ಜಿಲ್ಲಾ ಸುದ್ದಿ:
ಕೊರೊನಾ ಪಾಸಿಟಿವ್ ಹಿನ್ನಲೆ ರಜೆ ಮೇಲೆ ಹೋಗಿದ್ದ ಕಾನ್ಸ್ ಟೇಬಲ್ ನಾಪತ್ತೆ – ಅದೇ ಸ್ಟೇಷನ್ ನಲ್ಲಿ ದಾಖಲಾಯ್ತು ಕೇಸ್|missing
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಪೊಲೀಸ್ ಸ್ಟೇಷನ್ನಲ್ಲಿ ಕೆಲಸ ಮಾಡುತ್ತಿದ್ದ ಪೇದೆಯೊಬ್ಬರು ಕಾಣೆಯಾಗಿದ್ದಾರೆ ಎಂಬ ದೂರೊಂದು ಅದೇ ಸ್ಟೇಷನ್ನಲ್ಲಿ ದಾಖಲಾಗಿದ್ದು, ಆ ಸಂಬಂಧ ಎಫ್ಐಆರ್ ಕೂಡ ದಾಖಲಾಗಿದೆ. ದಿನಾಂಕ: 07-12-2021 ರಿಂದ ಮಾಳೂರು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಸಂತೋಷ್ ಕುಮಾರ್ ಎಂಬವರು ಕೋವಿಡ್ ಪಾಸೀಟಿವ್ ಬಂದ ಹಿನ್ನೆಲೆಯಲ್ಲಿ 24-01-2022 ರಿಂದ ದಿನಾಂಕ:31-01-2022 ರ ವಿಶೇಷ ರಜೆ ತೆಗೆದುಕೊಂಡಿದ್ದರಂತೆ. ಆನಂತರ ವಾಪಸ್ ಕರ್ತವ್ಯಕ್ಕೆ ಹಾಜರಾಗಿಲ್ಲ. ಅಲ್ಲದೆ ಯಾವುದೇ ರೀತಿಯ ರಜೆಯನ್ನು ಸಹ ಪಡೆದುಕೊಳ್ಳದೆ…
ಶ್ರೀಕ್ಷೇತ್ರ ಹೊಂಬುಜಾ ಮಠದಲ್ಲಿ ಹಲವು ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಶಿಬಿರ|hombuja
ರಿಪ್ಪನ್‌ಪೇಟೆ : ಸಮೀಪದ ಶ್ರೀಕ್ಷೇತ್ರ ಹೊಂಬುಜದಲ್ಲಿ ಇಂದು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗುವಂತಹ ಕಾರ್ಯಕ್ರಮವೊಂದನ್ನು ಹೊಂಬುಜ ಮಠದ ವತಿಯಿಂದ ಆಯೋಜಿಸಲಾಗಿತ್ತು. ಕೆಲವೊಂದು ಕಾರಣಗಳಿಂದ ಕೈ ಮತ್ತು ಕಾಲು ಕಳೆದುಕೊಂಡ 72 ವಿಕಲಚೇತನರಿಗೆ ಕೈ ಮತ್ತು ಕಾಲು ಉಚಿತವಾಗಿ ಜೋಡಿಸುವ ಕಾರ್ಯಕ್ರಮದಲ್ಲಿ ಕಣ್ಣಂಚನ್ನು ತೇವಗೊಳಿಸುವಂತಹ ಕೆಲವೊಂದು ಘಟನೆಗಳು ನಡೆದವು. ಹನ್ನೊಂದು ವರ್ಷದ ವಿಕಲಚೇತನ ಬಾಲಕ ಅಪಘಾತದಲ್ಲಿ ಎರಡು ವರ್ಷದ ಹಿಂದೆ ಕಾಲು ಕಳೆದುಕೊಂಡು ತನ್ನ ಬಾಳಿನಲ್ಲಿನ ಇನ್ನು ನಡೆಯಲು ಸಾಧ್ಯವೇ ಇಲ್ಲವೆನೋ ಎಂಬ ಮನಸ್ಥಿತಿಯಲ್ಲಿದ್ದ… ಆ ಬಾಲಕನಿಗೆ ಕಾಲು ಜೋಡಿಸುತ್ತಲೇ…
ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ತೀರ್ಥಹಳ್ಳಿ ಕಾಂಗ್ರೆಸ್ ನ ಜೋಡೆತ್ತುಗಳ ವಾಗ್ದಾಳಿ|RMM-KIMMANE
