ರಿಪ್ಪನ್‌ಪೇಟೆಯಲ್ಲಿ ಅಷ್ಟಲಕ್ಷ್ಮಿ ಹವನ – ನವರಾತ್ರಿ ಧಾರ್ಮಿಕ ವೈಭವ
ರಿಪ್ಪನ್‌ಪೇಟೆಯಲ್ಲಿ ಅಷ್ಟಲಕ್ಷ್ಮಿ ಹವನ – ನವರಾತ್ರಿ ಧಾರ್ಮಿಕ ವೈಭವ ರಿಪ್ಪನ್‌ಪೇಟೆ: ಪಟ್ಟಣದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀರಾಮ ಮಂದಿರದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ನವರಾತ್ರಿ ಪ್ರಯುಕ್ತ ಅಷ್ಟಲಕ್ಷ್ಮಿ ಹವನವನ್ನು ಆಯೋಜಿಸಲಾಯಿತು. ಜಿ.ಎಸ್.ಬಿ ಸಮಾಜದ ಅನೇಕ ಬಂಧುಗಳು ಭಾಗವಹಿಸಿ ಭಕ್ತಿಪೂರ್ಣವಾಗಿ ಕಾರ್ಯಕ್ರಮವನ್ನು ನೆರವೇರಿಸಿದರು. ನವರಾತ್ರಿಯ ಸಂದರ್ಭದಲ್ಲಿ ‘ಅಖಂಡ ದೀಪಪ್ರಜ್ವಲನೆ’ ಅಂದರೆ ಒಂಭತ್ತು ದಿನಗಳ ಕಾಲ ನಿರಂತರವಾಗಿ ದೀಪವನ್ನು ಬೆಳಗಿಸುವುದು, ಶ್ರೀ ದೇವಿಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತಶತೀ ಪಾಠ, ದೇವಿಭಾಗವತ, ಬ್ರಹ್ಮಾಂಡಪುರಾಣದಲ್ಲಿನ ಲಲಿತೋಪಾಖ್ಯಾನ ಪಾರಾಯಣ, ಲಲಿತಾಪೂಜೆ, ಸರಸ್ವತಿಪೂಜೆ,…