ಕ್ರೈಂ ಸುದ್ದಿ:
24 ಗಂಟೆಯಲ್ಲಿ ಕಿಡ್ನಾಪ್ ಪ್ರಕರಣ ಬೇಧಿಸಿದ ಪೊಲೀಸರು : ಭದ್ರಾವತಿಯಲ್ಲಿ ಅಪಹರಣ – ಸಾಗರದಲ್ಲಿ ಆರೋಪಿಗಳು|crime news
ಅಪ್ರಾಪ್ತ ಬಾಲಕನನ್ನ ಅಪಹರಿಸಿ ಹಣದ ಬೇಡಿಕೆ ಇಟ್ಟ ಪ್ರಕರಣವನ್ನ 24 ಗಂಟೆಯಲ್ಲಿ ಬೇಧಿಸಿದ ಭದ್ರಾವತಿ ನ್ಯೂ ಟೌನ್ ಪೊಲೀಸರು ಐವರು ಆರೋಪಿಯನ್ನ ಬಂಧಿಸಿದ್ದಾರೆ. ಓರ್ವನ ಬಂಧನಕ್ಕಾಗಿ ಭರ್ಜರಿ ಬಲೆಯನ್ನೇ ಹೆಣೆದಿದ್ದಾರೆ. ಘಟನೆಯ ಹಿನ್ನಲೆ: ಭದ್ರಾವತಿ ಅಂಡರ್ ಬ್ರಿಡ್ಜ್ ಬಳಿಯಿರುವ ಎಲ್ಐಸಿ ಕಚೇರಿ ಬಳಿ ಎಳನೀರು ಮಾರಾಟ ಮಾಡುತ್ತಿದ್ದ ಅಪ್ರಾಪ್ತ ಬಾಲಕನ ಬಳಿ ಬಂದ ಅಪರಿಚತನೋರ್ವ ನನ್ನ ಬಳಿ ಹಣ ಖಾಲಿಯಾಗಿದೆ. ಫೋನ್ ಪೇ ನೂ ಇಲ್ಲ. ನಾಲ್ಕು ಎಳನೀರು ಕೊಚ್ಚಿಕೊಂಡು 100 ಮೀಟರ್ ದೂರದಲ್ಲಿರುವ ವ್ಯಾನ್ ನಲ್ಲಿರುವ ಸ್ನೇಹಿತನ…
ಬೈಕ್ ಹಾಗೂ ಕಾರಿನ ನಡುವೆ ಅಪಘಾತ – ಬೈಕ್ ಸವಾರನ ಕಾಲು ಮುರಿತ..!!!!|accident
ಕಾರು ಹಾಗೂ ಬೈಕ್ ನಡುವೆ ಅಪಘಾತ ನಡೆದು ವ್ಯಕ್ತಿಯೊಬ್ಬನ ಕಾಲು ಮುರಿತವಾದ ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪದ ಐಗಿನಬೈಲು ತಿರುವಿನನಲ್ಲಿ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರನ ಕಾಲು ಮುರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.ಶಿರಸಿಯಿಂದ ಶಿವಮೊಗ್ಗದ ಕಡೆಗೆ ತೆರಳುತಿದ್ದ ಬೈಕ್ ಹಾಗೂ ಶಿವಮೊಗ್ಗದಿಂದ ಸಾಗರದ ಕಡೆ ಸಾಗುತ್ತಿದ್ದ ಕಾರಿನ ನಡುವೆ ಐಗಿನ ಬೈಲ್ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಗಾಯಾಳು ಬೈಕ್ ಸವಾರನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು,ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ. ಸಾಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ…
ಹೊಸನಗರದ ಮಾವಿನಕೊಪ್ಪ ಸರ್ಕಲ್ ನಲ್ಲಿ ಕಾರು ಡಿವೈಡರ್ ಗೆ ಡಿಕ್ಕಿ – ಇಬ್ಬರು ಗಂಭೀರ|accident
ಸಿಗಂದೂರಿನಿಂದ ಭೀಮಸಮುದ್ರಕ್ಕೆ ತೆರಳುತ್ತಿದ್ದ ಕಾರು ಡಿವೈಡರ್ ಡಿಕ್ಕಿ ಹೊಡೆದು ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ಪಟ್ಟಣದಲ್ಲಿ ತಡರಾತ್ರಿ ನಡೆದಿದೆ. ಪಟ್ಟಣದ ಮಾವಿನಕೊಪ್ಪ ಸರ್ಕಲ್ ನಲ್ಲಿ ಖಾಸಗಿ ಪ್ರವಾಸಿ ಬಸ್‌ನಿಂದ ಇಳಿದ ವ್ಯಕ್ತಿಯೊಬ್ಬ ಅಡ್ಡ ಬಂದ ಕಾರಣ, ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಚಾಲಕನ ಸಹಿತ ಅಡ್ಡ ಬಂದ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ತಾಲೂಕಿನ ಕಸಬಾ ಹೋಬಳಿ ಮಳವಳ್ಳಿ ವಾಸಿ ಶೇಖರ(45) ಕಾರಿಗೆ ಅಡ್ಡ ಬಂದ ವ್ಯಕ್ತಿ….
ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರು ಯುವಕರು ಸಾವು, ಓರ್ವ ಗಂಭೀರ|Accident
ಎರಡು ಬೈಕ್‍ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಇಬ್ಬರು ಯುವಕರು ಮೃತಪಟ್ಟ ಘಟನೆ ಸಾಗರ ತಾಲೂಕಿನ ಹೊಸಂತೆ ಗೌತಮಪುರ ರಸ್ತೆಯಲ್ಲಿ ಶುಕ್ರವಾರ ನಡೆದಿದೆ. ಚನ್ನಾಪುರದ ಪ್ರಮೋದ್(23) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಮೊಗ್ಗದ ಆಸಿಫ್(21) ಎಂಬವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪ್ರಮೋದ್ ತನ್ನ ಅಜ್ಜಿ 70 ವರ್ಷದ ದೇವಮ್ಮರನ್ನು ತ್ಯಾಗರ್ತಿಗೆ ಕರೆದುಕೊಂಡು ಹೋಗುತ್ತಿದ್ದರು. ಇವರು ಸಂಚರಿಸುತ್ತಿದ್ದ ಬೈಕ್ ಶಿವಮೊಗ್ಗದಿಂದ ಹೊಸಂತೆಗೆ ಬರುತ್ತಿದ್ದ ಆಸಿಫ್ ಅವರ ಬೈಕ್ ಮುಖಾಮುಖಿ ಢಿಕ್ಕಿಯಾಗಿದೆ. ಆಸಿಫ್ ಬೈಕಿನಲ್ಲಿದ್ದ ಶಿವಮೊಗ್ಗದ ತೌಸೀಫ್(20) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು,…
ಕೋಡೂರು ಸಮೀಪ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ|Accident
ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಕೋಡೂರು ಸಮೀಪದ ಕೊಪ್ಪರಗುಂಡಿ ಸೇತುವೆ ಬಳಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಪ್ಪರಗುಂಡಿ ಗ್ರಾಮದ ಸೇತುವೆ ಬಳಿ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ರಿಪ್ಪನ್‌ಪೇಟೆ ಕಡೆಯಿಂದ ಅಕ್ಕಿ ತುಂಬಿಕೊಂಡು ಹೋಗುತಿದ್ದ ಲಾರಿ ಹಾಗೂ ಹೊಸನಗರ ಕಡೆಯಿಂದ ಬರುತಿದ್ದ ಖಾಲಿ ಲಾರಿ ನಡುವೆ ಡಿಕ್ಕಿಯಾಗಿದ್ದು,ಆಟೋವೊಂದನ್ನು ಓವರ್ ಟೇಕ್ ಮಾಡುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ. ಲಾರಿ ಚಾಲಕನೊಬ್ಬನಿಗೆ ಗಾಯಗಳಾಗಿದ್ದು ಆತನನ್ನು ಹೊಸನಗರದ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಈ ಅಪಘಾತದಿಂದ…
ಬೈಕ್ ಅಪಘಾತ – ಕಾಲೇಜು ವಿದ್ಯಾರ್ಥಿ ಸಾವು|Accident
ಬೈಕೊಂದು ಅಪಘಾತಕ್ಕೀಡಾಗಿ ಡಿಪ್ಲೊಮಾ ಓದುತ್ತಿದ್ದ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪದ ಕೈರಾ ಸಮೀಪ ನಡೆದಿರುವುದು ವರದಿಯಾಗಿದೆ. ಸಾಗರದ ಪಾಲಿಟೆಕ್ನಿಕ್ ಕಾಲೇಜಿನ ಡಿಪ್ಲೊಮಾ ಓದುತ್ತಿದ್ದ ವಿದ್ಯಾರ್ಥಿ ಎಲ್ಡ್ರನ್ ಫೆರ್ನಾಂಡಿಸ್ (17) ಮೃತ ಬಾಲಕ. ಆನಂದಪುರ ಸಮೀಪದ ಯಡೆಹಳ್ಳಿಯ ನಿವಾಸಿಯಾಗಿದ್ದ ಎಲ್ಡ್ರನ್ ಫೆರ್ನಾಂಡಿಸ್ ರಾಷ್ಟ್ರೀಯ ಹೆದ್ದಾರಿ 206 ಸಮೀಪ ಗುರುವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪಘಾತ ಹೇಗೆ ಸಂಭವಿಸಿದ ಎಂಬುದು ತಿಳಿದುಬಂದಿಲ್ಲ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ…
ಅರಸಾಳು ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿ|ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳ|Accident
