ಜಿಲ್ಲಾ ಸುದ್ದಿ:
ಸಾಗರ-ಸಿಗಂದೂರು ಸಂಪರ್ಕ ರಸ್ತೆ ಸಂಪೂರ್ಣ ಬಂದ್ : ವಾಹನ ಸವಾರರ ಪರದಾಟ..
ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು ಕರಾವಳಿ- ಮಲೆನಾಡು ಭಾಗದಲ್ಲಂತೂ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮರ, ವಿದ್ಯುತ್ ಕಂಬಗಳು ಉರುಳಿದ್ದು, ಗುಡ್ಡ ಕುಸಿತ, ಸೇತುವೆ ಮುಳುಗಡೆ, ನೆರೆಯಂತಹ ಸನ್ನಿವೇಶಗಳೂ ಸೃಷ್ಟಿಯಾಗಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ತೀರ್ಥಹಳ್ಳಿ, ಸಾಗರ,ಹೊಸನಗರದಲ್ಲಿ ಅವಘಡಗಳು ಹೆಚ್ಚಾಗುತ್ತಿವೆ ಭಾರಿ ಮಳೆಗೆ ರಸ್ತೆ ಮೇಲೆ ಮರಗಳು ಉರುಳಿ ಬಿದ್ದಿದ್ದರಿಂದ ಸಾಗರ- ಸಿಗಂದೂರು ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಬಂದ್ ಆಗಿದೆ. ಸಿಗಂದೂರು ಹೊಳೆಬಾಗಿಲು ಸಮೀಪದ ಅಂಬಾರಗೊಡ್ಡು ಬಳಿ ರಸ್ತೆಗೆ ಅಡ್ಡಲಾಗಿ ಹಲವಾರು ಮರಗಳು ಬಿದ್ದಿದ್ದು, ಕಳೆದ 1 ಗಂಟೆಯಿಂದ ಸಿಗಂದೂರು ರಸ್ತೆ ಸಂಪೂರ್ಣ ಬಂದ್ ಆಗಿದೆ….
ಗರ್ತಿಕೆರೆ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ : ರಿಪ್ಪನ್‌ಪೇಟೆ – ತೀರ್ಥಹಳ್ಳಿ ಮಾರ್ಗ ಬಂದ್!!!!
ಬಿಟ್ಟು ಬಿಡದೆ ಸುರಿಯುತ್ತಿರುವ ಮಹಾಮಳೆಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಅನೇಕ ಅನಾಹುತಗಳು ಸಂಭವಿಸುತ್ತಿವೆ. ಗರ್ತಿಕೆರೆ ಬಳಿಯ ಸುಣ್ಣದಬಸ್ತಿ ಎಂಬಲ್ಲಿ ಇಂದು ಬೃಹತ್ ಮರವೊಂದು ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಪರಿಣಾಮ ಕೋಣಂದೂರು – ರಿಪ್ಪನ್‌ಪೇಟೆ ಸಂಪರ್ಕ ಕಡಿತಗೊಂಡಿದೆ. ಬದಲಿ ಮಾರ್ಗವಾಗಿ ಹೆದ್ದಾರಿಪುರ – ಬಿದರಹಳ್ಳಿ ಮಾರ್ಗವಾಗಿ ಗರ್ತಿಕೆರೆ ಮೂಲಕ ವಾಹನಗಳು ಸಂಚರಿಸುತ್ತಿದ್ದು ಈ ಮಾರ್ಗವು ಕಿರಿದಾಗಿರುವ ಕಾರಣ ವಾಹನ ಸವಾರರು ಪರದಾಡುತ್ತಿದ್ದಾರೆ. ಅಮೃತ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮರ…
ಅಕ್ರಮ ಗಾಂಜಾ ಬೆಳೆ ಪತ್ತೆ ಹಚ್ಚಿ ಸರ್ಕಾರಕ್ಕೆ ಎಚ್ಚರಿಸಿದ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು
ನಗರ ಪ್ರದೇಶಗಳಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ಸ್ಥಳವನ್ನು ಗುರುತಿಸಿ ಅಪರಾಧಿಗಳನ್ನ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಕಣ್ಣು ಮುಚ್ಚಿಕೊಂಡು ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾಡಿದ್ದಾರೆ. ಹೌದು, ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ಬೆಳೆಗಳ ನಡುವೆ ಗೌಪ್ಯವಾಗಿ ಬೆಳೆಯುತ್ತಿರುವ ಮತ್ತು ಮಾರಾಟ ಮಾಡುವ ವಿಷಯ ಕೇಳಲಾಗುತ್ತಿತ್ತು. ಆದರೀಗ ಇದು ನಗರ ಪ್ರದೇಶದವರೆಗೂ ಹಬ್ಬಿರುವುದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ತೆಹಚ್ಚಿದ್ದಾರೆ. ಬೆಂಗಳೂರಿನ ಆರ್ ಟಿ ನಗರದ…
