ಮದ್ಯಪಾನ ಮಾಡಿ ಅಂಬುಲೆನ್ಸ್ ಚಾಲನೆ – ಡ್ರೈವರ್ ಗೆ ಬಿತ್ತು ಭಾರಿ ದಂಡ

ಮದ್ಯಪಾನ ಮಾಡಿ ಅಂಬುಲೆನ್ಸ್ ಚಾಲನೆ – ಡ್ರೈವರ್ ಗೆ ಬಿತ್ತು ಭಾರಿ ದಂಡ

ಶಿವಮೊಗ್ಗ ಟ್ರಾಫಿಕ್ ಪೊಲೀಸರು ಮತ್ತೊಂದು ಪ್ರಕರಣದಲ್ಲಿ ದುಬಾರಿ ದಂಡ ವಿಧಿಸಿದ್ಧಾರೆ. ಇತ್ತೀಚೆಗೆಷ್ಟೆ ಕಾರು ಮಾಲೀಕರೊಬ್ಬರಿಗೆ ವಿವಿಧ ಪ್ರಕರಣಗಳಲ್ಲಿ ಕಾಯ್ದೆ ಉಲ್ಲಂಘಿಸಿದ ಆರೋಪದ ಅಡಿಯಲ್ಲಿ 27 ಸಾವಿರ ದಂಡ ವಿಧಿಸಿದ್ದ  ಟ್ರಾಫಿಕ್ ಪೊಲೀಶರು ನಿನ್ನೆ ಅಂದರೆ ದಿನಾಂಕ ಜೂನ್ 23, 2025 ರಂದು   ವಾಹನ ತಪಾಸಣೆ ವೇಳೆ, ಆಂಬುಲೆನ್ಸ್  ಚಾಲಕನಿಗೆ ಡ್ರಂಕ್ & ಡ್ರೈವ್ ಆರೋಪದ ಅಡಿಯಲ್ಲಿ ಕೋರ್ಟ್ ಮೂಲಕ 13,000 ರೂಪಾಯಿ ದಂಡ ವಿಧಿಸಿದೆ.

ನಗರದ ಐ.ಬಿ. ವೃತ್ತದಲ್ಲಿ ಪಶ್ಚಿಮ ಸಂಚಾರಿ ಠಾಣೆಯ ಪಿಎಸ್‌ಐ ತಿರುಮಲೇಶ್ ಮತ್ತು ಅವರ ಸಿಬ್ಬಂದಿ ವಾಹನ ತಪಾಸಣೆಯ ಸಂದರ್ಭದಲ್ಲಿ ಆಂಬುಲೆನ್ಸ್ ಒಂದನ್ನು ತಡೆದು ನಿಲ್ಲಿಸಿ ಚಾಲಕನನ್ನು ಡ್ರಂಕ್​ & ಡ್ರೈವ್ ಪರೀಕ್ಷೆಗೆ ಒಳಪಡಿಸಿದ್ದರು. ಈ ವೇಳೆ ಚಾಲಕ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ.

ಅಲ್ಲದೆ ವಾಹನ ಇನ್ಸುರೆನ್ಸ್​ ಸಹ ಲ್ಯಾಪ್ಸ್ ಆಗಿದ್ದ ಹಿನ್ನೆಲೆಯಲ್ಲಿ ಈ ಸಂಬಂಧ ಕೋರ್ಟ್​ಗೆ ಚಾರ್ಜ್​ ಶೀಟ್​ ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಕೋರ್ಟ್  13,000 ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.