ಜೆಎನ್‌ಎನ್ ಸಿಇ ಕಾಲೇಜಿಗೆ ನಾಲ್ಕು ರ್‍ಯಾಂಕ್
ಶಿವಮೊಗ್ಗ: ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ ಪರೀಕ್ಷೆಯಲಿ ಜೆಎನ್‌ಎನ್ ಸಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಎಂಟೆಕ್‌ನಲ್ಲಿ ಆಲಿಯಾ ವಸೀಮ್ ಪ್ರಥಮ ರ್‍ಯಾಂಕ್‌ನೊಂದಿಗೆ ಚಿನ್ನದ ಪದಕವನ್ನು, ಸ್ನೇಹಾ ಎಸ್. ಆರನೆಯ ರ್‍ಯಾಂಕನ್ನು ಪಡೆದಿದ್ದಾರೆ.
ಎಂಬಿಎ ವಿಭಾಗದ ವಿದ್ಯಾರ್ಥಿನಿಯರಾದ ಮೇಘಾ ಕೆ.ಪಿ ಹಾಗೂ ಅಮೃತಾ ಶ್ರೀಕಾಂತ್ ಜಾಧವ್ ಹತ್ತನೆಯ ರ್‍ಯಾಂಕನ್ನು ಪಡೆದಿದ್ದಾರೆ.
ಇವರಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಧ್ಯಕ್ಷ ಜಿಎಸ್ ನಾರಾಯಣರಾವ್ ಕಾರ್ಯದರ್ಶಿ ಎಸ್ ಎನ್ ನಾಗರಾಜ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಜೆಎನ್‌ಎನ್ಸಿಇ ಪ್ರಾಂಶುಪಾಲ ವೈ. ವಿಜಯಕುಮಾರ್, ಎಂಬಿಎ ವಿಭಾಗದ ನಿರ್ದೇಶಕ ಶ್ರೀಕಾಂತ್ , ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಜಲೇಶ್ ಕುಮಾರ್, ಬೋಧಕ- ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.