ಚರ್ಚ್ ಆವರಣದಲ್ಲೇ ಹೊಡೆದಾಟ : ಓರ್ವ ನಿಗೆ ತೀವ್ರ ಪೆಟ್ಟು
ಶಿವಮೊಗ್ಗ : ಹೊಳೆಹೊನ್ನೂರು ಸಮೀಪದ ಸದಾಶಿವ ಕ್ಯಾಂಪ್ ನಲ್ಲಿ ಚರ್ಚ್‌ನ ಹಣಕಾಸಿನ ವಿಚಾರಕ್ಕೆ ಎರಡು ಬಣಗಳ ನಡುವೆ ನಿನ್ನೆ ಭಾರೀ ಹೊಡೆದಾಟ ನಡೆದಿದೆ.
ಚರ್ಚ್‌ನ್ನು ನೋಡಿಕೊಳ್ಳುತ್ತಿರುವ ಒಂದು ಗುಂಪು ಹಾಗೂ ಭಕ್ತರ ಪರವಾದ ಇನ್ನೊಂದು ಗುಂಪಿನ ನಡುವೆ ಚರ್ಚ್‌ಗೆ ಬಂದಿರುವ ಹಣಕಾಸಿನ ವಿಚಾರವಾಗಿ ವಿವಾದವಿತ್ತು. ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದವು.
ನಡುವೆ ಚರ್ಚ್‌ನಲ್ಲಿ ಪ್ರತಿ ಭಾನುವಾರ ಪ್ರಾರ್ಥನೆ ಎಂದಿನಂತೆ ನಡೆದುಕೊಂಡು ಬಂದಿತ್ತು. ನಿನ್ನೆ ಚರ್ಚ್‌ನ ಆವರಣದಲ್ಲಿಯೇ ಹೊಡೆದಾಟ ಇದೇ ವಿಚಾರಕ್ಕೆ ನಡೆದಿದೆ.
ಹುಂಡಿ ಕಾಸಿನ ವಿಚಾರವಾಗಿ ವಿವಾದ ಭುಗಿಲೆದ್ದಿದೆ. ಮಾತಿಗೆ ಮಾತು ಬೆಳೆದು ಪರಸ್ಪರದ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಓರ್ವನಿಗೆ ಗಂಭೀರ ಗಾಯವಾಗಿದೆ.
ಘಟನೆ ಸಂಬಂಧ ಭಕ್ತರು ಚರ್ಚ್ ಉಸ್ತುವಾರಿ ಹೊತ್ತಿರುವವರು ತಮ್ಮ ಮೇಲೆ ಹಲ್ಲೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಹೊಳೆಹೊನ್ನೂರು ಪೊಲೀಸರು ವಿಚಾರಣೆ ನಡೆಸ್ತಿದ್ದು, ಚರ್ಚ್ ಬಳಿಯಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಿದ್ದಾರೆ.