ್ಯ : ಧನಲಕ್ಷ್ಮಿ ಗಂಗಾಧರ್

ಪೋಲಿಯೊ ಮುಕ್ತ ಸಮಾಜ ನಿರ್ಮಾಣಕ್ಕೆ ಪೋಷಕರ ಸಹಕಾರ ಅಗತ್ಯ : ಧನಲಕ್ಷ್ಮಿ ಗಂಗಾಧರ್  ರಿಪ್ಪನ್ ಪೇಟೆ :- ಸಾರ್ವಜನಿಕರಲ್ಲಿ ಪಲ್ಸ್ ಪೋಲಿಯೋ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿಸಿ, ಪೋಲಿಯೋ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲ ಪೋಷಕರು  ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಹೇಳಿದರು  ಹೇಳಿದರು ಪಟ್ಟಣದ ಸರಕಾರಿ  ಆಸ್ಪತ್ರೆಯಲ್ಲಿ ಪಲ್ಸ್ ಪೊಲೀಯೊ ಕಾರ್ಯಕ್ರಮಕ್ಕೆ  ಚಾಲನೆ ನೀಡಿ ಮಾತನಾಡಿ ಪೋಲಿಯೋದಿಂದ…

Read Full News

ಅಜ್ಜ ಅಜ್ಜಿಯರ ಪಾದ ಪೂಜೆ ಮಾಡಿ ಸಂತಸಪಟ್ಟ ಮೊಮ್ಮಕ್ಕಳು – ಹೃದಯಸ್ಪರ್ಶಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯ್ತು ಸಮಟಗಾರು ಶಾಲೆ | SAMATAGARU

ಅಜ್ಜ ಅಜ್ಜಿಯರ ಪಾದ ಪೂಜೆ ಮಾಡಿ ಸಂತಸಪಟ್ಟ ಮೊಮ್ಮಕ್ಕಳು ಅಕ್ಷತೆಯನಿಕ್ಕಿ ಹರಸಿದ ಅಜ್ಜ ಅಜ್ಜಿಯರು ; ಹೃದಯಸ್ಪರ್ಶಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯ್ತು ಸಮಟಗಾರು ಶಾಲೆ ರಿಪ್ಪನ್‌ಪೇಟೆ : ಪ್ರತಿ ಮನೆಯ ಆಸ್ತಿ ಅಲ್ಲಿನ ಹಿರಿಯ ಜೀವಗಳು. ಸದಾ ಕಿರಿಯರ ಶ್ರೇಯೋಭಿವೃದ್ಧಿಯನ್ನು ಬಯಸುವ ಈ ಹಿರಿಯ ಜೀವಗಳಾದ ಅಜ್ಜ ಅಜ್ಜಿಯನ್ನು ಗೌರವಿಸುವ ಒಂದು ವಿನೂತನ ಕಾರ್ಯಕ್ರಮಕ್ಕೆ ಹೊಸನಗರ ತಾಲೂಕಿನ ಸ.ಹಿ.ಪ್ರಾಥಮಿಕ ಶಾಲೆ ಸಮಟಗಾರುವಿನಲ್ಲಿ ನಡೆಯಿತು. ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಜೊತೆ ನಡೆದ ಈ ಕಾರ್ಯಕ್ರಮದಲ್ಲಿ ಅಜ್ಜ ಅಜ್ಜಿಯರ…

Read Full News

ಹೊಸನಗರ ಅಗ್ನಿಶಾಮಕ ಠಾಣೆಯ ರಮೀಜ್’ರಾಜ ಶೇಖ್ ರವರಿಗೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಹಾಗೂ ಕಂಚಿನ ಪದಕ | Hosanagara

ಹೊಸನಗರ ಅಗ್ನಿಶಾಮಕ ಠಾಣೆಯ ರಮೀಜ್’ರಾಜ ಶೇಖ್ ರವರಿಗೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಹಾಗೂ ಕಂಚಿನ ಪದಕ ಹೊಸನಗರ : ಇಲ್ಲಿನ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ರಮೀಜ್’ರಾಜ ಶೇಖ್ ರವರಿಗೆ ಅಹ್ಮದಾಬಾದ್ ನಲ್ಲಿ ನಡೆದ ಎರಡನೇ ಆಲ್ ಇಂಡಿಯಾ ಫೈರ್ ಸರ್ವಿಸ್ ಅಂಡ್ ಫೈರ್ ಸರ್ವಿಸ್ ಸ್ಪೋರ್ಟ್ಸ್‌ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಬಡ್ಡಿ ಪಂದ್ಯಾವಳಿಯಲ್ಲಿ ಚಿನ್ನದ ಪದಕವನ್ನು ಹಾಗೂ 4X100 ಮೀಟರ್ಸ್ ರಿಲೇ ಓಟದಲ್ಲಿ ಕಂಚಿನ ಪದಕವನ್ನು ಗಳಿಸಿ ಮಲೆನಾಡಿನ ಕೀರ್ತಿಪತಾಕೆಯನ್ನು ಉತ್ತುಂಗಕ್ಕೇರಿಸಿದ್ದಾರೆ‌‌. ಅಗ್ನಿಶಾಮಕ ಮತ್ತು ತುರ್ತು ಸೇವಾ ಮಹಾ…

