ಜಿಲ್ಲಾ ಸುದ್ದಿ:
ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ “ಟಪ್ ಫೈಟ್” ನೀಡುತ್ತಿರುವ ಚಂದ್ರಶೇಖರ್ ಪೂಜಾರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಯಕನ ಹಿಂದೆ, ಈ ಬಾರಿ ಅವನೇ ನಾಯಕ.!?
ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ “ಟಪ್ ಫೈಟ್” ನೀಡುತ್ತಿರುವುದು ಚಂದ್ರಶೇಖರ್ ಪೂಜಾರ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಯಕನ ಹಿಂದೆ, ಈ ಬಾರಿ ಅವನೇ ನಾಯಕ.!? ಹರಿಹರ: ಈಗಾಗಲೇ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಏಪ್ರಿಲ್ 13ನೇ ತಾರೀಖಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ. ಮೇ ಹತ್ತರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ 13 ರಂದು ಅಭ್ಯರ್ಥಿಗಳ ಭವಿಷ್ಯ ಹೊರಬಿಳಲಿದೆ. ಪ್ರಮುಖ ಪಕ್ಷಗಳು ರಾಜ್ಯ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ…
ಉದ್ಯೋಗಾವಕಾಶ : ಏ.12 ರಂದು ವಿವಿಧ ಕಂಪನಿಗಳಿಂದ ನೇರ ಸಂದರ್ಶನ
ಏಪ್ರಿಲ್ 12 ರಂದು ಶಿವಮೊಗ್ಗ ನಗರದ ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಏ.12 ರ ಬೆಳಗ್ಗೆ 10.00ಕ್ಕೆ ಪತ್ರಿಷ್ಠಿತ ಖಾಸಗಿ ಕಂಪನಿಗಳಿಂದ ನೇರ ಸಂದರ್ಶನವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ. ವಿವಿಧ ಪ್ರತಿಷ್ಠಿತ ಖಾಸಗಿ ಕಂಪನಿಗಳು ಈ ನೇರ ಸಂದರ್ಶನದಲ್ಲಿ ಭಾಗವಹಿಸಲಿದ್ಧಾರೆ. ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮೊ ಮತ್ತು ಇತರೆ ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ತಮ್ಮ…
ಹೊಸನಗರ : ಚಿರತೆ ದಾಳಿಗೆ ಹಸು ಸಾವು – ಆತಂಕದಲ್ಲಿ ಗ್ರಾಮಸ್ಥರು|leopard
ಹೊಸನಗರ ತಾಲ್ಲೂಕು ತ್ರಿಣಿವೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚಿರತೆ ದಾಳಿ ಹಸು ಸಾವು – ಮುಜಾಗ್ರತೆ ಕ್ರಮ ಕೈಗೊಳ್ಳಲು ಅರಣ್ಯ ಅಧಿಕಾರಿಗಳಿಗೆ ಗ್ರಾಪಂ ಅಧ್ಯಕ್ಷ ಕೃಷ್ಣಮೂರ್ತಿ ಆಗ್ರಹ ಹೊಸನಗರ: ಹೊಸನಗರ ತಾಲ್ಲೂಕು ತ್ರಿಣಿವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಒಂದು ತಿಂಗಳಿಂದ ಚಿರತೆ ಓಡಾಟ ನಡೆಸುತ್ತಿದೆ ಎಂದು ಗ್ರಾಮಸ್ಥರು ಹೆದರಿ-ಹೆದರಿ ಓಡಾಟ ನಡೆಸುತ್ತಿದ್ದು ಮುಡ್ರಳ್ಳಿ ಬಳಿ ಒಂದು ಹಸು ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.ಚಿರತೆ ಓಡಾಟ ನಡೆಸುತ್ತಿರುವುದು ಈ ಘಟನೆಯಿಂದ ದೃಡಪಟ್ಟಿದೆ. ಹೊಸನಗರ ತಾಲ್ಲೂಕು ತ್ರಿಣಿವೆ-…
