ಜಿಲ್ಲಾ ಸುದ್ದಿ:
Thirthahalli | ಮೇಲಿನ ಕುರುವಳ್ಳಿ ವ್ಯಾಪ್ತಿಯಲ್ಲಿ ಹುಲಿ ಪ್ರತ್ಯಕ್ಷ – ಬೆಚ್ಚಿಬಿದ್ದ ಸ್ಥಳೀಯರು
ತೀರ್ಥಹಳ್ಳಿ : ಪಟ್ಟಣದ ಸಮೀಪದ ಮೇಲಿನ ಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ವಿಠಲನಗರದ ಲೇಔಟ್ ಹಿಂಭಾಗದ ಕಾಡಿನಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿದೆ. ಸ್ಥಳೀಯರು ಭಾನುವಾರ ಸಂಜೆ ಕಟ್ಟಿಗೆ ಕಡಿಯಲು ಹೋದಾಗ ಹುಲಿಯನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಕಳೆದ ನಾಲ್ಕೈದು ದಿನದ ಹಿಂದೆ ರಾತ್ರಿಯ ವೇಳೆ ಲೇಔಟ್ ಸಮೀಪದಲ್ಲಿ ಹುಲಿ ಕೂಗಿದ ಘರ್ಜನೆ ಕೇಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮುಂದೆ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತು ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸಹೋದರಿಯ ಗೆಲುವಿಗಾಗಿ ಒಂದಾಗ್ತಾರ ಕುಮಾರ್ ಬಂಗಾರಪ್ಪ-ಮಧು ಬಂಗಾರಪ್ಪ | ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ ಈ ಪೋಟೋ..!!|Election News
ಸಹೋದರಿಯ ಗೆಲುವಿಗಾಗಿ ಒಂದಾಗ್ತಾರ ಕುಮಾರ್ ಬಂಗಾರಪ್ಪ-ಮಧು ಬಂಗಾರಪ್ಪ | ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ ಈ ಪೋಟೋ..!! ಶಿವಮೊಗ್ಗ ರಾಜಕಾರಣ ನಿಂತಿರೋದು ಇಬ್ಬರು ಮಾಜಿ ಸಿಎಂಗಳ ಕುಟುಂಬಗಳ ಮೇಲೆ.. ಒಂದು ಕಾಲಕ್ಕೆ ಮಾಜಿ ಸಿಎಂ ಬಂಗಾರಪ್ಪ ಕುಟುಂಬಕ್ಕೆ ಸಾಟಿಯೇ ಇಲ್ಲದಂತಿತ್ತು.. ಈಗ ಯಡಿಯೂರಪ್ಪ ಕುಟುಂಬದ ರಾಜಕೀಯ ಒಂದು ಕೈ ಮೇಲಾಗಿದೆ.. ಇದಕ್ಕೆ ಕಾರಣವೂ ಇಲ್ಲದಿಲ್ಲ… ಬಂಗಾರಪ್ಪ ಕುಟುಂಬ ಎರಡು ಹೋಳಾಗಿರುವುದು… ಮಧು ಬಂಗಾರಪ್ಪ ಕಾಂಗ್ರೆಸ್‌ನಲ್ಲಿದ್ದರೆ, ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲಿದ್ದಾರೆ… ಚುನಾವಣೆಯಲ್ಲಿ ಇಬ್ಬರೂ ಪರಸ್ಪರ ಎದುರಾಳಿಗಳು ಕೂಡಾ… ಯಾವುದೋ…