Read Full News

ರಿಪ್ಪನ್‌ಪೇಟೆಯಲ್ಲಿ ಭೂ ದಲ್ಲಾಳಿಗಳಿಂದ ಲೇಔಟ್ ಮಾಫಿಯ : ಗ್ರಾಪಂ ಸದಸ್ಯನಿಂದಲೇ ಗಂಭೀರ ಆರೋಪ

ರಿಪ್ಪನ್‌ಪೇಟೆಯಲ್ಲಿ ಭೂ ದಲ್ಲಾಳಿಗಳಿಂದ ಲೇಔಟ್ ಮಾಫಿಯ : ಗ್ರಾಪಂ ಸದಸ್ಯನಿಂದಲೇ ಗಂಭೀರ ಆರೋಪ ರಿಪ್ಪನ್ ಪೇಟೆ : ಪಟ್ಟಣದಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮ ಲೇಔಟ್ ನಿರ್ಮಾಣವಾಗುತಿದ್ದು ಈ ಮಾಫಿಯಾದಲ್ಲಿ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಪಟ್ಟಣದ ಗ್ರಾಪಂ ಹಿರಿಯ ಸದಸ್ಯ ಜಿ ಡಿ ಮಲ್ಲಿಕಾರ್ಜುನ ಗಂಭೀರ ಆರೋಪ ಮಾಡಿದ್ದಾರೆ. ಪಟ್ಟಣದ ಗ್ರಾಪಂ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರಿಪ್ಪನ್ ಪೇಟೆ ಪಟ್ಟಣವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಳಷ್ಟು ಬೆಳೆಯುತ್ತಿರುವುದರಿಂದ ನಗರ ಭಾಗದಲ್ಲಿ…

Read Full News

ಕಿಮ್ಮನೆ ರತ್ನಾಕರ್ ಗೆ ಅಪಮಾನ : ರೈತ ಮಹಿಳೆ ವಿರುದ್ಧ ದೂರು ದಾಖಲು | Thirthahalli

ಕಿಮ್ಮನೆ ರತ್ನಾಕರ್ ಗೆ ಅಪಮಾನ : ರೈತ ಮಹಿಳೆ ವಿರುದ್ಧ ದೂರು ದಾಖಲು ತೀರ್ಥಹಳ್ಳಿ : ಪಟ್ಟಣದ ಸಮೀಪದ ಭೀಮನಕಟ್ಟೆಯಲ್ಲಿ ತುಂಗಾನದಿ ತೀರದ ಆಲಗೇರಿ ಎಂಬಲ್ಲಿ ಬಹುಗ್ರಾಮ ನೀರು ಸರಬರಾಜು ಯೋಜನೆಯ ಶುದ್ದೀಕರಣ ಘಟಕದ ಕಾಮಗಾರಿ ನಡೆಯುತ್ತಿದೆ. ಶಾಸಕ ಆರಗ ಜ್ಞಾನೇಂದ್ರ ಇವರ ಉಸ್ತುವಾರಿಯಲ್ಲಿ ನ್ಯಾಷನಲ್ ಕನ್‌ಸ್ಟಕ್ಷನ್‌ ಸಂಸ್ಥೆ ಈ ಕಾಮಗಾರಿಯನ್ನು ನಿರ್ವಹಿಸುತ್ತಿದೆ. ಈ ಕಾಮಗಾರಿಯನ್ನು ಇಲ್ಲಿನ ಸ್ಥಳೀಯ ಕೆಲವು ಸಂಘಟನೆಗಳು ವಿರೋಧಿಸುತ್ತಿವೆ. ಈ ಸಂಬಂಧ ಫೆಬ್ರವರಿ 26ರಂದು ಹೆಗ್ಗೋಡು ಶಾಲಾ ಮುಂಭಾಗ ಪ್ರತಿಭಟನೆಗಳು ನಡೆದಿವೆ. ಈ…

Read Full News

Ripponpete | ಶ್ರೀ ಸಿದ್ದಿವಿನಾಯಕ ದೇವಸ್ಥಾನದ ರಥ ನಿರ್ಮಾಣಕ್ಕೆ ಸ್ನೇಹ ಬಳದಿಂದ ದೇಣಿಗೆ

Ripponpete | ಶ್ರೀ ಸಿದ್ದಿವಿನಾಯಕ ದೇವಸ್ಥಾನದ ರಥ ನಿರ್ಮಾಣಕ್ಕೆ ಸ್ನೇಹ ಬಳದಿಂದ ದೇಣಿಗೆ ರಿಪ್ಪನ್‌ಪೇಟೆ : ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ದೇವಸ್ಥಾನದಲ್ಲಿ ರಥ ನಿರ್ಮಾಣಕ್ಕೆ ಇಲ್ಲಿನ ಸರ್ಕಾರಿ ಪ್ರೌಢಶಾಲೆಯ 1995-96 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸ್ನೇಹ ಬಳಗದ ವತಿಯಿಂದ ದೇಣಿಗೆ ನೀಡಲಾಯಿತು. ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ನೆರವೇರಿಸುವ ಹಿನ್ನಲೆಯಲ್ಲಿ ಸುಮಾರು 31 ಲಕ್ಷ ರೂ ವೆಚ್ಚದ ರಥ ನಿರ್ಮಾಣಕ್ಕೆ ಸಿದ್ಧತೆ ನಡೆಯುತಿದ್ದು ಈ ಹಿನ್ನಲೆಯಲ್ಲಿ ಇಂದು ದೇವಸ್ಥಾನದ ಆವರಣದಲ್ಲಿ…

Read Full News

ಈಡಿಗ ಸಮಾಜಕ್ಕೆ ಬಿ.ಎಸ್ ಯಡಿಯೂರಪ್ಪ ನೀಡಿದ ಕೊಡುಗೆ ಅಪಾರ: ಹರತಾಳು ಹಾಲಪ್ಪ | Thirthahalli

ಈಡಿಗ ಸಮಾಜಕ್ಕೆ ಬಿ.ಎಸ್ ಯಡಿಯೂರಪ್ಪ ನೀಡಿದ ಕೊಡುಗೆ ಅಪಾರ: ಹರತಾಳು ಹಾಲಪ್ಪ ತೀರ್ಥಹಳ್ಳಿ : ಸಾಗರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ .ಯಡಿಯೂರಪ್ಪನವರಿಗೆ ಈಡಿಗ ನಾಮಧಾರಿ, ಬಿಲ್ಲವ, ದೀವರು ಹಾಗೂ 26 ಪಂಗಡಗಳ ವತಿಯಿಂದ ಮಾ. 5, ರಂದು ಅದ್ದೂರಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಹರತಾಳು ಹಾಲಪ್ಪ ಹೇಳಿದರು. ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಈಡಿಗ ಸಮಾಜಕ್ಕೆ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ…