ತೀರ್ಥಹಳ್ಳಿ : ಜನರಿಂದ ಆಯ್ಕೆಯಾದಂತಹ ಒಬ್ಬ ಜನಪ್ರತಿನಿಧಿಯನ್ನು ಒಬ್ಬ ಅಧಿಕಾರಿ ಹೊಡಿಯುತ್ತಾರೆ ಅಂದ್ರೆ ಏನರ್ಥ ? ಜ್ಞಾನೇಂದ್ರ ಗೆ ವಿಧಾನಸಭೆಯಲ್ಲಿ ಯಾವುದಾದರೂ ಅಧಿಕಾರಿ ಹೊಡೆದರೆ ಅದರ ಉತ್ತರ ಏನು ?ಒಬ್ಬ ಅಧಿಕಾರಿ ಆರಗ ಜ್ಞಾನೇಂದ್ರ ಅವರಿಗೆ ಹೊಡೆದರೆ ಅವರನ್ನು ಅಧಿಕಾರದಲ್ಲಿ ಇಡುತ್ತಾರ ಇವರಿಗೆ ಕಾಮನ್ ಸೆನ್ಸ್ ಬೇಡವಾ ? ನನ್ನ ಅನಿಸಿಕೆ ಜ್ಞಾನೇಂದ್ರರಂತವರಿಗೆ ಅಧಿಕಾರ ಕೊಟ್ಟಿದ್ದೆ ತಪ್ಪು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ಪಿಡಿಓ ಅವರನ್ನು ಕೆಲಸದಿಂದ ತೆಗೆಯಬೇಕು ಎಂದು ಮಂಗಳವಾರ…
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೊಟ್ಟಮೊದಲ ವಿಮಾನ|airport
ಶಿವಮೊಗ್ಗದ ಸೋಗಾನೆಯ ನೂತನ ಕುವೆಂಪು ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಇವತ್ತು ಮಧ್ಯಾಹ್ನ ಬಂದಿಳಿದಿದೆ. ಪ್ರಾಯೋಗಿಕವಾಗಿ ವಾಯು ಸೇನೆಯ ಬೋಯಿಂಗ್ ವಿಮಾನ ಸೋಗಾನೆಯ ಕುವೆಂಪು ವಿಮಾನ ನಿಲ್ದಾಣದ ರನ್ ವೇಯಲ್ಲಿ ಬಂದಿಳಿದಿದ್ದು ಯಾವುದೇ ಅಡೆತಡೆ ಉಂಟಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ವಾಯು ಸೇನೆಯ ಬೋಯಿಂಗ್ 737 – 7HI ಮಾದರಿಯ ವಿಮಾನ ಇಂದು ಮಧ್ಯಾಹ್ನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿದೆ. ಮಧ್ಯಾಹ್ನ 12 ಗಂಟೆಗೆ ಈ ವಿಮಾನ ದೆಹಲಿಯಿಂದ ಹೊರಟಿತ್ತ್ತು. ಮಧ್ಯಾಹ್ನ 2.30ರ ಹೊತ್ತಿಗೆ ವಿಮಾನ ಲ್ಯಾಂಡ್…
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಲು ಸಂಪುಟ ನಿರ್ಧಾರ|airport
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಸೋಮವಾರ ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಿದೆ. ಈ ಹಿಂದೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಕುವೆಂಪು ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ’20ನೇ ಶತಮಾನ ಕಂಡ ಈ ದೇಶದ ಶ್ರೇಷ್ಠ ಕವಿ. ಜ್ಞಾನಪೀಠ ಪ್ರಶಸ್ತಿ ಪಡೆದವರು. ರಾಜ್ಯದ ಗೀತೆಯನ್ನು ರಚಿಸಿದ ರಾಷ್ಟ್ರಕವಿ ಕುವೆಂಪು ಅವರ…
ಫೆ.24 ರ ಶುಕ್ರವಾರ ಶ್ರೀಕ್ಷೇತ್ರ ಹೊಂಬುಜಾಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ – ಹುಂಚದಕಟ್ಟೆಯಲ್ಲಿ ಗ್ರಾಮ ವಾಸ್ತವ್ಯ|JDS