ಎಂಟು ವರ್ಷದ ಬಾಲಕಿಯ ಮೇಲೆ 52 ವರ್ಷದ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯ – ಆರೋಪಿಯ ಬಂಧನ
ಎಂಟು ವರ್ಷದ ಬಾಲಕಿಯ ಮೇಲೆ 52 ವರ್ಷದ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯ – ಆರೋಪಿಯ ಬಂಧನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಎಂಟು ವರ್ಷದ ಬಾಲಕಿ ಮೇಲೆ 52 ವರ್ಷದ ವ್ಯಕ್ತಿಯೊಬ್ಬನು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಈ ಘಟನೆ ವರದಿಯಾಗಿದೆ. ಆರೋಪಿಯನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಚಂದ್ರಪ್ಪ (52) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ಹೊಸನಗರ ಸಮಾಜ ಕಲ್ಯಾಣ ಇಲಾಖೆಯಲ್ಲಿ ನೌಕರನಾಗಿದ್ದಾನೆ. ಭಾನುವಾರ ಸಂಜೆ ಸಮಯದಲ್ಲಿ ಆರೋಪಿ ಚಂದ್ರಪ್ಪ…
ಬಂಗಾರಪ್ಪನವರಿಗೆ ‘ಸೋಲಿಲ್ಲದ ಸರದಾರ’ನ ಪಟ್ಟ ಕೊಟ್ಟಿದ್ದ ಕಾರಿನ ನಂಬರ್ ಪಡೆದ ಗೀತಾ ಶಿವರಾಜ್‌ಕುಮಾರ್..!! |Parliament Election
ಬಂಗಾರಪ್ಪನವರಿಗೆ ‘ಸೋಲಿಲ್ಲದ ಸರದಾರ’ನ ಪಟ್ಟ ಕೊಟ್ಟಿದ್ದ ಕಾರಿನ ನಂಬರ್ ಪಡೆದ ಗೀತಾ ಶಿವರಾಜ್‌ಕುಮಾರ್..!! ಶಿವಮೊಗ್ಗ – ತಂದೆಯ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿರುವ ಮಾಜಿ ಮುಖ್ಯಮಂತ್ರಿ ದಿ. ಸಾರೇಕೊಪ್ಪ ಬಂಗಾರಪ್ಪ ಅವರ ಪುತ್ರಿ, ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಗೀತಾ ಶಿವರಾಜ್‌ಕುಮಾರ್ ಈಗ ಶಿವಮೊಗ್ಗದಲ್ಲಿ ಬಾಡಿಗೆ ಮನೆ ಮಾಡಿ, ಪ್ರಚಾರಕ್ಕೆ ಹೊಸ ಕಾರನ್ನೂ ಖರೀದಿ ಮಾಡಿದ್ದಾರೆ. ಈ ಕಾರಿನ ನಂಬರ್ ಈಗ ಆಕರ್ಷಣೆಗೆ ಕಾರಣವಾಗಿದೆ. ತಮ್ಮ ತಂದೆಯ ಲಕ್ಕಿ ಕಾರಿನ ನಂಬರ್ ಅನ್ನೇ ಹೊಸ ಕಾರಿಗೂ ಪಡೆದಿದ್ದು ಅದರಲ್ಲೇ…