Read Full News

81ನೇ ವಸಂತಕ್ಕೆ ಕಾಲಿಟ್ಟ ಬಿ.ಎಸ್. ಯಡಿಯೂರಪ್ಪ – ಹುಟ್ಟುಹಬ್ಬದ ಅಂಗವಾಗಿ ರಿಪ್ಪನ್‌ಪೇಟೆ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ

81ನೇ ವಸಂತಕ್ಕೆ ಕಾಲಿಟ್ಟ ಬಿ.ಎಸ್. ಯಡಿಯೂರಪ್ಪ – ಹುಟ್ಟುಹಬ್ಬದ ಅಂಗವಾಗಿ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ರಿಪ್ಪನ್‌ಪೇಟೆ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜನ್ಮದಿನದ ಅಂಗವಾಗಿ ಪಟ್ಟಣದ ಬಿಜೆಪಿ ಮಹಾಶಕ್ತಿ ಕೇಂದ್ರ ವತಿಯಿಂದ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರಿಗೆ ಆರೋಗ್ಯ ಮತ್ತು ರಾಜಕೀಯವಾಗಿ ಇನ್ನೂ ಹೆಚ್ಚಿನ ಶಕ್ತಿ ಕರುಣಿಸಲೆಂದು ವಿನಾಯಕ ಸ್ವಾಮಿಯಲ್ಲಿ ಪ್ರಾರ್ಥಿಸಿದರು. ಈ ಸಂಧರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಮತ್ತು ಸದಸ್ಯರು ,ಕಾರ್ಯಕರ್ತರು ಹಾಗೂ ಅಭಿಮಾನಿಗಳು ಇದ್ದರು. 81ನೇ ವಸಂತಕ್ಕೆ ಕಾಲಿಟ್ಟ…

Read Full News

ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಳೆ (28-02-2024) ವಿದ್ಯುತ್ ವ್ಯತ್ಯಯ! ಎಲ್ಲೆಲ್ಲಿ ಗೊತ್ತಾ..?? ಈ ಸುದ್ದಿ ನೋಡಿ

ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಳೆ (28-02-2024) ವಿದ್ಯುತ್ ವ್ಯತ್ಯಯ ರಿಪ್ಪನ್ ಪೇಟೆ : ಪಟ್ಟಣ ಹಾಗೂ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಳೆ 28/02/24 ರಂದು ಬೆಳಿಗ್ಗೆ 09-30 ರಿಂದ ಸಂಜೆ 04 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ರಿಪ್ಪನ್‌ಪೇಟೆ ಪಟ್ಟಣದ ಸಾಗರ ರಸ್ತೆಯಲ್ಲಿ ರಸ್ತೆ ಅಗಲಿಕರಣವಾಗುತ್ತಿರುವ ಹಿನ್ನಲೆಯಲ್ಲಿ ಲೈಟ್ ಕಂಬಗಳನ್ನು ಶಿಫ್ಟ್ ಮಾಡುವ ಕಾಮಗಾರಿಯಿರುವ ಹಿನ್ನಲೆಯಲ್ಲಿ ರಿಪ್ಪನ್‌ಪೇಟೆ ಪಟ್ಟಣ ,ಹೆದ್ದಾರಿಪುರ ,ಜಂಬಳ್ಳಿ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಇಲಾಖೆ ತಿಳಿಸಿದೆ. ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ…

Read Full News

Ripponpete | ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸಿದ ಕ್ರೀಡಾಪಟುಗಳಿಗೆ ರಿಪ್ಪನ್ ಪೇಟೆಯಲ್ಲಿ ಅದ್ದೂರಿ ಸನ್ಮಾನ

ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸಿದ  ಕ್ರೀಡಾಪಟುಗಳಿಗೆ ರಿಪ್ಪನ್ ಪೇಟೆಯಲ್ಲಿ ಅದ್ದೂರಿ ಸನ್ಮಾನ ರಿಪ್ಪನ್‌ಪೇಟೆ : ರಾಷ್ಟ್ರಮಟ್ಟದ  ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ  ಮಲೆನಾಡಿಗೆ ಕೀರ್ತಿಯನ್ನು ತಂದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ    ಪ್ರೋ ಕಬ್ಬಡಿ ಹತ್ತನೇ ಸೀಸನ್ ನ ಯುಪಿ ಯೋಧ ತಂಡದ ಆಟಗಾರ ಯುವ ಪ್ರತಿಭೆ ಗಗನ್ ಗೌಡ ಹಾಗೂ ಖೇಲೋ ಇಂಡಿಯಾ ಕಬ್ಬಡಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದ ಪ್ರಜ್ವಲ್ ಶ್ರೀಧರ್ ರವರಿಗೆ  ಅದ್ದೂರಿ ಸ್ವಾಗತ ಕೋರಲಾಯಿತು. ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸಿ…

Read Full News

ರಿಪ್ಪನ್‌ಪೇಟೆಗೆ ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್ ಭೇಟಿ – ನಾಗರೀಕರಿಂದ ಅದ್ದೂರಿ ಸ್ವಾಗತ |UTK

