ಅಪಘಾತದಲ್ಲಿ ಗಾಯಗೊಂಡಿದ್ದ ನಾಗರಕೊಡಿಗೆ ಮಹೇಶ್ ಗೌಡ ನಿಧನ
ಹೊಸನಗರ ತಾಲೂಕಿನ ತ್ರಿಣಿವೆ ಗ್ರಾಮ ಪಂಚಾಯತಿಯ ಗೊರಗೋಡಿನ ದಿ. ಗಂಗಾಧರಪ್ಪ ಗೌಡರ ಪುತ್ರ ಮಹೇಶಗೌಡ (56) ಬುಧವಾರ ಸಂಜೆ ಕಾರ್ಗಡಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಅಡಿಕೆ ಕೊಯ್ಲು ಕತ್ತಿ ರಿಪೇರಿ ಮಾಡಿಸಿ ಮನೆಗೆ ಹಿಂದಿರುಗುತಿದ್ದಾಗ ಕಾರಣಗಿರಿ ಬಳಿಯಲ್ಲಿ ಏಕಾಏಕಿ ಜಾನುವಾರುಗಳು ಅಡ್ಡ ಬಂದು ಅವರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ಮಹೇಶಗೌಡರನ್ನು ಹೊಸನಗರದಲ್ಲಿ ಚಿಕಿತ್ಸೆಗೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಮಹೇಶಗೌಡ ಪತ್ನಿ, ಇಬ್ಬರು ಪುತ್ರರು, ಅಪಾರ ಬಂಧು-ಬಳಗದವರು ಸ್ನೇಹಿತ ವರ್ಗದವರನ್ನು ಅಗಲಿದ್ದಾರೆ.