ತೀರ್ಥಹಳ್ಳಿ : ಫೆ 23 ಮತ್ತು 24 ರಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ನಡೆಯಲಿದ್ದು ಫೆ.24 ರ ಶುಕ್ರವಾರ ಶ್ರೀ ಕ್ಷೇತ್ರ ಹೊಂಬುಜಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ. ಫೆ.23 ರಂದು ಹುಂಚದಕಟ್ಟೆ ಗ್ರಾಮದಲ್ಲಿ ರಾತ್ರಿ ಗ್ರಾಮ ವಾಸ್ತವ್ಯ ಹೂಡಲಿರುವ ಮಾಜಿ ಸಿಎಂ ಕುಮಾರಸ್ವಾಮಿ ಶುಕ್ರವಾರ ಬೆಳಿಗ್ಗೆ ನಿಟ್ಟೂರು ನಾರಾಯಣ ಗುರು ಮಠಕ್ಕೆ ಭೇಟಿ ನೀಡಿ ನಂತರ ಹೊಂಬುಜಾ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಕುಮಾರಸ್ವಾಮಿಯವರ ಪಂಚರತ್ನ ರಥಯಾತ್ರೆ ಸಾಗುವುದು…
ಶಿವ ನಾಮ ಸ್ಮರಣೆಯಿಂದ ಸಂಕಷ್ಟ ಪರಿಹಾರ – ಮಳಲಿ ಶ್ರೀಗಳು|shivarathri
ಶಿವ ನಾಮಸ್ಮರಣೆಯಿಂದ ಸಂಕಷ್ಟ ಪರಿಹಾರ – ಮಳಲಿ ಶ್ರೀಗಳು ರಿಪ್ಪನ್‌ಪೇಟೆ : ಸಂಸ್ಕೃತಿ ಸಂಸ್ಕಾರ ಪ್ರತಿಯೊಬ್ಬರು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡಾಗ ಬದುಕು ನೆಮ್ಮದಿಯಿಂದ ಕೂಡಿರುತ್ತದೆ. ಶಿವರಾತ್ರಿಯ ದಿನ ಮಾತ್ರ ಶಿವನಾಮಸ್ಮರಣೆ ಮಾಡಿದರೆ ಸಾಲದು ನಿತ್ಯ ಶಿವಮಂತ್ರ ಪಠಿಸುವುದರಿಂದ ಸಂಕಷ್ಟ ಹರಿಹಾರವಾಗುವುದು ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. ರಿಪ್ಪನ್‌ಪೇಟೆ ಸಮೀಪದ ಹಾಲುಗುಡ್ಡಯ ಇತಿಹಾಸ ಪ್ರಸಿದ್ದ ಹಾಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಮಹಾಶಿವರಾತ್ರಿಯ ಅಂಗವಾಗಿ ಹಾಲೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಧರ್ಮಸಭೆಯ…
ಕಾಂಬೋಡಿಯಾದಲ್ಲಿ ತೀರ್ಥಹಳ್ಳಿ ಟೆಕ್ಕಿ ಒತ್ತೆ|software engineer
ತೀರ್ಥಹಳ್ಳಿ : ಸಾಫ್ಟ್‌ವೇರ್(software) ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ತೀರ್ಥಹಳ್ಳಿಯ ಟೆಕ್ಕಿಯೊಬ್ಬರನ್ನು ಕಾಂಬೋಡಿಯಾದಲ್ಲಿ ಒತ್ತೆಯಾಳಾಗಿ ಇರಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಈ ವಿಷಯ ಕೇಂದ್ರ ಸರಕಾರದ ಅಂಗಳಕ್ಕೆ ತಲುಪಿದೆ. ತೀರ್ಥಹಳ್ಳಿಯ ಕಿರಣ್ ಶೆಟ್ಟಿ ಅವರಿಗೆ ಥಾಯ್ಲ್ಯಾಂಡ್(thayland) ಕಂಪೆನಿಯಲ್ಲಿ ಉದ್ಯೋಗ ಹಾಗೂ ಒಳ್ಳೆಯ ಸಂಬಳದ ಭರವಸೆ ನೀಡಲಾಗಿತ್ತು. ಇದನ್ನು ನಂಬಿದ ಕಿರಣ್ ಕಾಂಬೋಡಿಯಾಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ ಬಳಿಕ ಅವರನ್ನು ಒತ್ತೆಯಾಳಾಗಿಟ್ಟುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಕಿರಣ್ ಶೆಟ್ಟಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಚಿಕ್ಕ ಮಗು ಕೂಡ ಇದೆ. ಈಗ…