ರಿಪ್ಪನ್‌ಪೇಟೆಗೆ ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್ ಭೇಟಿ – ನಾಗರೀಕರಿಂದ ಅದ್ದೂರಿ ಸ್ವಾಗತ |UTK ರಿಪ್ಪನ್‌ಪೇಟೆ : ಪಟ್ಟಣಕ್ಕೆ ಆಗಮಿಸಿದ ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್ ರವರಿಗೆ ವಿನಾಯಕ ವೃತ್ತದಲ್ಲಿ ನಾಗರೀಕರು ಅದ್ದೂರಿಯಾಗಿ ಸ್ವಾಗತಿಸಿದರು. ಖಾಸಗಿ ಕಾರ್ಯಕ್ರಮದ ಅಂಗವಾಗಿ ಸಾಗರಕ್ಕೆ ಭೇಟಿ ನೀಡಿ ಹಿಂದಿರುಗುವಾಗ ಮಾರ್ಗ ಮಧ್ಯದಲ್ಲಿ ಪಟ್ಟಣದ ನಾಗರೀಕರು ಹಾರ ತುರಾಯಿಗಳ ಮೂಲಕ ಅದ್ದೂರಿ ಸ್ವಾಗತ ಕೋರಿದರು. ಈ ಸಂಧರ್ಭದಲ್ಲಿ ನಾಗರೀಕರೊಂದಿಗೆ ಸರಳ ಸಜ್ಜನಿಕೆಯಿಂದ ಮಾತನಾಡಿದ ಅವರು ವಿಧಾನಸಭಾ ಕಲಾಪ ವೀಕ್ಷಣೆಗೆ ಆಗಮಿಸಿ…

Read Full News

ಬದುಕಿನಲ್ಲಿ ಸದ್ಗುಣಗಳನ್ನು ಆಳವಡಿಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿಯಾಗಲು ಸಾಧ್ಯ : ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ | Malali shri

ಬದುಕಿನಲ್ಲಿ ಸದ್ಗುಣಗಳನ್ನು ಆಳವಡಿಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿಯಾಗಲು ಸಾಧ್ಯ : ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ರಿಪ್ಪನ್‌ಪೇಟೆ;-ಬದುಕಿನಲ್ಲಿ ಸದ್ಗುಣಗಳನ್ನು ಆಳವಡಿಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿಯಾಗಲು ಸಾಧ್ಯ ಬದುಕಿನಲ್ಲಿ ಬಂದದೆಲ್ಲ ಬರಲಿ ಎನ್ನುವುದು ಸಹಜ ಸೂತ್ರ.ಏನು ಬರಬೇಕು ಎಂದು ತೀರ್ಮಾನಿಸಿ ಸೃಷ್ಠಿಕೊಳ್ಳುವುದು  ನಿಜವಾದ ಸಾಧನೆ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು. ಪಟ್ಟಣದ ಸಮೀಪದ ಮಳವಳ್ಳಿ ಶ್ರೀಮಹಾಲಿಂಗೇಶ್ವರ ಮತ್ತು ಬಸವಣ್ಣ ದೇವಸ್ಥಾನದ ನೂತನ ಕಟ್ಟಡದ ಲೋಕಾರ್ಪಣೆ ಮತ್ತು ಶ್ರೀ ಮಹಾಲಿಂಗೇಶ್ವರ ಶ್ರೀಬಸವಣ್ಣ ದೇವರುಗಳ ಪುನರ್ ಪ್ರತಿಷ್ಟಾಪನಾ ಧರ್ಮ ಸಮಾರಂಭದ…

Read Full News

ಯಾವೊಬ್ಬ ರೈತನನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ – ಹೊಸದಾಗಿ ಅರಣ್ಯ ಕಡಿಯಬೇಡಿ : ಶಾಸಕ ಬೇಳೂರು ಗೋಪಾಲಕೃಷ್ಣ | Belluru

ಯಾವೊಬ್ಬ ರೈತನನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ – ಹೊಸದಾಗಿ ಅರಣ್ಯ ಕಡಿಯಬೇಡಿ : ಶಾಸಕ ಬೇಳೂರು ಗೋಪಾಲಕೃಷ್ಣ | Belluru ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಯಾವೊಬ್ಬ ರೈತ ನನ್ನೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಎರಡು ಹೊತ್ತಿನ ಗಂಜಿಗೆ ದಾರಿಮಾಡಿಕೊಂಡಿರುವ ರೈತರು ಹೆದರುವ ಅವಶ್ಯಕತೆ ಇಲ್ಲ. ಆದರೆ ಹೊಸದಾಗಿ ಅರಣ್ಯವನ್ನು ಕಡಿಯಬೇಡಿ ಎಂದಷ್ಟೇ ನನ್ನ ಮನವಿ ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿದರು. ಹೊಸನಗರ ತಾಲೂಕಿನ…

Read Full News

6.12 ಕೋಟಿ ವೆಚ್ಚದ ಜಲಜೀವನ್ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ

6.12 ಕೋಟಿ ವೆಚ್ಚದ ಜಲಜೀವನ್ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ರಿಪ್ಪನ್‌ಪೇಟೆ;- ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ೬.೧೨ ಕೋಟಿ ರೂಪಾಯಿ ವೆಚ್ಚದ ಜಲಜೀವನ್ ಯೋಜನೆ ಕಾಮಗಾರಿಗೆ ಶಾಸಕ ಹಾಗೂ ರಾಜ್ಯ ಅರಣ್ಯ ಮತ್ತು ಕೈಗಾರಿಕಾಭಿವೃಧ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ  ಬೇಳೂರು ಜಲಜೀವನ್ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಶಾಸಕ ಗೋಪಾಲಕೃಷ್ಣ ಬೇಳೂರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಘೋಷಿಸಿದಂತೆ…

Read Full News

ಬಟ್ಟೆಮಲ್ಲಪದಲ್ಲಿ ಶ್ರೀ ನಾರಾಯಣ ಗುರು ಮಂದಿರವನ್ನು ವಿರೂಪಗೊಳಿಸಿ ಬ್ಯಾನರ್ ಕಿತ್ತುಹಾಕಿದ ಕಿಡಿಗೇಡಿಗಳು – ದೂರು ದಾಖಲು | Hosanagara