ತಾಯಿಯ ಮೃತದೇಹ ಮನೆಯಲ್ಲಿ : ಶವ ಸಂಸ್ಕಾರ ಮುಂದೂಡಿ ಪರೀಕ್ಷೆ ಬರೆದ ಮಗಳು
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕೋಡೂರು ಸಮೀಪದ ಶಾಂತಪುರ ಗ್ರಾಮದ ನಾಗರಾಜ್ ಎಂಬುವರ ಪತ್ನಿ ಅನುರಾಧ (45) ಎಂಬ ಮಹಿಳೆ ಸೋಮವಾರ ತೀವ್ರ ರಕ್ತದೊತ್ತಡದಿಂದ ಅನಾರೋಗ್ಯಕ್ಕೆ ತುತ್ತಾಗಿ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಸೋಮವಾರ ಮೃತ ಮಹಿಳೆಯ ಶವವನ್ನು ಮನೆಗೆ ತರಲಾಯಿತು ಆದರೆ ಮಂಗಳವಾರ ಮೃತ ಮಹಿಳೆ ಅನುರಾಧ ರವರ ಮಗಳು ಸ್ಪೂರ್ತಿ ಎಂಬ ಯುವತಿ ಬಿಎಸ್ ಸಿ ಕೃಷಿ ಪದವಿಗೆ ಕೃಷಿ ಕೋಟದಲ್ಲಿ ಪ್ರವೇಶ ಪಡೆಯಲು ಪ್ರಾಯೋಗಿಕ ಪರೀಕ್ಷೆ ಇತ್ತು .ಅಮ್ಮನ ಶವ ಮನೆಯಲ್ಲಿದ್ದರೂ…
ಹಳೇ ದ್ವೇಷದ ಹಿನ್ನಲೆ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ !!!???
ಮೂತ್ರ ವಿಸರ್ಜನೆಗೆಂದು ಹೊರ ಹೋದ ಯುವಕನ ಮೇಲೆ ಕೆಲ ಯುವಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ಸೋಮವಾರ ರಾತ್ರಿ 10 ಗಂಟೆಯ ಆಸುಪಾಸಿನ ಸಮಯದಲ್ಲಿ ನೆಡೆದಿದೆ. ಶಿವಮೊಗ್ಗ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿರುವ ತಮ್ಮ ಮನೆಯ ಬಳಿ ಕಾಂತರಾಜು (27) ಮನೆಯಿಂದ ಹೊರ ಬಂದು ಮೂತ್ರ ವಿಸರ್ಜನೆ ಮಾಡುವಾಗ ಹಿಂಬದಿಯಿಂದ ಬಂದ ನಾಲ್ಕೈದು ಜನ ಮಚ್ಚು ಮತ್ತು ಬ್ಯಾಟ್ ನಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಯುವಕ ಅವರ ಬಳಿ ಇದ್ದ ಆಯುಧಗಳನ್ನು ಕಸಿದುಕೊಂಡು ತಮ್ಮ ಕುಟುಂಬ…
ಮುಂದುವರಿದ ಭಾರಿ ಮಳೆ : ಹೊಸನಗರ ಮತ್ತು ಸಾಗರ ತಾಲೂಕಿನ ಶಾಲೆಗಳಿಗೆ ನಾಳೆ(12-07-2022) ರಜೆ ಘೋಷಣೆ
ಶಿವಮೊಗ್ಗ ಜಿಲ್ಲೆಯ ಎರಡು ತಾಲೂಕಿನ ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ. ಭಾರಿ ಮಳೆ ಹಿನ್ನೆಲೆ ಜಿಲ್ಲೆಯ ಎರಡು ತಾಲೂಕುಗಳ ಶಾಲೆಗಳಿಗೆ ರಜೆ ನೀಡಲಾಗಿದೆ ಹೊಸನಗರ ಮತ್ತು ಸಾಗರ ತಾಲೂಕಿನ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜುಲೈ 12ರ ಮಂಗಳವಾರದಂದು ರಜೆ ಘೋಷಿಸಲಾಗಿದೆ ಎಂದು ಸಾಗರ-ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ತೀರ್ಥಹಳ್ಳಿ ಗಾಂಧಿಚೌಕ್ ನಲ್ಲಿ ದಂಪತಿಗಳ ಹೈಡ್ರಾಮ : ಮಗುವಿಗೆ ಹಿಂಸೆ ನೀಡಿದ ಪ್ರಕರಣದಲ್ಲಿ ತಂದೆ ಅರೆಸ್ಟ್
ತೀರ್ಥಹಳ್ಳಿ: ಹುಚ್ಚುತನದ ಪರಮಾವಧಿಯಾಗಿ ಧರ್ಮದ ಅಮಲಿನಲ್ಲಿ ತನ್ನ ಎಳೆಯ ಕಂದಮ್ಮನನ್ನು ಮಳೆಯಲ್ಲಿ ನೆನೆಸುತ್ತಾ ಹುಚ್ಚು ಹುಚ್ಚಾಗಿ ಅರಚುತ್ತಿದ್ದ ತಂದೆಯನ್ನು ಅನುಮಾನದ ಮೇಲೆ ಪೊಲೀಸರು ವಿಚಾರಣೆ ನಡೆಸಿ ಆತನನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ತೀರ್ಥಹಳ್ಳಿಯ ಗಾಂಧಿ ಚೌಕದಲ್ಲಿ ಸಣ್ಣ ಮಗುವನ್ನು ಹಿಡಿದುಕೊಂಡು ಮಳೆಯಲ್ಲೇ ಅದನ್ನು ಮೇಲೆತ್ತಿ ಹಾಕುತ್ತ ಹಿಂಸೆ ನೀಡುತ್ತಿರುವ ದೃಶ್ಯವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ತೀರ್ಥಹಳ್ಳಿಯ ಫರ್ನಾಂಡಿಸ್ ಎಂದು ಗುರುತಿಸಿದ್ದು ಈತ ಕಾರಿನ ಮೇಲೆ ವಿವಿಧ ಧರ್ಮದ ಅಮಲಿನಲ್ಲಿ ಬರಹ ಬರೆದು…
