ಗರ್ಲ್ ಫ್ರೆಂಡ್ ಎಕ್ಸ್ಚೇಂಜ್ ದಂಧೆ ಬೆಳಕಿಗೆ – ಪೊಲೀಸರಿಂದ ಇಬ್ಬರ ಬಂಧನ

ಗರ್ಲ್ ಫ್ರೆಂಡ್ ಎಕ್ಸ್ಚೇಂಜ್ ದಂಧೆ ಬೆಳಕಿಗೆ – ಪೊಲೀಸರಿಂದ ಇಬ್ಬರ ಬಂಧನ

ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಗರ್ಲ್ ಫ್ರೆಂಡ್ ಎಕ್ಸ್​​ಚೇಂಜ್ ದಂಧೆ ಬೆಳಕಿಗೆ ಬಂದಿದೆ. ‘ಸ್ವಿಂಗರ್ಸ್’ ಎನ್ನುವ ಹೆಸರಿನಲ್ಲಿ ಪಾರ್ಟಿಗೆ ಎಂದು ಕರೆದು ಪರಸ್ಪರ ಗರ್ಲ್ ಫ್ರೆಂಡ್ ಎಕ್ಸ್ ಚೇಂಜ್ ಮಾಡಿಕೊಳ್ಳುವ ಈ ದಂಧೆಯಲ್ಲಿ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಗೆಳತಿಯನ್ನು ಪಾರ್ಟಿಗೆ ಎಂದು ಕರೆದು ಸ್ನೇಹಿತನೊಂದಿಗೆ ಸೇರಿ ಅತ್ಯಾಚಾರವೆಸಗಿದ್ದು ಬೆಳಕಿಗೆ ಬಂದಿದೆ. ಹರೀಶ್ ಹಾಗೂ ಹೇಮಂತ್ ಬಂಧಿತ ಆರೋಪಿಗಳು. ಇವರಿಬ್ಬರೂ ಪರಸ್ಪರ ಗರ್ಲ್ ಫ್ರೆಂಡ್ಸ್ ಅದಲು ಬದಲು ಮಾಡಿಕೊಂಡು ಸಹಕರಿಸುವಂತೆ ಒತ್ತಾಯಿಸಿದ್ದು, ಸಹಕರಿಸದಿದ್ದಾಗ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿಯೊಬ್ಬಳು ನೀಡಿದ್ದ ದೂರಿನ ಅನ್ವಯ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಹರೀಶ್, ಆಕೆಯನ್ನು ಪ್ರೀತಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಬೆಂಗಳೂರು ಹೊರವಲಯದಲ್ಲಿ ಪಾರ್ಟಿಗೆಂದು ಕರೆದೊಯ್ದು ಸ್ನೇಹಿತನೊಂದಿಗೆ ಸಹಕರಿಸುವಂತೆ ಒತ್ತಾಯಿಸಿದ್ದ. ಆಕೆ ಒಪ್ಪದಿದ್ದಾಗ ಆರೋಪಿಗಳು ಅತ್ಯಾಚಾರವೆಸಗಿದ್ದಾರೆಂದು ದೂರು ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸ್ವಿಂಗರ್ಸ್ ವಾಟ್ಸ್ ಗ್ರೂಪ್ ವಾಟ್ಸ್ ಗ್ರೂಪ್ ಮಾಡಿಕೊಂಡಿದ್ದ ‘ಸ್ವಿಂಗರ್ಸ್’ ಟೀಂ, ಬೆಂಗಳೂರು ಹೊರ ವಲಯದಲ್ಲಿ ಪಾರ್ಟಿ ಆಯೋಜನೆ ಮಾಡಿದ್ದರು. ಪಾರ್ಟಿಗೆ ಕಪಲ್ಸ್ ಜೊತೆಗೆ ಆಸಾಮಿಗಳು ತಮ್ಮ ಪ್ರಿಯತಮೆಯರನ್ನು ಪರಸ್ಪರ ಎಕ್ಸ್ ಚೇಂಜ್ ಮಾಡಿಕೊಳ್ಳುತ್ತಿದ್ದರು ಅಷ್ಟೇ ಅಲ್ಲ ಒಬ್ಬನ ಗರ್ಲ್ ಫ್ರೆಂಡ್ ಜೊತೆಗೆ ಮತ್ತೊಬ್ಬ ಬೆಡ್ ಶೇರ್ ಮಾಡುತ್ತಿದ್ದ. ಇದೇ ರೀತಿ ಯುವತಿಯನ್ನು ಹರೀಶ್ ಎಂಬಾತ ಕೂಪಕ್ಕೆ ದೂಡಿದ್ದ. ಒಪ್ಪದಿದ್ದಾಗ ಸ್ನೇಹಿತರ ಜೊತೆಗೆ ಸೇರಿ ಅತ್ಯಾಚಾರ ಮಾಡಿದ್ದಾನೆ.

ದೂರು ಆಧರಿಸಿ ಸಿಸಿಬಿ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳ ಮೊಬೈಲ್‌ ಪರಿಶೀಲನೆ ವೇಳೆ ಭಯಾನಕ‌ ಸತ್ಯ ಬಯಲಾಗಿದೆ. ಮೊಬೈಲ್ ನಲ್ಲಿ ಹತ್ತಾರು ಯುವತಿಯರ ಬೆತ್ತಲೆ ಫೋಟೊ ಪತ್ತೆಯಾಗಿವೆ. ಇನ್ನು ಏಕಾಂತದಲ್ಲಿದ್ದ ವಿಡಿಯೋಗಳನ್ನು ಸಹ ಆರೋಪಿಗಳು ರೆಕಾರ್ಡ್​ ಮಾಡಿಟ್ಟುಕೊಂಡಿರುವುದು ಪತ್ತೆಯಾಗಿದೆ. ಅದೇ ವೀಡಿಯೋ ತೋರಿಸಿ ಯುವತಿಗೆ ಬ್ಲಾಕ್ ಮೇಲ್ ಮಾಡುತ್ತಿರುವುದಾಗಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

Leave a Reply

Your email address will not be published. Required fields are marked *