ಬಟ್ಟೆಮಲ್ಲಪದಲ್ಲಿ ಶ್ರೀ ನಾರಾಯಣ ಗುರು ಮಂದಿರವನ್ನು ವಿರೂಪಗೊಳಿಸಿ ಬ್ಯಾನರ್ ಕಿತ್ತುಹಾಕಿದ ಕಿಡಿಗೇಡಿಗಳು – ದೂರು ದಾಖಲು ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಬಟ್ಟೆಮಲ್ಲಪ್ಪ ಗ್ರಾಮದ ಪುರಾತನ ಪ್ರಸಿದ್ದ ಶ್ರೀ ನಾರಾಯಣ ಗುರು ಮಂದಿರವನ್ನು ಕಿಡಿಗೇಡಿಗಳು ಜೆಸಿಬಿಯಿಂದ ಧ್ವಂಸಗೊಳಿಸಿ, ಬ್ಯಾನರ್ ನ್ನು ಕಿತ್ತು ಹಾಕಿರುವ ಘಟನೆ ನಡೆದಿದೆ. ಬಟ್ಟೆಮಲ್ಲಪ್ಪ ಗ್ರಾಮದ ಐದಾರು ದಶಕಗಳ ಹಿಂದಿನ ಶ್ರೀ ನಾರಾಯಣ ಗುರು ಸಮಿತಿಗೆ ಸೇರಿದ ಮಂದಿರದ ಹಳೆಯ ಅಡಿಪಾಯನ್ನು ವಿರೂಪಗೊಳಿಸಿ ವಿಕೃತಿ ಮೆರೆದಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಈ ಬಗ್ಗೆ…

Read Full News

ದ್ವಿಚಕ್ರ ವಾಹನ ಸವಾರರ ಮೇಲೆ ಏಕಾಏಕಿ ಜೇನುನೊಣಗಳ ದಾಳಿ – ಹತ್ತಕ್ಕೂ ಹೆಚ್ಚು ಮಂದಿಗೆ ಗಾಯ,ಓರ್ವ ಗಂಭೀರ | bee bite

ದ್ವಿಚಕ್ರ ವಾಹನ ಸವಾರರ ಮೇಲೆ ಏಕಾಏಕಿ ಜೇನುನೊಣಗಳ ದಾಳಿ – ಹತ್ತಕ್ಕೂ ಹೆಚ್ಚು ಮಂದಿಗೆ ಗಾಯ,ಓರ್ವ ಗಂಭೀರ | bee ಬಿತೆ ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಮೂಗೂಡ್ತಿಯಲ್ಲಿ ದಿಢೀರ್ ಜೇನುನೊಣಗಳ ದಾಳಿಯಿಂದ ಹತ್ತಕ್ಕೂ ಅಧಿಕ ಜನರು ಅಸ್ವಸ್ಥರಾಗಿ, ಓರ್ವನಿಗೆ ಗಂಭೀರ ಗಾಯಗೊಂಡಿರುವ ನಡೆದಿದೆ. ಮೂಗೂಡ್ತಿ ಗ್ರಾಮದಲ್ಲಿ ಜೇನು ನೊಣಗಳ ದಾಳಿಯಿಂದ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತಿದ್ದ ಪ್ರಯಾಣಿಕರು ಹಾಗೂ ಪಾದಚಾರಿಗಳ ಮೇಲೆ ಜೇನು ನೊಣ ಏಕಾಏಕಿ ದಾಳಿ ನಡೆಸಿದೆ. ಘಟನೆಯಲ್ಲಿ ತಳಲೆ ಗ್ರಾಮದ ಮಂಜುನಾಥ ,ಲೋಹಿತ್ ,…

Read Full News

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರೌಡಿ ಪರೇಡ್ | Rpet

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರೌಡಿ ಪರೇಡ್ | Rpet ರಿಪ್ಪನ್‌ಪೇಟೆ : 2024ರ ಲೋಕಸಭೆ ಚುನಾವಣೆ ಹಿನ್ನೆಲೆ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸ್ ಠಾಣಾ ಆವರಣದಲ್ಲಿ ಪಿಎಸ್‌ಐ ಕೆ ವೈ ನಿಂಗರಾಜು ನೇತೃತ್ವದಲ್ಲಿಂದು ರೌಡಿ ಪರೇಡ್ ನಡೆಸಲಾಯಿತು. ಅಪರಾಧ ಕೃತ್ಯಗಳಲ್ಲಿ ತೊಡಗಿ ಸಮಾಜದ ಸ್ವಾಸ್ಥ್ಯ ಹದಗೆಡಿಸುವ ಕೆಲಸ ಮಾಡುವುದನ್ನ ಬಿಟ್ಟು ಸಾಮಾನ್ಯ ನಾಗರಿಕರಂತೆ ಸನ್ನಡೆತೆಯಿಂದ ಬದುಕಬೇಕು. ಇಲ್ಲವಾದಲ್ಲಿ ಇನ್ನಷ್ಟು ಕಠಿಣ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದು ರೌಡಿಶೀಟರ್ ಗಳಿಗೆ ಪಿಎಸ್‌ಐ…

Read Full News

Ripponpete | ಶಾಸಕ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ

Ripponpete | ಶಾಸಕ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ರಿಪ್ಪನ್‌ಪೇಟೆ : ಶಾಸಕ ಬೇಳೂರು ಗೋಪಾಲಕೃಷ್ಣ ರವರ ಹುಟ್ಟುಹಬ್ಬವನ್ನು ಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವೈಶಿಷ್ಟ್ಯ ಪೂರ್ಣವಾಗಿ ಆಚರಿಸಿದರು. ಪಟ್ಟಣದ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಪಕ್ಷದ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ನಂತರ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ತೆರಳಿ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಜೊತೆಗೆ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಶಾಸಕ ಬೇಳೂರು…

