Headlines

Accident | ಗರ್ತಿಕೆರೆಯಲ್ಲಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ – ಇಬ್ಬರು ಗಂಭೀರ | ಮಣಿಪಾಲ್ ಗೆ ರವಾನೆ

Accident | ಗರ್ತಿಕೆರೆಯಲ್ಲಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ – ಇಬ್ಬರು ಗಂಭೀರ | ಮಣಿಪಾಲ್ ಗೆ ರವಾನೆ


ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ ಮತ್ತು ಮಗನ ಕಾಲು ತುಂಡಾಗಿರುವ ಘಟನೆ ಶಿವಮೊಗ್ಗ(Shivamogga) ಜಿಲ್ಲೆಯ ಹೊಸನಗರ(Hosanagara) ತಾಲೂಕಿನ ಗರ್ತಿಕೆರೆಯಲ್ಲಿ(garthikere) ಶನಿವಾರ ರಾತ್ರಿ 08 ಗಂಟೆ ಸುಮಾರಿಗೆ ನಡೆದಿದೆ.


ಗಾಯಾಳುಗಳನ್ನು ಇಲ್ಲಿನ ಅವುಕ ನಿವಾಸಿಗಳಾದ ಗಿರಿಯಪ್ಪ ಮತ್ತು ಆತನ ಪುತ್ರ ಮಂಜುನಾಥ್ ಎಂದು ಗುರುತಿಸಲಾಗಿದೆ.

ಹುಂಚದಕಟ್ಟೆ ಕಡೆಯಿಂದ ಗರ್ತಿಕೆರೆ ಕಡೆಗೆ ಬರುತ್ತಿದ್ದ ಬೈಕ್‌ಗೆ ಸಾಗರ್ ಬಾಳೆಕಾಯಿ ಮಂಡಿ ಬಳಿ ಎದುರಿನಿಂದ ಬಂದ ಟ್ರ್ಯಾಕ್ಟರ್ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

About The Author

Leave a Reply

Your email address will not be published. Required fields are marked *