ಮಾಸ್ತಿಕಟ್ಟೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಗೆ ಗುದ್ದಿದ ಖಾಸಗಿ ಬಸ್ :
ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್’ಗೆ ಖಾಸಗಿ ಬಸ್ ಗುದ್ದಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ನಡೆದಿದೆ. ಕುಂದಾಪುರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಗೆ ಡಿಕ್ಕಿ ಹೊಡೆದಿದ್ದು ಮನೆಯ ಮುಂಭಾಗದ ಕಾಂಪೌಡ್ ಪುಡಿಪುಡಿಯಾಗಿವೆ. ಕುಂದಾಪುರದಿಂದ ಹೊಸನಗರ ಮಾರ್ಗವಾಗಿ ಹೋಗುತ್ತಿದ್ದ KA 20 ಸಿ 6293 ಸಂಖ್ಯೆಯ ಶ್ರೀ ದುರ್ಗಾಂಬಾ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯ ಕಾಂಪೌಂಡ್ ಗೆ ಗುದ್ದಿದೆ. ಹಾನಿಗೊಳಗಾದ…
ರಿಪ್ಪನ್ ಪೇಟೆ : ಮುಸ್ಲಿಂ ಬಾಂಧವರಿಂದ ಸಂಭ್ರಮದಿಂದ ಬಕ್ರಿದ್ ಆಚರಣೆ
ರಿಪ್ಪನ್ ಪೇಟೆ : ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಅತ್ಯಂತ ಸಂಭ್ರಮದಿಂದ ಬಕ್ರಿದ್ ಹಬ್ಬವನ್ನು ಆಚರಿಸಿದರು. ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಮೆಕ್ಕಾ ಮಸೀದಿ, ಮದೀನಾ ಮಸೀದಿ ಗಳಲ್ಲಿ ಮುಸಲ್ಮಾನ ಭಾಂಧವರು ಬಕ್ರೀದ್ ಪ್ರಾರ್ಥನೆ ಸಲ್ಲಿಸಿದರು. ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫೀ ಮಾತನಾಡಿ, ಪ್ರತಿಯೊಂದು ಧರ್ಮವನ್ನು ಗೌರವಿಸುವ ಮೂಲಕ ಸಹೋದರತ್ವದಿಂದ ಬಾಳ್ವೆ ನಡೆಸಬೇಕು .ಯಾವುದೇ ಧರ್ಮವನ್ನು ಅವಹೇಳನ ಮಾಡುವುದನ್ನು ಇಸ್ಲಾಂ ಖಂಡಿಸುತ್ತದೆ ಎಂದರು. ರಿಪ್ಪನ್ ಪೇಟೆಯಲ್ಲಿ ಮಳೆ ಹಿನ್ನಲೆಯಲ್ಲಿ ಮೆರವಣಿಗೆಯನ್ನು ಸ್ಥಗಿತಗೊಳಿಸಿ ಗುಂಪು…
ಆಗುಂಬೆ ಘಾಟಿಯಲ್ಲಿ ಗುಡ್ದ ಕುಸಿತ : ಮೂರು ಬದಲಿ ಮಾರ್ಗ ವ್ಯವಸ್ಥೆ!!!!!ಯಾವ್ಯಾವುದು ಗೊತ್ತಾ??? ಈ ಸುದ್ದಿ ನೋಡಿ
ತೀರ್ಥಹಳ್ಳಿ : ಆಗುಂಬೆ ಘಾಟಿಯ 10ನೇ ತಿರುವಿನಲ್ಲಿ ಗುಡ್ಡಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಬದಲಿ ಮಾರ್ಗ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ (DC) ಡಾ.ಸೆಲ್ವಮಣಿ ಅವರು ತಿಳಿಸಿದ್ದಾರೆ. ಭೂ ಕುಸಿತದ ಮಣ್ಣು ಮತ್ತು ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ಜುಲೈ 12ರ ಮುಂಜಾನೆ 8ಗಂಟೆಯವರೆಗೆ ನಿರ್ಬಂಧಿಸಲಾಗಿದೆ. ಆ ಬಳಿಕ ಜುಲೈ 30ರವರೆಗೆ ಈ ಮಾರ್ಗದಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ. ಮೂರು…