Read Full News

Ripponpete | ವಾರದ ಸಂತೆ ಮೀರಿಸಿದ ಹಾರೋಹಿತ್ಲು ಸರ್ಕಾರಿ ಶಾಲೆಯ ಮಕ್ಕಳ ಸಂತೆ

ವಾರದ ಸಂತೆ ಮೀರಿಸಿದ ಹಾರೋಹಿತ್ಲು ಶಾಲೆಯ ಮಕ್ಕಳ ಸಂತೆ ರಿಪ್ಪನ್ ಪೇಟೆ :ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೋಹಿತ್ತಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆಯನ್ನು  ಬುಧವಾರ ಆಯೋಜಿಸಲಾಗಿತ್ತು. ತರಕಾರಿಯನ್ನು ಒಳಗೊಂಡಂತೆ ವಿವಿಧ ವಸ್ತುಗಳ ಮಾರಾಟ ಮಾಡುವಲ್ಲಿನ ಮಕ್ಕಳ ಕೌಶಲ್ಯ ಯಾವುದೇ ವ್ಯಾಪಾರಸ್ಥನ ಸಾಮರ್ಥ್ಯಕ್ಕಿಂತ ಕಡಿಮೆ ಏನು ಇರಲಿಲ್ಲ. ತಾವು ಖರೀದಿಗಿಟ್ಟ ವಸ್ತುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಎಲ್ಲ ಕೌಶಲಗಳು ನೈಜ ಸಂತೆಯನ್ನು ಮೀರಿಸುವಂತೆ ನಡೆಯುವ ಮೂಲಕ ಈ ಅಪರೂಪದ  ಮಕ್ಕಳ ಸಂತೆ…

Read Full News

ಕೊಲೆ ಆರೋಪಿಯ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ – ಮಗನ ತಪ್ಪಿಗೆ ಅಮ್ಮ, ಸಹೋದರಿಗೆ ಬಹಿಷ್ಕಾರದ ಶಿಕ್ಷೆ..!!?|Prime News

ಕೊಲೆ ಆರೋಪಿಯ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ – ಮಗನ ತಪ್ಪಿಗೆ ಅಮ್ಮ, ಸಹೋದರಿಗೆ ಬಹಿಷ್ಕಾರದ ಶಿಕ್ಷೆ..!!? ಸೊರಬ ತಾಲ್ಲೂಕಿನ ಕುರುವಳ್ಳಿಯಲ್ಲಿ ಮಗ ಮಾಡಿದ ತಪ್ಪಿಗೆ ಸಹೋದರಿ ಮತ್ತು ತಾಯಿ ಗ್ರಾಮಸ್ಥರಿಂದ ಬಹಿಷ್ಕಾರ ಶಿಕ್ಷೆಗೊಳಗಾದ ಆರೋಪ ಕೇಳಿಬಂದಿದೆ. ತಮಗೆ ನ್ಯಾಯ ಕೊಡಿಸುವಂತೆ ಸಂತ್ರಸ್ತರು ಮಂಗಳವಾರ ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ. ಎರಡು ವರ್ಷಗಳ ಹಿಂದೆ ಭೂಮಿ ಹುಣ್ಣಿಮೆ ದಿನ ಸೊರಬದ ಕುರುವಳ್ಳಿ ಗ್ರಾಮದಲ್ಲಿ ಅಪಘಾತ ನಡೆದು ಟಿವಿಎಸ್ ಸವಾರ ಮಂಜುನಾಥ್ ಸಾವನ್ನಪ್ಪಿದ್ದರು. ಆದರೆ ತನಿಖೆಯ ವೇಳೆ ಪ್ರಕರಣ ತಿರುವು ಪಡೆದು ಅದು ಅಪಘಾತವಲ್ಲ…

Read Full News

ಹೊಸನಗರ ತಾಲೂಕ್ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಎಂ ಬಿ ಲಕ್ಷ್ಮಣಗೌಡ ಆಯ್ಕೆ | Rpet

ಹೊಸನಗರ ತಾಲೂಕ್ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಎಂ ಬಿ ಲಕ್ಷ್ಮಣಗೌಡ ಆಯ್ಕೆ | Rpet ರಿಪ್ಪನ್ ಪೇಟೆ : ಹೊಸನಗರ ತಾಲೂಕು ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ರಿಪ್ಪನ್‌ಪೇಟೆಯ ಎಂ. ಬಿ ಲಕ್ಷ್ಮಣಗೌಡ ಆಯ್ಕೆಯಾಗಿದ್ದಾರೆ. 19 ಜನ ನಿರ್ದೇಶಕರನ್ನು ಹೊಂದಿರುವ ಹೊಸನಗರ ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಇತ್ತೀಚೆಗೆ ನಡೆದಿತ್ತು.ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದರು.17 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಂ.ಬಿ ಲಕ್ಷ್ಮಣಗೌಡ ನೇತ್ರತ್ವದ ತಂಡದಿಂದ ಕಣಕ್ಕಿಳಿದ ಅಭ್ಯರ್ಥಿಗಳು 17 ಸ್ಥಾನಗಳಲ್ಲಿಯೂ ಭರ್ಜರಿ ಜಯಭೇರಿ ಗಳಿಸಿದ್ದರು….

Read Full News

Ripponpete | ಛತ್ರಪತಿ ಶಿವಾಜಿ ಮಹಾರಾಜರ ವ್ಯಕ್ತಿತ್ವ ವಿಶ್ವಕ್ಕೆ ಮಾದರಿ – ಸುಂದರೇಶ್

Ripponpete | ಛತ್ರಪತಿ ಶಿವಾಜಿ ಮಹಾರಾಜರ ವ್ಯಕ್ತಿತ್ವ ವಿಶ್ವಕ್ಕೆ ಮಾದರಿ – ಸುಂದರೇಶ್ ರಿಪ್ಪನ್‌ಪೇಟೆ : ಛತ್ರಪತಿ ಶಿವಾಜಿ ಮಹಾರಾಜರ ವ್ಯಕ್ತಿತ್ವ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಮಾದರಿ. ಭಾರತೀಯರ ಕಣ ಕಣದಲ್ಲೂ ಶಿವಾಜಿಯ ಆದರ್ಶ ಗುಣಗಳು ಕರಗತವಾಗಬೇಕು. ಸಂಸ್ಕಾರಯುತ ಸಮಾಜದ ನಿರ್ಮಾಣದಲ್ಲಿ ಶಿವಾಜಿಯ ಹೋರಾಟದೊಂದಿಗೆ ಆತನಿಗೆ ಸ್ಫೂರ್ತಿ ನೀಡಿದ್ದ ತಾಯಿ ಜೀಜಾಬಾಯಿಯ ಕೊಡುಗೆಯೂ ಸ್ಮರಣೀಯ ಎಂದು ರಿಪ್ಪನ್‌ಪೇಟೆ ಗ್ರಾಪಂ ಸದಸ್ಯರು ಹಾಗೂ ಮರಾಠ ಸಮಾಜದ ಪ್ರಮುಖರಾದ ಸುಂದರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಇಂದು ಪಟ್ಟಣದ ಸಾಗರ…