Ripponpete | ಹಳೇ ಸಂತೆ ಮೈದಾನದಲ್ಲಿ ರಾತ್ರೋರಾತ್ರಿ ಅಕ್ರಮ ಶೆಡ್ ನಿರ್ಮಾಣ – ಗ್ರಾಮಾಡಳಿತದಿಂದ ತೆರವು
Ripponpete | ಹಳೇ ಸಂತೆ ಮೈದಾನದಲ್ಲಿ ರಾತ್ರೋರಾತ್ರಿ ಅಕ್ರಮ ಶೆಡ್ ನಿರ್ಮಾಣ – ಗ್ರಾಮಾಡಳಿತದಿಂದ ತೆರವು ರಿಪ್ಪನ್ ಪೇಟೆ : ಇಲ್ಲಿನ ಶಿವಮೊಗ್ಗ ರಸ್ತೆಯ ಹಳೆ ಸಂತೆ ಮೈದಾನದಲ್ಲಿ ರಾತ್ರೋರಾತ್ರಿ ಅಕ್ರಮವಾಗಿ ಶೆಡ್ಡುಗಳು ಉದ್ಬವವಾಗಿರುವ ಘಟನೆ ನಡೆದಿದ್ದು, ವಿಷಯ ತಿಳಿಯುತಿದ್ದಂತೆ ಗ್ರಾಮಾಡಳಿತ ಅಕ್ರಮ ಶೆಡ್ ಗಳನ್ನು ತೆರವುಗೊಳಿಸಿದೆ. ಬರುವೆ ಶಾಲೆ ಸಮೀಪದಲ್ಲಿರುವ ಸ.ನಂ 43 ರ ಹಳೇ ಸಂತೆ ಮೈದಾನದಲ್ಲಿ ಶನಿವಾರ ರಾತ್ರಿ ಏಕಾಏಕಿ ಹಸಿರು ಶೆಡ್ , ಹಾಗೂ ಬೇಲಿಯನ್ನು ನಿರ್ಮಿಸಿ ಸರ್ಕಾರಿ ಜಾಗವನ್ನು ಅತಿಕ್ರಮಿಸುವ…
ಸಾಗರ,ರಿಪ್ಪನ್‌ಪೇಟೆ ಹಾಗೂ ಆನಂದಪುರ ಸೇರಿದಂತೆ ವಿವಿಧೆಡೆ ನಾಳೆ (10-03-2024) ವಿದ್ಯುತ್ ವ್ಯತ್ಯಯ
ಸಾಗರ,ರಿಪ್ಪನ್‌ಪೇಟೆ ಹಾಗೂ ಆನಂದಪುರ ಸೇರಿದಂತೆ ವಿವಿಧೆಡೆ ನಾಳೆ (10-03-2024) ವಿದ್ಯುತ್ ವ್ಯತ್ಯಯ 110/33/11ಕೆ.ವಿ. ಸಾಗರ ವಿ.ವಿ ಕೇಂದ್ರದ ತ್ರೈಮಾಸಿಕ ನಿರ್ವಹಣೆ ಹಿನ್ನಲೆಯಲ್ಲಿ 10.03.2024 ರಂದು ಭಾನುವಾರ ಬೆಳಿಗ್ಗೆ 10:00 ರಿಂದ ಸಂಜೆ 6:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 10.03.2024 ರಂದು ಬೃಹತ್ ಕಾಮಗಾರಿ ವಿಭಾಗ, ಶಿವಮೊಗ್ಗ ಇವರು ರೇಲ್ವೆ ಟ್ರ್ಯಾಕ್ಷನ್ ಕಾಮಗಾರಿಗೆ ಸಂಬಂಧಿಸಿದಂತೆ ಹೊಸದಾಗಿ ನಿರ್ಮಿಸುತ್ತಿರುವ 110 ಕೆವಿ ಮಾರ್ಗವನ್ನು 110 ಕೆವಿ ಬಸ್ ಬಾರ್ ಗೆ ಜೋಡಿಸುವ ಕಾಮಗಾರಿಯ…
Ripponpete | ವಿವಿಧಡೆಯಲ್ಲಿ ಶಿವನಾಮ ಸ್ಮರಣೆ
