ಸಾಗರದಿಂದ ನಾಪತ್ತೆಯಾಗಿದ್ದ ಯುವಕ ರಿಪ್ಪನ್‌ಪೇಟೆಯಲ್ಲಿ ಪತ್ತೆ
ರಿಪ್ಪನ್‌ಪೇಟೆ : ಸಾಗರ ಪಟ್ಟಣದಿಂದ ನಾಪತ್ತೆಯಾಗಿದ್ದ ಯುವಕನನ್ನು ರಿಪ್ಪನ್‌ಪೇಟೆ ಪಟ್ಟಣದಲ್ಲಿ ಪೊಲೀಸರು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ಸಾಗರ ಪಟ್ಟಣದಲ್ಲಿರುವ ಮನೆಯಿಂದ ಮಾತು ಬಾರದ ಯುವಕನೊಬ್ಬ ಮನೆಯಿಂದ ನಾಪತ್ತೆಯಾಗಿದ್ದನು.ಪೋಷಕರು ಕುಟುಂಬಸ್ಥರ ಮನೆಯಲೆಲ್ಲಾ ವಿಚಾರಿಸಿ ಸ್ಥಳೀಯ ಠಾಣೆ ವಿಷಯ ಮುಟ್ಟಿಸಿದ್ದಾರೆ.
ಮಾತು ಬಾರದ ಯುವಕ ಸಾಗರದಿಂದ ಬಸ್ ನಲ್ಲಿ ಹೊಸನಗರಕ್ಕೆ ಬಂದು ಅಲ್ಲಿಂದ ಶಿವಮೊಗ್ಗ ಬಸ್ ಗೆ ಹತ್ತಿರುವ ಮಾಹಿತಿ ಪಡೆದ ಪಟ್ಟಣದ ಪಿಎಸ್‌ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳು ರಿಪ್ಪನ್‌ಪೇಟೆ ವಿನಾಯಕ ವೃತ್ತದಲ್ಲಿ ಯುವಕನನ್ನು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.