ರಿಪ್ಪನ್‌ಪೇಟೆ : ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಲಾರಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಇಂದು ಬೆಳಿಗ್ಗೆ ಅರಸಾಳು ಸಮೀಪದ 9ನೇ ಮೈಲಿಕಲ್ಲು ಬಳಿ ಈ ಘಟನೆ ಸಂಭವಿಸಿದೆ. ರಿಪ್ಪನ್ ಪೇಟೆ – ಆಯನೂರು ಮಾರ್ಗ ಮಧ್ಯೆಯ 9ನೇ ಮೈಲಿಕಲ್ಲು ಬಳಿ ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ರಸ್ತೆಯ ಬಲ ಭಾಗಕ್ಕೆ ಬಂದು ಪಲ್ಟಿಯಾಗಿದೆ. ಲಾರಿ ಶಿವಮೊಗ್ಗದ ಕಡೆಗೆ ಬರುತ್ತಿತ್ತು ಎಂದು ತಿಳಿದು ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ…
ಲಗೇಜ್ ಆಟೋ ಮತ್ತು ಬೈಕ್ ನಡುವೆ ಅಪಘಾತ : ಬೈಕ್ ಸವಾರ ಸಾವು,ಓರ್ವ ಗಂಭೀರ|Accident
ಬೈಕ್ ಹಾಗೂ ಲಗೇಜ್ ಆಟೋ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೇಕಲೆ ರಸ್ತೆ ತಿರುವಿನಲ್ಲಿ ಬುಧವಾರ ನಡೆದಿರುವುದಾಗಿ ವರದಿಯಾಗಿದೆ. ಬೆಳಮಕ್ಕಿಯ ನಿವಾಸಿ ತಿಮ್ಮಣ್ಣ(40) ಮೃತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ. ತುಮರಿಯಿಂದ ಮನೆಯತ್ತ ತೆರಳುತ್ತಿದ್ದ ತಿಮ್ಮಣ್ಣ ಅವರ ಬೈಕ್ ಹಾಗೂ ಆಟೋ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ. ಬೈಕ್‌ನಲ್ಲಿದ್ದ ಸಹ ಸವಾರ ಮಂಜಪ್ಪ ಎಂಬವರಿಗೆ ತೀವ್ರವಾಗಿ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಟೇಶ್ವರದ…
ರಿಪ್ಪನ್‌ಪೇಟೆ : ಜಂಬಳ್ಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ|Accident
ರಿಪ್ಪನ್‌ಪೇಟೆ : ಇಲ್ಲಿನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಜಂಬಳ್ಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವ ಘಟನೆ ನಡೆದಿದೆ. ಜೈನರ ದಕ್ಷಿಣದ ಕಾಶಿ ಹೊಂಬುಜ ಮಠಕ್ಕೆ ತೆರಳುತಿದ್ದ ಭಕ್ತರ ಮಾರುತಿ ಸ್ವಿಫ್ಟ್ ಕಾರು (MH 14 GN 1943) ಹೆದ್ದಾರಿಪುರ ಸಮೀಪದ ಜಂಬಳ್ಳಿ ತಿರುವಿನಲ್ಲಿ ಪಲ್ಟಿಯಾಗಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮಹಾರಾಷ್ಟ್ರ ರಾಜ್ಯದ ಪೂನ ನಗರದಿಂದ ಹೊಂಬುಜಾ ಮಠಕ್ಕೆ ಆಗಮಿಸುತಿದ್ದಾಗ ಇಂದು ಮುಂಜಾನೆ ಜಂಬಳ್ಳಿ ತಿರುವಿನಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ಒಂದೇ ಕುಟುಂಬದ 4…
ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ದಿನಗೂಲಿ ನೌಕರ ಸಾವು : ಕುಟುಂಬಸ್ಥರಿಂದ ಪ್ರತಿಭಟನೆ|Mescom
ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ದಿನಗೂಲಿ ನೌಕರನೊಬ್ಬ ಮೃತ ಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ನಡೆದಿದೆ. ಇಲಾಖೆಯ ನಿರ್ಲಕ್ಷ್ಯಕ್ಕೆ ಆಕ್ರೋಶಗೊಂಡ ಆತನ ಕುಟುಂಬಸ್ಥರು ಮತ್ತು ಎಣ್ಣೆಕೊಪ್ಪ ಗ್ರಾಮಸ್ಥರು ಮೆಸ್ಕಾಂ ಇಲಾಖೆಯ ಉಪ ವಿಭಾಗ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ತಾಲೂಕಿನ ಆನವಟ್ಟಿಯಲ್ಲಿ ಸೋಮವಾರ ನಡೆಯಿತು. ಘಟನೆ ಹಿನ್ನೆಲೆ: ಎಣ್ಣೆಕೊಪ್ಪ ಗ್ರಾಮದ ರವಿ ದುರ್ಗಪ್ಪ ಎಂಬ 24 ವರ್ಷದ ಯುವಕ ವಿದ್ಯುತ್ ಗುತ್ತಿಗೆದಾರರ ಬಳಿ ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದನು. ಕುಬಟೂರು ಗ್ರಾಮದಲ್ಲಿ ಡಿ.17 ರಂದು…