ಮಠ ಸಿನಿಮಾದ ನಿರ್ದೇಶಕ ಗುರುಪ್ರಸಾದ್ ಆತ್ಮ*ಹತ್ಯೆ

ಮಠ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ

ಮಠ ಚಲನಚಿತ್ರದ ಖ್ಯಾತ ನಿರ್ದೇಶಕ ಗುರುಪ್ರಸಾದ್ ಅವರು ಇಂದು ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕನ ಹಳ್ಳಿಯ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾಲಗಾರರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಾದನಾಯಕನಹಳ್ಳಿಯ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ 2 ದಿನಗಳಿಂದ ಅವರ ರೂಮಿನಿಂದ ವಾಸನೆ ಬರುತ್ತಿರುವ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮಠ, ಎದ್ದೇಳು ಮಂಜುನಾಥ ಸೇರಿ ಕೆಲವು ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ಘಟನಾ ಸ್ಥಳಕ್ಕೆ ಮಾದನಾಯಕನ ಹಳ್ಳಿ ಪೊಲೀಸರು ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ. ಗುರುಪ್ರಸಾದ್‌ ಅವರು ಇತ್ತೀಚೆಗೆ ಎರಡನೇ ಮದುವೆ ಆಗಿದ್ದರು. ಅವರು ನಿನ್ನೆಯಷ್ಟೆ (ನವೆಂಬರ್ 2) ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

ಹಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್‌ ಆಗಿಯೂ ಕೆಲಸ ಮಾಡಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಡೆತ್‌ನೋಟ್‌ ಕೂಡ ಸಿಕ್ಕಿಲ್ಲ. 5 ಕನ್ನಡ ಚಿತ್ರಗಳನ್ನ ನಿರ್ದೇಶಿಸಿರುವ ಗುರುಪ್ರಸಾದ್ ಅವರು ಸಾಕಷ್ಟು ಜನರಿಗೆ ಪರಿಚಿತರು. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ.

1972ನೇ ನವೆಂಬರ್ 2 ಗುರುಪ್ರಸಾದ್ ಜನಿಸಿದ್ದರು. ರಾಮನಗರ ಜಿಲ್ಲೆಯ ಕನಕಪುರದಲ್ಲಿ ಗುರುಪ್ರಸಾದ್ ಜನಿಸಿದರು.2006 ರಲ್ಲಿ ಮಠ ಸಿನೆಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಆದರು. ಬಳಿಕ ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ರಂಗ ನಾಯಕ ಹಾಗೂ ಎರಡನೇ ಸಲ ಸೇರಿದಂತೆ ಹಲವು ಸಿನಿಮಾ ನಿರ್ದೇಶನ ಮಾಡಿದ್ದರು. ಇದೀಗ ಅಡೆಮಾ ಸಿನಿಮಾ ನಡೆಯುತ್ತಿತ್ತು. ಎದ್ದೇಳು ಮಂಜುನಾಥ ಚಲನಚಿತ್ರಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ಬಂದಿತ್ತು. ಅತ್ಯುತ್ತಮ ಚಿತ್ರಕಥೆಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಬಂದಿತ್ತು.

ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಜಗ್ಗೇಶ್, ಗುರುಪ್ರಸಾದ್ ಯಾರ ಮಾತು ಕೂಡ ಕೇಳುತ್ತಿರಲಿಲ್ಲ. ಗುರುಪ್ರಸಾದ್ ನಮ್ಮ ಮನೆಯಲ್ಲಿ ಬೆಳೆದಿರುವ ಹುಡುಗ. ಗುರುಪ್ರಸಾದ ರನ್ನು ನಾನು ಹೆಚ್ಚಿಗೆ ಮಾತನಾಡಿಸುತ್ತಿರಲಿಲ್ಲ. ಗುರುಪ್ರಸಾದ್ ಕುಡಿತದ ಚಟಕ್ಕೆ ಬಿದ್ದು ತುಂಬಾ ಹಾಳಾಗಿದ್ದ. ಒಳ್ಳೆಯ ಬರವಣಿಗೆ ತಾಕತ್ ಹೊಂದಿರುವ ವ್ಯಕ್ತಿಯಾಗಿದ್ದ. ಗುರುಪ್ರಸಾದ್ 1000 ಸಲ ಸಾಯುತ್ತೇನೆ ಎಂದು ಹೇಳಿದ್ದ. ಗುರುಪ್ರಸಾದ್ ಗೆ ನಾನು ಈ ಕುರಿತು ಬಹಳ ಸಲ ಬುದ್ಧಿವಾದ ಹೇಳಿದ್ದೆ.ಗುರುಪ್ರಸಾದ್ ಮೊದಲ ಪತ್ನಿ ಜೊತೆಗೂ ಸರಿಯಾಗಿ ಇರಲಿಲ್ಲ ಎಂದು ಅವರ ಸಾವಿಗೆ ಸಂತಾಪ ಸೂಚಿಸಿದರು.

Leave a Reply

Your email address will not be published. Required fields are marked *