ವಿವಿಧಡೆಯಲ್ಲಿ ಶಿವನಾಮ ಸ್ಮರಣೆ ರಿಪ್ಪನ್‌ಪೇಟೆ;-ಸಮೀಪದ ಇತಿಹಾಸ ಪ್ರಸಿದ್ದ ಶ್ರೀಕ್ಷೇತ್ರ ಗುಳಿಗುಳಿ ಶಂಕರೇಶ್ವರ ದೇವಸ್ಥಾನ, ಬೈರಾಪುರ ಉದ್ಭವ ಕಂತೆ ಸಿದ್ದೇಶ್ವರ ದೇವಸ್ಥಾನ ಮತ್ತು ಕೋಡೂರು ಶಂಕರೇಶ್ವರ ದೇವಸ್ಥಾನ,ಬರುವೆ ಕಲಾನಾಥ ರಾಮೇಶ್ವರ ದೇವಸ್ಥಾನ,ಹುಂಚದ ಕಮಟೇಶ್ವರ ದೇವಸ್ಥಾನ,ಹಾಲುಗುಡ್ಡೆಯ ಹಾಲರಾಮೇಶ್ವರ ದೇವಸ್ಥಾನ ಗವಟೂರು ರಾಮೇಶ್ವರದೇವಸ್ಥಾನ,ಕುಕ್ಕಳಲೇ ಕಾಶಿವಿಶ್ವನಾಥ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಇಂದು ವಿಶೇಷ ಪೂಜೆ ಮತ್ತು ರುದ್ರಾಭಿಷೇಕ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಮುಂಜಾನೆಯಿಂದಲೇ ಭಕ್ತರು ತಂಡೋಪತಂಡವಾಗಿ ದೇವಸ್ಥಾನಕ್ಕೆ ತೆರಳಿ ಶಿವ ನಾಮ ಸ್ಮರಣೆಯನ್ನು ಜಪಿಸಿದರು. ದೇವಸ್ಥಾನಗಳಲ್ಲಿ ಭಕ್ತರ ಸಮೂಹ ಸರತಿ ಸಾಲಿನಲ್ಲಿ…
Ripponpete | ಕಾರಗೋಡು ಕಲಾನಾಥೇಶ್ವರ ಪರಿವಾರ ದೇವತೆಗಳ ಪುನರ್ ಪ್ರತಿಷ್ಟಾಪನಾ ಮಹೋತ್ಸವ ಧರ್ಮಸಮಾರಂಭ
ಕಾರಗೋಡು ಕಲಾನಾಥೇಶ್ವರ ಪರಿವಾರ ದೇವತೆಗಳ ಪುನರ್ ಪ್ರತಿಷ್ಟಾಪನಾ ಮಹೋತ್ಸವ ಧರ್ಮಸಮಾರಂಭ ರಿಪ್ಪನ್‌ಪೇಟೆ ;- ಧಾರ್ಮಿಕ ಆಚರಣೆ ಮನುಷ್ಯನಿಗೆ ಶಾಂತಿ ನೆಮ್ಮದಿಯನ್ನು ನೀಡುತ್ತವೆಂದು ಸದಾನಂದ ಶಿವಯೋಗಾಶ್ರಮದ ಮೂಲೆಗದ್ದೆ ಮಠದ ಮ.ನಿ.ಪ್ರ.ಆಬಿನವ ಚನ್ನಬಸವ ಮಹಾಸ್ವಾಮಿಜಿ ಹೇಳಿದರು. ಸಮೀಪದ ಕಾರಗೋಡು ಗ್ರಾಮದಲ್ಲಿ ಕಲಾನಾಥೇಶ್ವರ ಮತ್ತು ಪರಿವಾರ ದೇವತೆಗಳ ಪುನರ್ ಪ್ರತಿಷ್ಟಾಪನಾ ಕಾರ್ಯಕ್ರಮದ ಧರ್ಮಸಮಾರಂಭದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಜೀವನದಲ್ಲಿ ಸಾಧನೆಯ ಗುರಿ ತಲುಪಲು ಗುರುವಿನ ಕಾರುಣ್ಯ ಅಗತ್ಯ. ಮಹಾ ಶಿವರಾತ್ರಿಯ ದಿನದೊಂದು ಭವವಂತನ ನಾಮಸ್ಮರಣೆ ಪುಣ್ಯದ ಕೆಲಸವನ್ನು ಮಾಡುವುದರಿಂದ ಪುಣ್ಯ…
Ripponpete | ಪಿಎಸ್‌ಐ ನಿಂಗರಾಜ್ ನೇತೃತ್ವದಲ್ಲಿ ಪೊಲೀಸ್ ಪಥಸಂಚಲನಾ
