ರಾಷ್ಟ್ರೀಯ ಕರಾಟೆ ಪಂದ್ಯಾವಳಿಗೆ ನಗರದ ಮೊಹಮದ್ ಬಿಲಾಲ್ ಆಯ್ಕೆ
ಶಿವಮೊಗ್ಗ: SGFI ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಗೆ ಶಿವಮೊಗ್ಗದ ಮೊಹಮದ್ ಬಿಲಾಲ್ ಆಯ್ಕೆಯಾಗಿದ್ದಾರೆ.
ಮಧ್ಯಪ್ರದೇಶದ ಇಂದೋರ್ ನಲ್ಲಿ ಡಿಸೆಂಬರ್ 19ರಿಂದ 24ರವರೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳುತ್ತಿದ್ದಾನೆ.
ದಾವಣಗೆರೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಪೈಕಿ ಮಹಮದ್ ಬಿಲಾಲ್ ಪದಕ ಪಡೆದಿರುವ ಏಕೈಕ ಕ್ರೀಡಾಪಟುವಾಗಿದ್ದಾನೆ. ಕಳೆದ ವರ್ಷ ಸಹ ಶಾಲಾ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಸಹ ಬಿಲಾಲ್ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಇದೀಗ ಎರಡನೇ ಬಾರಿ ಬಿಲಾಲ್ ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಪಡೆಯುವ ಮುಖಾಂತರ ಶಿವಮೊಗ್ಗ ಜಿಲ್ಲೆಗೆ ಖ್ಯಾತಿ ತಂದಿದ್ದಾನೆ.
ಜಿಲ್ಲಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಮುಖೀಬ್ ಅಹಮ್ಮದ್ ದರ್ವೆಶ್ ಮತ್ತು ಜುಗುನು ದಂಪತಿಗಳ ಪುತ್ರನಾಗಿದ್ದಾನೆ.
ಇಂಪೀರಿಯಲ್ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಮೊಹಮ್ಮದ್ ಬಿಲಾಲ್ ದರ್ವಶ್-62 ಕೆಜಿ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕರಾಟೆ ಸಂಘದ ಗೌರವಾಧ್ಯಕ್ಷ ಅಬ್ದುಲ್ ಘನಿ, ವಿನೋದ್ , ಮಂಜಪ್ಪ, ಮೀನಾ, ಇಂಪೀರಿಯಲ್ ಕಾಲೇಜು ಪ್ರಾಚಾರ್ಯ ಖಲೀಮುಲ್ಲಾ ಖಾನ್ , ವಿದ್ಯಾರ್ಥಿ ಮೊಹಮದ್ ಬಿಲಾಲ್, ಆತನ ತಂದೆ ಮುಖೀಬ್ ಅಹಮದ್ ಮೊದಲಾದವರಿದ್ದರು.
 
                         
                         
                         
                         
                         
                         
                         
                         
                         
                        