RIPPONPETE | ಸಮುದಾಯ ಆಸ್ಪತ್ರೆಯ ಜಾಗ ಒತ್ತುವರಿ ಆರೋಪ – ಸರ್ವೆಯಿಂದ ಹೊರಬಿತ್ತು ಸತ್ಯಾಂಶ
ರಿಪ್ಪನ್ಪೇಟೆ : ಇಲ್ಲಿನ ಹೊಸನಗರ ರಸ್ತೆಯ ಗವಟೂರಿನಲ್ಲಿ ಸಮುದಾಯ ಆಸ್ಪತ್ರೆಗೆ ಮೀಸಲಿಟ್ಟಿದ್ದ 5 ಎಕರೆ ಜಾಗ ಖಾಸಗಿಯವರಿಂದ ಒತ್ತುವರಿಯಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಸರ್ವೆ ಕಾರ್ಯ ಇಂದು ನಡೆದು ಯಾವುದೇ ಒತ್ತುವರಿಯಾಗದೇ ಇರುವ ವಿಚಾರ ಬೆಳಕಿಗೆ ಬಂದಿದೆ.
ಹೊಸನಗರ ರಸ್ತೆಯ ಗವಟೂರು ಗ್ರಾಮದಲ್ಲಿರುವ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾಯ್ದಿರಿಸಲಾಗಿರುವ ಜಾಗದಲ್ಲಿ ಸರ್ಕಾರದಿಂದ 30 ಲಕ್ಷ ರೂ. ವೆಚ್ಚದ ಬೇಲಿ ನಿರ್ಮಾಣ ಕಾಮಗಾರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿದ್ದಾರೆ.ಖಾಸಗಿಯವರಿಂದ ಜಾಗ ಒತ್ತುವರಿಯಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಶಾಸಕ ಬೇಳೂರು ಕೂಡಲೇ ಜಾಗದ ಸರ್ವೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಈ ಹಿನ್ನಲೆಯಲ್ಲಿ ಇಂದು ಕಂದಾಯ ಇಲಾಖೆಯ ಅಧಿಕಾರಿಗಳು ,ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಓ ಸಮ್ಮುಖದಲ್ಲಿ ಸರ್ವೆ ಕಾರ್ಯ ನಡೆದು ಸಮುದಾಯ ಆಸ್ಪತ್ರೆಗೆ ಮೀಸಲಿಟ್ಟಿದ್ದ 5 ಎಕರೆ ಜಾಗ ಒತ್ತುವರಿಯಾಗಿರುವುದಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದ್ದು ಫೆನ್ಸಿಂಗ್ ಕಾಮಗಾರಿ ಪ್ರಾರಂಭಗೊಂಡಿದೆ.
ಈ ಸಂಧರ್ಭದಲ್ಲಿ ಗ್ರಾಪ ಅಧ್ಯಕ್ಷರು ,ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯರಾದ ಆಸೀಫ಼್ ಭಾಷಾ ,ಚಂದ್ರೇಶ್ ಎನ್ , ಗಣಪತಿ ಗವಟೂರು ,ಪ್ರಕಾಶ್ ಪಾಲೇಕರ್ ,ಕಂದಾಯ ಇಲಾಖೆಯ ಸೈಯದ್ ಅಫ಼್ರೋಜ್ , ರಾಜು ಹಾಗೂ ಗ್ರಾಪಂ ಪಿಡಿಓ ನಾಗರಾಜ್ ಹಾಗೂ ಇನ್ನಿತರರಿದ್ದರು.