Ripponpete | ಪಿಎಸ್‌ಐ ನಿಂಗರಾಜ್ ನೇತೃತ್ವದಲ್ಲಿ ಪೊಲೀಸ್ ಪಥಸಂಚಲನಾ ರಿಪ್ಪನ್‌ಪೇಟೆ : ಬರುವ ಲೋಕಸಭಾ ಚುನಾವಣೆಯ ಅಂಗವಾಗಿ ಇಲ್ಲಿನ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬಂದಿರುವ ಪಿ.ಎಸ್.ಐ ತಮ್ಮ ಠಾಣೆಯ ಸಿಬ್ಬಂದಿಗಳೊಂದಿಗೆ ಪಥಸಂಚಲ ನಡೆಸುವ ಮೂಲಕ ಗ್ರಾಮದ ಪರಿಚಯವನ್ನು ಮಾಡಿಕೊಂಡರು. ಇಂದು ಬೆಳಗ್ಗೆ ಠಾಣೆಯಿಂದ ಹೊರಟು ವಿನಾಯಕ ವೃತ್ತದ ಮಾರ್ಗದ ಮೂಲಕ ತೀರ್ಥಹಳ್ಳಿ-ಹೊಸನಗರ-ಸಾಗರ-ಶಿವಮೊಗ್ಗ ನಾಲ್ಕು ರಸ್ತೆಯಲ್ಲಿ ಕಾಲ್ನಡಿಗೆಯ ಮೂಲಕ ಪಥಸಂಚಲನೆ ನಡೆಸಿ ವಾಹನಗಳ ದಟ್ಟಣೆ ಮತ್ತು ಶಾಲಾ ಕಾಲೇಜ್ ರಸ್ತೆಯಲ್ಲಿ ವಾಹನಗಳ ಸಂಚಾರ ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳ ಕುರಿತು…
Ripponpete | ಕೋಳಿ ತ್ಯಾಜ್ಯಗಳಿಂದ ಮಲೀನವಾಗುತ್ತಿರುವ ಗವಟೂರು ಹೊಳೆಯ ನೀರು – ಕಣ್ಮುಚ್ಚಿ ಕುಳಿತಿದೆ ಗ್ರಾಮಾಡಳಿತ..!!
ಕೋಳಿ ತ್ಯಾಜ್ಯಗಳಿಂದ ಮಲೀನವಾಗುತ್ತಿರುವ ಗವಟೂರು ಹೊಳೆಯ ನೀರು – ಕಣ್ಮುಚ್ಚಿ ಕುಳಿತಿದೆ ಗ್ರಾಮಾಡಳಿತ ರಿಪ್ಪನ್‌ಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಪದೇಶಗಳ ಜೀವನದಿಯಾಗಿರುವ ಶರ್ಮಣ್ಯಾವತಿ(ಗವಟೂರು ಹೊಳೆ) ನದಿ ಗ್ರಾಮಾಡಳಿತದ ದಿವ್ಯ ನಿರ್ಲಕ್ಷ್ಯದಿಂದ ದಿನೇ ದಿನೆ ಕಲುಷಿತಗೊಳ್ಳುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶರ್ಮಣ್ಯಾವತಿ ನದಿಯ ಎರಡು ಇಕ್ಕೆಲಗಳಲ್ಲಿ ಕೋಳಿ ತ್ಯಾಜ್ಯಗಳನ್ನು ಎಸೆಯುವ ಮೂಲಕ ಕಿಡಿಗೇಡಿಗಳು ತಮ್ಮ ವಿಕೃತಿಯನು ಮೆರೆಯುತಿದ್ದು,ಸೂರ್ಯೋದಯಕ್ಕೂ ಮುಂಚೆಯೆ ನದಿಯ ಬಳಿ ಬಂದು ತ್ಯಾಜ್ಯ ಎಸೆಯುತ್ತಾರೆ. ಕಸ, ಕಡ್ಡಿಗಳು, ಮದ್ಯದ ಬಾಟಲಿಗಳು, ವಿವಿಧ ತ್ಯಾಜ್ಯಗಳು, ಪ್ಲಾಸ್ಟಿಕ್‌ಗಳು, ಮನೆಯ ತ್ಯಾಜ್ಯವೂ…