ಕಿಮ್ಮನೆ ನೇತೃತ್ವದ ಕಾಂಗ್ರೆಸ್ ರಥಕ್ಕೆ ಆರ್ ಎಂ ಮಂಜುನಾಥ್ ಗೌಡ ಸಾರಥಿ.!!- ತೀರ್ಥಹಳ್ಳಿ ಕಾಂಗ್ರೆಸ್ ನಲ್ಲಿ ಕೂಡಿ ಬಾಳೋಣ ಮಂತ್ರ|kimmane-Rmm
ತೀರ್ಥಹಳ್ಳಿ : ರಾಜ್ಯದ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ರಾಜ್ಯದ ಪ್ರತಿಷ್ಠಿತ ಕ್ಷೇತ್ರವಾದ ತೀರ್ಥಹಳ್ಳಿಯಲ್ಲಿ ಈ ಬಾರಿ ಚುನಾವಣೆ ರಂಗೇರಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮದ್ಯೆ ಪೈಪೋಟಿ ಮತ್ತಷ್ಟು ರೋಚಕತೆಯಿಂದ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಕಿಮ್ಮನೆ ರತ್ನಾಕರ್ ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೇ ಆರ್ ಎಂ ಮಂಜುನಾಥ ಗೌಡರು ವಿವಿಧ ಕಡೆ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿದ್ದ ಕಾರಣ ಬಂಡಾಯ ಏಳಬಹುದು ಎನ್ನಲಾಗುತಿತ್ತು. ಆದರೆ ಜೋಡೆತ್ತುಗಳು ಒಂದಾಗಿ ಚುನಾವಣೆ ಎದುರಿಸಿ ಕಾಂಗ್ರೆಸ್ ಪಕ್ಷವನ್ನು…
ಕಾಲೇಜಿನ ಗ್ರಂಥಾಲಯದಲ್ಲಿ ಪ್ರತ್ಯಕ್ಷವಾದ ಹಾವು – ಭಯ ಮೂಡಿಸಿದ್ದ ಬರೋಬ್ಬರಿ 8 ಅಡಿ ಉದ್ದದ ಹಾವು
ಶಿವಮೊಗ್ಗ ನಗರದ ಸಹ್ಯಾದ್ರಿ ಸೈನ್ಸ್ ಕಾಲೇಜು ಆವರಣದಲ್ಲಿರುವ ಗ್ರಂಥಾಲಯದಲ್ಲಿಯೇ ಹಾವೊಂದು ಕಾಣಿಸಿಕೊಂಡಿತ್ತು. ಮೊನ್ನೆ ಕಾಲೇಜಿನ ಗ್ರಂಥಾಲಯದಲ್ಲಿ ಸುಮಾರು 8 ಅಡಿ ಉದ್ದದ ಹಾವೊಂದು ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಪುಸ್ತಕಗಳ ರಾಶಿಯ ಅಡಿಯಲ್ಲಿ ಸೇರಿಕೊಂಡಿದ್ದ ಹಾವು, ಆಗಾಗ ಸದ್ದು ಮಾಡುತ್ತಿತ್ತು. ಮೊದಲೇ ನಿಶ್ಚಬ್ಧವಾಗಿದ್ದ ಲೈಬ್ರರಿಯಲ್ಲಿ ಹಾವಿನ ಸದ್ದು ತುಸು ಜೋರಾಗಿಯೇ ಕೇಳಿಬರುತ್ತಿತ್ತು. ಇನ್ನೂ ಏನು ಶಬ್ಧವಾಗುತ್ತಿದೆ ಎಂದು ನೋಡಿದ ಸಿಬ್ಬಂದಿ ಹಾವೊಂದು ಗೃಂಥಾಲಯವನ್ನು ಸೇರಿಕೊಂಡಿರುವುದು ಗೊತ್ತಾಗಿದೆ. ತಕ್ಷಣ ಹಾವನ್ನು ಸುರಕ್ಷಿತವಾಗಿ ಹಿಡಿಯಬಲ್ಲ ಸ್ನೇಕ್ ಜಯಂತ್ ಬಾಬುರನ್ನ ಸಂಪರ್ಕಿಸಿದ್ದಾರೆ. ಕರೆ…
