
ಕ್ರೈಂ ಸುದ್ದಿ:
ಜೋಗದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ.
ಸಾಗರ : ತಾಲ್ಲೂಕಿನ ಜೋಗದಲ್ಲಿ ಮನೆಯ ಸಮೀಪ ಇರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ. ಜೋಗದ ನಿವಾಸಿ ಗಂಗಾಧರ್ (38) ಆತ್ಮಹತ್ಯೆ ಮಾಡಿಕೊಂಡವರು.ಗಂಗಾಧರ್ ಮದ್ಯವ್ಯಸನಿಯಾಗಿದ್ದು,ನಿನ್ನೆ ರಾತ್ರಿ ಸಹ ವಿಪರೀತ ಕುಡಿದು ಬಂದು ಪತ್ನಿ ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾನೆ. ತದ ನಂತರ ಮನೆಯ ಹೊರಗೆ ಇರುವ ಮರಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪಿಎಸ್ಐ ನಿರ್ಮಲಾ ಭೇಟಿ ನೀಡಿ ಪರಿಶೀಲಿಸಿದರು.