Read Full News

Ripponpete | ವಡಗೆರೆಯ ಶ್ರೀತುಳಜಾಭವಾನಿ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ

ripponpete | ವಡಗೆರೆಯ ಶ್ರೀ ತುಳಜಾಭವಾನಿ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ರಿಪ್ಪನ್‌ಪೇಟೆ;-ಇಲ್ಲಿಗೆ ಸಮೀಪದ ವಡಗೆರೆ ಶ್ರೀ ತುಳುಜಾಭವಾನಿ ದೇವಸ್ಥಾನ ಸೇವಾ ಸಮಿತಿ ಇವರು ದೇವಸ್ಥಾನದ ಏಳನೇ ವರ್ಷದ ಶ್ರೀ ತುಳಜಾಭವಾನಿ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮವನ್ನು ಫೆಬ್ರವರಿ 20 ರಂದು ಮಂಗಳವಾರ ಅಯೋಜಿಸಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫಬ್ರವರಿ 20 ರಂದು ಮಂಗಳವಾರ ಬೆಳಗ್ಗೆ 8 ಗಂಟೆಗೆ ಶ್ರೀ ದೇವಿಗೆ ಕಲಾತತ್ವದಿವಾಸ ಹೋಮ ಶ್ರೀ ದುರ್ಗಾ ಹೋಮ ಕಲಶಾಭಿಷೇಕ ಮಹಾಪೂಜೆ ಮಹಾಮಂಗಳಾರತಿ ಪ್ರಸಾದ…

Read Full News

ರಿಪ್ಪನ್‌ಪೇಟೆ ಪಟ್ಟಣದಾದ್ಯಂತ ಕೈ ಕೊಟ್ಟ ಏರ್‌ಟೆಲ್ ನೆಟ್‌ವರ್ಕ್, ಪರದಾಡಿದ ಗ್ರಾಹಕ | Rpet

ರಿಪ್ಪನ್‌ಪೇಟೆ : ಕೈ ಕೊಟ್ಟ ಏರ್‌ಟೆಲ್ ನೆಟ್‌ವರ್ಕ್, ಪರದಾಡಿದ ಗ್ರಾಹಕ ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಏರ್ ಟೆಲ್ ನೆಟ್ ವರ್ಕ್ ಕೈಕೊಟ್ಟಿತ್ತು. ಜನರು ತಮ್ಮ ತಮ್ಮವರಿಗೆ ಕರೆ ಮಾಡಲು ಮೊಬೈಲ್ ಕೈಯಲ್ಲಿ ಹಿಡಿದರೆ ನೆಟ್ ವರ್ಕ್ ಇಲ್ಲದೆ ಪರದಾಡಬೇಕಾಯಿತು. ಅಂಗ್ಯೆಯಲ್ಲಿ ವಿಶ್ವ ಎನ್ನುವ ಪ್ರಧಾನಿ‌ ಮೋದಿಯವರ ಪರಿಕಲ್ಪನೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ನುಚ್ಚುನೂರು ಮಾಡುತ್ತಿದೆ ಏರ್ಟೆಲ್ ನೆಟ್ವರ್ಕ್… ಮಧ್ಯಾಹ್ನದವರೆಗೂ ಏರ್ ಟೆಲ್ ಕಂಪನಿಯ ಮೊಬೈಲ್ ಗಳ ಸಿಗ್ನಲ್ ಸಿಗಲಿಲ್ಲ. ಇದರಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ರಸ್ತೆಯ…

Read Full News

Humcha | ಕೋರಂ ಕೊರತೆ – ಹುಂಚ ಗ್ರಾಮ ಪಂಚಾಯತಿಯ ಗ್ರಾಮಸಭೆ ಮುಂದೂಡಿಕೆ

ಕೋರಂ ಕೊರತೆ – ಹುಂಚ ಗ್ರಾಮ ಪಂಚಾಯತಿಯ ಗ್ರಾಮಸಭೆ ಮುಂದೂಡಿಕೆ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯತ್‌ನಲ್ಲಿ ಗ್ರಾಮಸ್ಥರು (ಕೋರಂ) ಇಲ್ಲದೆ ಗ್ರಾಮ ಸಭೆ ಮುಂದೂಡಿಕೆಯಾಗಿದೆ. 2023-24 ನೇ ಸಾಲಿನ ಪ್ರಥಮ ಸಾಮಾಜಿಕ ಲೆಕ್ಕ ಪರಿಶೋಧನ ಗ್ರಾಮ ಸಭೆ ಇದಾಗಿದ್ದು ಗ್ರಾಮಸ್ಥರ ಹಾಜರಿ ಕಡಿಮೆ ಇದ್ದ ಕಾರಣ ಸಭೆ ಮುಂದೂಡಿಕೆಯಾಗಿದೆ. ಪಂಚಾಯತ್‌ ಅಧ್ಯಕ್ಷೆ ಸುಮಂಗಳ ರವರ  ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆ ಬೆಳಗ್ಗೆ 11-30 ಕ್ಕೆ ಪ್ರಾರಂಭವಾಗಿದ್ದು, ಆರಂಭದಲ್ಲಿ ಬೆರೆಳೆಣಿಕೆಯಷ್ಟು ಜನರಿದ್ದರು.  ಕೋರಂ ಇಲ್ಲದೆ ಸಭೆ ನಡೆಸುವಂತಿಲ್ಲ…

Read Full News

Shiralakoppa | ಸಂತೆಯಲ್ಲಿ ನಿಗೂಢ ವಸ್ತು ಸ್ಫೋಟ ಪ್ರಕರಣ – ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಹೇಳಿದ್ದೇನು..!!??

