ರಿಪ್ಪನ್‌ಪೇಟೆಯಲ್ಲಿ ಲೇಔಟ್‌ಗಳು ನಕಲಿ ದಾಖಲೆ ಸೃಷ್ಟಿಸಿ ನಿಯಮವನ್ನು ಉಲ್ಲಂಘಿಸಿದ್ದಾರೆಂಬ ಗ್ರಾಪಂ ಸದಸ್ಯರ ಆರೋಪಕ್ಕೆ ಸ್ಪಷ್ಟನೆ
ರಿಪ್ಪನ್‌ಪೇಟೆ;-ಇಲ್ಲಿನ ಗ್ರಾಮಪಂಚಾಯ್ತಿ ವಸತಿ ನಿವೇಶನ ಉದ್ದೇಶಕ್ಕಾಗಿ ಭೂಪರಿವರ್ತನೆಯನ್ನು ಮಾಡಿರುವ ಕೆಲವು ಲೇಔಟ್‌ಗಳು ನಿಯಮವನ್ನು ಉಲ್ಲಂಘಿಸಿದ್ದಾರೆಂಬ ಗ್ರಾಮ ಪಂಚಾಯ್ತಿ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ ಆರೋಪದಲ್ಲಿ ಯಾವುದೇ ಹುರುಳಿಲ್ಲ ಗ್ರಾಪಂ ಸದಸ್ಯನಾಗಿ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚಕಾರವೆತ್ತದೇ ಈಗ ಬಹಿರಂಗವಾಗಿ ಆರೋಪಿಸುತ್ತಿರುವುದು ಖಂಡನೀಯ ಎಂದು ಗ್ರಾಮ ಪಂಚಾಯ್ತಿ ಸದಸ್ಯ ನಿರೂಪ್ ಕುಮಾರ್ ಹೇಳಿದರು.
ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಗವಟೂರು ಗ್ರಾಮದ ಸರ್ವೇ ನಂ 361/2 ರಲ್ಲಿ 1.09 ಎಕರೆಗುಂಟೆ ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತಿಸಲು ಖತಿಜಾಭಿ ಕೋಂ ಖಾಸಿಂಸಾಬ್ ಇವರು ಅರ್ಜಿಸಲ್ಲಿಸಿರುತ್ತಾರೆ.ಅದರೆ ಈ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಇರುವುದು ವಾಸ್ತವವಾಗಿದ್ದು ಗ್ರಾಮ ಪಂಚಾಯ್ತಿ ಅಭಿವೃದ್ದಿ ಆಧಿಕಾರಿಗಳು ನಿರಾಕ್ಷೇಪಣಾ ಪತ್ರ ನೀಡಿರುತ್ತಾರೆ ಎಂದು ತಿಳಿಸಿದರು.
ಈ ಲೇಔಟ್ ಗೆ ನಗರ ಮತ್ತು ಗ್ರಾಮೀಣ ಯೋಜನಾ ಇಲಾಖೆಯವರು ಕಾನೂನು ಬದ್ದವಾಗಿಯೇ ತಾಂತ್ರಿಕ ಅನುಮೋದನೆ ನೀಡಿದ್ದಾರೆಂದು ಸ್ಪಷ್ಟನೆ ನೀಡಿದರು
ಲೇಔಟ್ ಬಗ್ಗೆ ಆರೋಪ ಮಾಡುತ್ತಿರುವ ಗ್ರಾ ಪಂ ಸದಸ್ಯರು ಈ ಹಿಂದೆ ಖಾಸಗಿ ಲೇಔಟ್ ಮಾಲೀಕರೊಬ್ಬರಿಗೆ ಬ್ಲಾಕ್ ಮೇಲ್ ಮಾಡಿ ಸಿಂಥೆಟಿಕ್ಸ್ ಡ್ರಮ್ ಪಡೆದಿರುವುದ್ದು ಜಗಜ್ಜಾಹಿರಾಗಿದೆ.ಎರಡು ವರ್ಷ ಸುಮ್ಮನಿದ್ದ ಇವರು ಈಗ ತಿರುಗಿ ಬಿದ್ದಿದ್ದಾರೆ ಕಾರಣ ತಮ್ಮ ಕುಟುಂಬದ ಒಡೆತನದ ಜಮೀನಿಗೆ ಸಂಪರ್ಕ ಕಲ್ಪಿಸುವ ರಸ್ತೆ ವಿಚಾರದಲ್ಲಿ ಈ ರೀತಿಯಲ್ಲಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಲೇಔಟ್ ಗೆ ಸಂಬಂಧಿಸಿದ ದಾಖಲೆಗಳನ್ನು ಜೋಪಾನ ಮಾಡಿಕೊಳ್ಳುವ ಜವಾಬ್ದಾರಿ ಗ್ರಾಮಾಡಳಿತದ್ದು ಅಲ್ಲಿ ಮೂಲ ದಾಖಲೆಯಿಲ್ಲರುವುದು ನಮಗೆ ಸಂಬದಿಸಿರುವುದಿಲ್ಲ ಇದಕ್ಕೆ ಗ್ರಾಪಂ ಅಧಿಕಾರಿಗಳು ಜವಬ್ದಾರರಾಗಿರುತ್ತಾರೆ.
ಲೇಔಟ್ ಮಾಡುವಾಗ ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸುವಂತಹ ರಸ್ತೆ ಸಂಪರ್ಕ ಬೀದಿ ದೀಪ ಒಳಚರಂಡಿ ಪಾರ್ಕ್ ಸಿಎ ನಿವೇಶನಗಳ ಹೀಗೆ ಮೂಲಸೌಲಭ್ಯಗಳ ನೀಲನಕ್ಷೆಯಂತೆ ನಗರ ಮತ್ತು ಗ್ರಾಮೀಣ ಯೋಜನೆಯವರ ತಾಂತ್ರಿಕ ಅನುಮೋದನೆ ನೀಡುತ್ತಾರೆ.ಮತ್ತು ಈಗಾಗಲೇ ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಲೇಔಟ್ ಮಾಲೀಕರ ಬಗ್ಗೆ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಬ್ಲಾಕ್ ಮೇಲ್ ಮಾಡುವವರ ಸಂಖ್ಯೆ ದಿನ ನಿತ್ಯ ಹೆಚ್ಚಾಗುತ್ತಿದೆ ಈ ಬಗ್ಗೆ ಹೆದರು ಪ್ರಶ್ನೆಯೇ ಇಲ್ಲ ಎಲ್ಲಾದನ್ನು ಎದುರಿಸಲು ಸಿದ್ದವಿರುವುದಾಗಿ
ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅನ್ವರ್ ಹಾಜರಿದ್ದರು.