ರಿಪ್ಪನ್‌ಪೇಟೆ : ಸಡಗರ, ಸಂಭ್ರಮ ಹಾಗೂ ಶ್ರದ್ದಾಭಕ್ತಿಯಿಂದ ಜರುಗಿದ ಮಹಾಶಿವರಾತ್ರಿಯ ಧಾರ್ಮಿಕ ಕಾರ್ಯಕ್ರಮ|shivarathri
ರಿಪ್ಪನ್‌ಪೇಟೆ : ಮಹಾಶಿವರಾತ್ರಿಯ ಅಂಗವಾಗಿ ಪಟ್ಟಣದ ಸಿದ್ದಪ್ಪನಗುಡಿಯ ಶ್ರೀ ಕಂತೆ ಸಿದ್ದೇಶ್ವರ ದೇವಸ್ಥಾನ,ಬರುವೆ ಈಶ್ವರ ದೇವಸ್ಥಾನ, ಮುಡುಬ ಈಶ್ವರ ದೇವಸ್ಥಾನ,ಗವಟೂರು ರಾಮೇಶ್ವರ ದೇವಸ್ಥಾನದಲ್ಲಿ ಶ್ರದ್ದಾ ಭಕ್ತಿಯಿಂದ ವಿಶೇಷ ಪೂಜಾ ಕಾರ್ಯಕ್ರಮವು ಜರುಗಿದವು.ಮುಂಜಾನೆಯಿಂದಲೇ ಭಕ್ತರು ಗ್ರಾಮದಲ್ಲಿನ ದೇವಸ್ಥಾನಗಳಿಗೆ ತೆರಳಿ ಪೂಜಾ ಸೇವೆಯನ್ನು ನೆರವೇರಿಸಿದರು. ಸಿದ್ದಪ್ಪನಗುಡಿಯ ಶ್ರೀ ಕಂತೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀಕಂತೆ ಸಿದ್ದೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ರುದ್ರಾಭಿಷೇಕ ಪೂಜೆಗೆ ಭಾರಿ ಸಂಖ್ಯೆಯಲ್ಲಿ ಜನಸ್ತೋಮ ಸೇರಿದ್ದರು,ಮಧ್ಯಾಹ್ನ ಎಲ್ಲಾ ಭಕ್ತಾಧಿಗಳಿಗೂ ಸಾಮೂಹಿಕ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಮಾಜಿ ಶಾಸಕ ಹಾಗೂ ಕೆಪಿಸಿಸಿ…
ರಿಪ್ಪನ್‌ಪೇಟೆ : 396 ನೇ ಶಿವಾಜಿ ಜಯಂತಿ ಆಚರಣೆ
ರಿಪ್ಪನ್‌ಪೇಟೆ : ಛತ್ರಪತಿ ಶಿವಾಜಿ ಮಹಾರಾಜರ ವ್ಯಕ್ತಿತ್ವ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಮಾದರಿ. ಭಾರತೀಯರ ಕಣ ಕಣದಲ್ಲೂ ಶಿವಾಜಿಯ ಆದರ್ಶ ಗುಣಗಳು ಕರಗತವಾಗಬೇಕು. ಸಂಸ್ಕಾರಯುತ ಸಮಾಜದ ನಿರ್ಮಾಣದಲ್ಲಿ ಶಿವಾಜಿಯ ಹೋರಾಟದೊಂದಿಗೆ ಆತನಿಗೆ ಸ್ಫೂರ್ತಿ ನೀಡಿದ್ದ ತಾಯಿ ಜೀಜಾಬಾಯಿಯ ಕೊಡುಗೆಯೂ ಸ್ಮರಣೀಯ ಎಂದು ರಿಪ್ಪನ್‌ಪೇಟೆ ಮರಾಠ ಸಮಾಜದ ಅಧ್ಯಕ್ಷ ನಾಗೇಶ್ ಹೊಸಮನೆ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಇಂದು ಪಟ್ಟಣದ ಸಾಗರ ರಸ್ತೆಯ ಶಿವಾಜಿ ಸರ್ಕಲ್ ನಡೆದ ಶಿವಾಜಿ ಜಯಂತಿ ಆಚರಣೆಯಲ್ಲಿ ಮಾತನಾಡಿ ಪರಕೀಯರ ಅಟ್ಟಹಾಸದಿಂದ ಭಾರತವನ್ನು ರಕ್ಷಿಸುವಲ್ಲಿ…