ನೀತಿಸಂಹಿತೆ ಉಲ್ಲಂಘನೆ – ಸಾಗರ ಬ್ಲಾಕ್ ಕಾಂಗ್ರೆಸ್ ಮುಖಂಡನ ಮೇಲೆ ಪ್ರಕರಣ ದಾಖಲು|election-code-of-coduct
ಶಿವಮೊಗ್ಗ ಜಿಲ್ಲೆ ಸಾಗರ ಬ್ಲಾಕ್ ಕಾಂಗ್ರೆಸ್ನ ಮುಖಂಡರ ವಿರುದ್ಧ ಚುನಾವಣಾ ನೀತಿ ಸಂಹಿತೆ ಅಡಿಯಲ್ಲಿ ಕೇಸ್ ದಾಖಲಾಗಿದೆ. ಕಳೆದ ಮಾರ್ಚ್ 30 ರಂದು ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳಾ ಸಮಾಜ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ನಡೆಸಲಾಗಿತ್ತು. ಈ ಸಂಬಂಧ ಬ್ಲಾಕ್ ಕಾಂಗ್ರೆಸ್ ಸಮಿತಿ ಸಾಗರದ ಪ್ರಧಾನ ಕಾರ್ಯದರ್ಶಿ ಮಹಾಬಲೇಶ ಕೌತಿ ರವರು ಸಾಗರ ಉಪ ವಿಭಾಗಾಧಿಕಾರಿ ಬಳಿ ಅನುಮತಿ ಕೇಳಿದ್ದರು. ಈ ಸಂಬಂಧ ಚುನಾವಣಾ ಅಧಿಕಾರಿಯಾದ ಎಸಿಯವರು ಷರತ್ತು ಬದ್ಧ ಅನುಮತಿಯನ್ನು…
ಹೊಸನಗರ ತಾಲೂಕಿನ ಪಶು ಆಸ್ಪತ್ರೆಗಳು ವೈದ್ಯರು, ಸಿಬ್ಬಂದಿಗಳಿಲ್ಲದೇ ಭಣಗುಟ್ಟುತ್ತಿವೆ – 22 ಆಸ್ಪತ್ರೆಗೆ ಇಬ್ಬರೇ ವೈದ್ಯರು
ರಿಪ್ಪನ್‌ಪೇಟೆ : ಮಲೆನಾಡಿನ ಹೆಬ್ಬಾಗಿಲು ಎಂದೇ ಖ್ಯಾತಿಗಳಿಸಿರುವ ಶಿವಮೊಗ್ಗ ಜಿಲ್ಲೆಯ ಮಧ್ಯ ಮಲೆನಾಡಿನ ಹೊಸನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ 22 ಪಶು ಅಸ್ಪತ್ರೆಗೆ 2 ಜನ ವೈದ್ಯಾಧಿಕಾರಿಗಳು ಬಿಟ್ಟರೆ ಇನ್ನೂ ಯಾರು ಇರುವುದಿಲ್ಲ ರಾಜಕಾರಣಿಗಳ ಇಚ್ಚಾ ಶಕ್ತಿಯ ಕೊರತೆಯಿಂದಾಗಿ ತಾಲೂಕಿನಾದ್ಯಂತ ಭಣಗುಟ್ಟುತ್ತಿವೆ ಪಶ ಆಸ್ಪತ್ರೆಗಳು. ರಾಜ್ಯ ಬಿಜೆಪಿ ಸರ್ಕಾರ ಹೈನುಗಾರಿಕೆಗೆ ಹೆಚ್ಚಿನ ಅಧ್ಯತೆ ನೀಡಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದು ಹೊಸನಗರ ತಾಲ್ಲೂಕ್ ಮಾತ್ರ ಹೈನು ಉದ್ಯಮ ಸೇರಿದಂತೆ ಗೋವುಗಳ ಲಾಲನೆ ಪಾಲನೆ ರಾಜಕೀಯ ಮುಖಂಡರ ಇಚ್ಚಾಶಕ್ತಿಯ ಕೊರತೆಯಿಂದಾಗಿ ಹಿಂದುಳಿಯುವಂತಾಗಿದೆ. ರಿಪ್ಪನ್‌ಪೇಟೆಯ…
ತೀರ್ಥಹಳ್ಳಿ : ಆತಂಕಕ್ಕೆ ಕಾರಣವಾಗಿದ್ದ ಚಿರತೆಯ ಮೃತದೇಹ ಮಲ್ಲೇಸರ ಅರಣ್ಯ ಪ್ರದೇಶದಲ್ಲಿ ಪತ್ತೆ|leopard
ತೀರ್ಥಹಳ್ಳಿ- ಮಲ್ಲೇಸರ ಸಿಂದೋಡಿ ಬಳಿಯ ಅರಣ್ಯ ಸಮೀಪದಲ್ಲಿ ಚಿರತೆಯ ಮೃತದೇಹ ಪತ್ತೆ !! ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಲ್ಲೇಸರ ಗ್ರಾಮದಲ್ಲಿ ಕಳೆದ ಕೆಲ ತಿಂಗಳಿನಿಂದ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯ ಮೃತದೇಹ ಪತ್ತೆಯಾಗಿದೆ. ಹಲವಾರು ತಿಂಗಳಿನಿಂದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯನ್ನು ಸೆರೆಹಿಡಿಯಲು ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿಗಳು ಗ್ರಾಮಸ್ಥರ ನೆರವಿನೊಂದಿಗೆ ಬೋನನ್ನು ಸಿದ್ದಪಡಿಸಿ ಇಟ್ಟಿದ್ದರು. ಆದರೂ ಚಿರತೆಯ ಚಲವಲನದ ಕುರಿತು ಯಾವುದೇ ಮಾಹಿತಿ ಸಿಕ್ಕಿರಲಿಲ್ಲ ಆದರೆ ಇಂದು ಚಿರತೆ ಸೆರೆಹಿಡಿಯಲು ಇಟ್ಟಿದ್ದ ಬೋನಿನ ಸಮೀಪದ ಅರಣ್ಯದಲ್ಲಿ ಚಿರತೆಯ…
ಯಡಿಯೂರಪ್ಪ ನೇತೃತ್ವದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಅಧಿಕಾರಕ್ಕೆ ಬರುತ್ತೇವೆ – ಸಿಎಂ ಬೊಮ್ಮಾಯಿ|CM
ತೀರ್ಥಹಳ್ಳಿ : ದೇಶದ ಇತಿಹಾಸದಲ್ಲಿ ಕಡಿಮೆ ಅವಧಿಯಲ್ಲಿ ವಿಶ್ವದ ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಬಿಜೆಪಿ ತತ್ವ-ಸಿದ್ದಾಂತದಡಿ ಹುಟ್ಟಿ, ಅದನ್ನು ಬದಲಾಯಿಸದೇ ಕೆಲಸ ಮಾಡುತ್ತಿದೆ. ವಿಶ್ವದಲ್ಲಿ ದೊಡ್ಡ ಪಕ್ಷವಾಗಬೇಕಾದರೇ ಅಷ್ಟೇ ಜನರ ವಿಶ್ವಾಸ ಪಕ್ಷ ಗಳಿಸಬೇಕು. ವಿಶ್ವವೇ ಇವತ್ತು ಭಾರತದತ್ತ ನೋಡುವ ನಾಯಕತ್ವ ಬಿಜೆಪಿ ಹಾಗೂ ದೇಶಕ್ಕಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ತಾಲೂಕಿನ ತೂದೂರು ಗ್ರಾಮದಲ್ಲಿ ಗುರುವಾರ ಮಂಡಗದ್ದೆ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿ ನಾಯಕತ್ವದ ಜೊತೆಗೆ…
ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಿಮ್ಮನೆ,ಆರ್ ಎಂಎಂ ನೇತೃತ್ವದ ಕಾಂಗ್ರೆಸ್ ಬಸ್ ಹತ್ತಲೂ ನೂಕುನುಗ್ಗಲು – ಕಮಲ ತೊರೆದು ಕೈ ಹಿಡಿದ 50ಕ್ಕೂ ಹೆಚ್ಚು ಕಾರ್ಯಕರ್ತರು
ತೀರ್ಥಹಳ್ಳಿ : ಕಿಮ್ಮನೆ ರತ್ನಾಕರ್ ಮತ್ತು ಆರ್ ಎಂ ಮಂಜುನಾಥ್ ಗೌಡ ನೇತೃತ್ವದ ಕಾಂಗ್ರೆಸ್ ಬಸ್ ಹತ್ತಲೂ ಕ್ಷೇತ್ರದಾದ್ಯಂತ ನೂಕುನುಗ್ಗಲು ಪ್ರಾರಂಭವಾಗಿದೆ.ಇಂದು ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿಯಲ್ಲಿ ಅಧಿಕೃತ ಅಭ್ಯರ್ಥಿಯಾಗಿ ಕಿಮ್ಮನೆ ರತ್ನಾಕರ್ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ. ಕಾಂಗ್ರೆಸ್ ನ ತತ್ವ ಸಿದ್ದಾಂತ ಮತ್ತು ಕಿಮ್ಮನೆ ರತ್ನಾಕರ್ ಅವರ ನಾಯಕತ್ವವನ್ನು ಮೆಚ್ಚಿ ಪಟ್ಟಣದ ಯಡೇಹಳ್ಳಿಕೆರೆ ಬಾಲರಾಜ್ ಮತ್ತು ಅವರ 50 ಕ್ಕೂ ಹೆಚ್ಚು ಸ್ನೇಹಿತರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪಟ್ಟಣದ ಮುಖ್ಯ…