Shiralakoppa | ಸಂತೆಯಲ್ಲಿ ನಿಗೂಢ ವಸ್ತು ಸ್ಫೋಟ ಪ್ರಕರಣ –  ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಹೇಳಿದ್ದೇನು..!!?? ಶಿವಮೊಗ್ಗ : ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ಸಿಡಿಮದ್ದು ಸ್ಫೋಟಗೊಂಡು ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ.  ಶಿರಾಳಕೊಪ್ಪದ ಬಸ್ ಸ್ಟ್ಯಾಂಡ್ ಬಳಿ ಈ ಘಟನೆ ನಡೆದಿದೆ. ಸಿಡಿಮದ್ದು ತಂದಿದ್ದ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಎಸ್ ಪಿ ಹೇಳಿದ್ದೇನು..?? ಇಂದು ಸಂತೆಗೆ ಉಮೇಶ್ ಮತ್ತು ಅವನ ಹೆಂಡತಿ ರೂಪರವರು ರಸ್ತೆ ಬದಿಯ ಅಂಗಡಿಯಾತ ಅಂತೋನಿ ಜೊತೆ ಕಂಬಳಿ ಖರೀದಿಸಿದ್ದಾರೆ. ಆ…

Read Full News

Ripponpete | ಲಂಚಕ್ಕೆ ಬೇಡಿಕೆಯಿಟ್ಟರಾ ತೂಕ ಮತ್ತು ಅಳತೆ ಮಾಪನ ಅಧಿಕಾರಿಗಳು – ಏನಿದು ಹೊಟೇಲ್ ಮಾಲೀಕನ ಆರೋಪ

Ripponpete | ಲಂಚಕ್ಕೆ ಬೇಡಿಕೆ – ತೂಕ ಮತ್ತು ಅಳತೆ ಮಾಪನ ನವೀಕರಣಗೊಳಿಸದೇ ಹಿಂದಿರುಗಿದ ಅಧಿಕಾರಿಗಳು..!!! ರಿಪ್ಪನ್‌ಪೇಟೆ;-ವರ್ಷಕ್ಕೂಮ್ಮೆ ಸರ್ಕಾರ ತೂಕ ಮತ್ತು ಅಳತೆ ಮಾಪನಗಳನ್ನು ನವೀಕರಿಸಿ 250 ರೂ ಫೀ ಯನ್ನು ಗಣಕೀಕೃತ ರಶೀಧಿಯನ್ನು ನೀಡುತ್ತಾರೆ.ಇದರೊಂದಿಗೆ ಹೆಚ್ಚುವರಿಯಾಗಿ ಲಂಚದ ಹಣವನ್ನು  ತೂಕ ಮತ್ತು ಅಳತೆ ಮಾಪನಗಳನ್ನು ನವೀಕರಿಸಲು  ಕೊಡಬೇಕು ಇಲ್ಲವಾದರೆ ತಕಡಿಗೆ ಮೊಹರು ಮಾಡುವುದಿಲ್ಲ ಎಂದು ಕಾನೂನು ಮಾಪನಶಾಸ್ತ ಇಲಾಖೆಯ ಅಧಿಕಾರಿಗಳು ಹೇಳಿ ತಿರಸ್ಕರಿಸಿ ವಾಪಾಸ್ಸು ಹೋದ ಘಟನೆಯೊಂದು ನಡೆದಿದೆ. ಶಿವಮೊಗ್ಗ ರಸ್ತೆಯ ಜಯಪ್ರಕಾಶ ಹೋಟಲ್ ಮತ್ತು…

Read Full News

Ripponpete | ಅನ್ನದಾತನ ಮೇಲೆ ಅರಣ್ಯಾಧಿಕಾರಿಗಳ ದಬ್ಬಾಳಿಕೆ – ಅಧಿಕಾರಿಗಳ ವಿರುದ್ದ ಕೆಂಡಮಂಡಲರಾದ ವೀರೇಶ್ ಆಲುವಳ್ಳಿ

Ripponpete | ಅನ್ನದಾತರ ಮೇಲೆ ಅರಣ್ಯಾಧಿಕಾರಿಗಳ ದಬ್ಬಾಳಿಕೆ – ಅಧಿಕಾರಿಗಳ ವಿರುದ್ದ ಕೆಂಡಮಂಡಲರಾದ ವೀರೇಶ್ ಆಲುವಳ್ಳಿ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಹಾರಂಬಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅವೈಜ್ಞಾನಿಕವಾಗಿ EPT ಟ್ರಂಚ್ ತೆಗೆಯುತ್ತಿರುವ ಹಿನ್ನಲೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ ಸ್ಥಳಕ್ಕೆ ತೆರಳಿ ಅರಣ್ಯಾಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿರುವ ಘಟನೆ ನಡೆದಿದೆ. ಹಾರಂಬಳ್ಳಿ ಗ್ರಾಮದಲ್ಲಿ ರೈತರು ಉಳುಮೆ ಮಾಡುತ್ತಿರುವ ಖಾತೆ ಜಾಗದಲ್ಲಿ EPT ಟ್ರಂಚ್ ಹೊಡೆಯಲಾಗುತ್ತಿದ್ದ ಹಿನ್ನಲೆಯಲ್ಲಿ ಸ್ಥಳಕ್ಕೆ ತೆರಳಿ ಕಾಮಗಾರಿ ನಿಲ್ಲಿಸುವಂತೆ ಪಟ್ಟು ಹಿಡಿದ…

Read Full News