PU RESULT 2024 | ಹೊಸನಗರ ಹೋಲಿ ರಿಡೀಮರ್ ಕಾಲೇಜಿಗೆ ಶೇ.100 ಫಲಿತಾಂಶ
ಹೊಸನಗರ : ಪಟ್ಟಣದ ಹೋಲಿ ರಿಡೀಮರ್ ಪದವಿ ಪೂರ್ವ ಕಾಲೇಜು ಇಂದು ಪ್ರಕಟಗೊಂಡ ದ್ವಿತೀಯ ಪಿಯು ಫಲಿತಾಂಶದಲ್ಲಿ ಶೇ. 100 ಫಲಿತಾಂಶದ ಸಾಧನೆ ಮಾಡಿ ಪಟ್ಟಣದ ಶೈಕ್ಷಣಿಕ ಪ್ರಗತಿಗೆ ಮತ್ತೊಂದು ಗರಿ ಮೂಡಿಸಿದೆ.
ವಿಜ್ಞಾನ ವಿಭಾಗದಲ್ಲಿ 36 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 28 ವಿದ್ಯಾರ್ಥಿಗಳು, ಹಾಗೂ ಕಲಾ ವಿಭಾಗದಲ್ಲಿ 10 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು ಎಲ್ಲರೂ ಉತ್ತಮವಾಗಿ ಪರೀಕ್ಷೆ ಎದುರಿಸಿ ಶಾಲೆಗೆ ಶೇ. 100 ಫಲಿತಾಂಶ ಗಳಿಸಿ ಕೊಟ್ಟಿದ್ದಾರೆ.
ವಾಣಿಜ್ಯ ವಿಭಾಗ
ಪ್ರಕೃತಿ ಪಿ ನಾಯಕ್ 581 ಅಂಕ ಗಳಿಸಿ ಶೇ. 96.83, ಹೆಚ್ ಆರ್ ಸಂತೃಪ್ತಿ 575 ಅಂಕಗಳಿಸಿ ಶೇ. 95.83, ಹೆಚ್ ಓ ನಾಗಶ್ರೀ 572 ಅಂಕ ಗಳಿಸಿ ಶೇ, 95.33, ಅಮೈ ಬಿ 571 ಅಂಕ ಗಳಿಸಿ ಶೇ. 95.16, ಈ ದೀಪಿಕಾ 570 ಅಂಕ ಗಳಿಸಿ ಶೇ. 95, ರಂಜಿತಾ 568 ಅಂಕ ಗಳಿಸಿ ಶೇ. 94.66 ಸನುಷ ಬೆನ್ನಿ ಮಟ್ಟಂ 558 ಅಂಕ ಗಳಿಸಿ ಶೇ. 93, ಮಂಜುನಾಥ ಎಸ್ ಬಿ 550 ಅಂಕ ಗಳಿಸಿ ಶೇ.91.66, ನಸ್ರೀನ್ 547 ಅಂಕ ಗಳಿಸಿ ಶೇ. 91.16, ಎನ್ ಸ್ಪಂದನ 546 ಅಂಕ ಗಳಿಸಿ ಶೇ. 91 ಅಂಕ ಪಡೆದಿದ್ದಾರೆ.
ಕಲಾ ವಿಭಾಗ
ಫಾತಿಮಾಜ್ ಜೋಹರ 562 ಅಂಕ ಗಳಿಸಿ ಶೇ. 92, ಓ ವಿನಯ 543 ಅಂಕ ಗಳಿಸಿ ಶೇ. 90.5 ಅಂಕ ಪಡೆದಿದ್ದಾರೆ.
ವಿಜ್ಞಾನ ವಿಭಾಗ
ಎಸ್ ವಿ ಸೌರವಿ 572 ಅಂಕ ಗಳಿಸಿ ಶೇ. 95.3, ಎಚ್ ಎಸ್ ದಾಮಿನಿ 569 ಅಂಕ ಗಳಿಸಿ ಶೇ. 94.83, ಅಶ್ವಲ್ ಲಾರೆನ್ಸ್ ಡಿ ಮೆಲ್ಲೋ 556 ಅಂಕ ಗಳಿಸಿ ಶೇ. 92.6, ಜೆ ಸುಖಿ 554 ಅಂಕ ಗಳಿಸಿ ಶೇ. 92.3, ವಿ ಹರ್ಷಿತಾ 554 ಅಂಕ ಗಳಿಸಿ ಶೇ. 92.3, ಶ್ರೀಯ ಕೆ 551 ಅಂಕ ಗಳಿಸಿ ಶೇ. 91.83, ಚೈತ್ರಾ ಸಿ 550 ಅಂಕ ಗಳಿಸಿ ಶೇ. 91.6, ಅನಿಷಾ ರೋಡ್ರಿಗಸ್ 549 ಅಂಕ ಗಳಿಸಿ ಶೇ. 91.5, ಕೆ ಆಕಾಶ್ 547 ಅಂಕ ಗಳಿಸಿ ಶೇ. 91.16 ಫಲಿತಾಂಶ ಗಳಿಸಿ ಶಿಕ್ಷಣ ಸಂಸ್ಥೆಯ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದಾರೆ.
ಕಳೆದ ಬಾರಿ ಶೇ.98 ಫಲಿತಾಂಶ ಕಾಲೇಜು ಪಡೆದಿತ್ತು.