ರಿಪ್ಪನ್‌ಪೇಟೆ : ಬಿಸಿಲ ಧಗೆ ಪಟ್ಟಣದಲ್ಲಿ ದಿನದಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ,ಶನಿವಾರ ಮಳೆಯ ಸಿಂಚನವು ಕೊಂಚ ತಂಪನೆರೆಯಿತು. ಸಂಜೆಯಿಂದ ಪಟ್ಟಣದ ವಿವಿಧೆಡೆ ಮಳೆ ಸುರಿಯಿತು.
ರಿಪ್ಪನ್‌ಪೇಟೆ ಪಟ್ಟಣ , ಅರಸಾಳು ,ಕೆಂಚನಾಲ ,ಹೆದ್ದಾರಿಪುರ ಹಾಗೂ ಚಿಕ್ಕಜೇನಿ ಗ್ರಾಮಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಬಿಡದೇ ಮಳೆ ಸುರಿಯಿತು.
ಮಳೆಯಿಲ್ಲದೆ ಬೇಸತ್ತು ಹೋಗಿದ್ದ ಪ್ರಾಣಿ ಸಂಕುಲಕ್ಕೆ. ಗಿಡಮರ ಮರಗಳಿಗೆ. ಸಸ್ಯ ಜೀವಿಗಳಿಗೆ ಹಾಗೂ ನಾಗರೀಕರಿಗೆ ಇಂದು ಸಂಜೆ ಸುರಿದ ಮಳೆಯಿಂದ ಸಂತಸದ ಜೊತೆಗೆ ರಣ ತಾಪಕ್ಕೆ ಬೇಸತ್ತು ಹೋಗಿದ್ದ ಮನಗಳಿಗೆ ಹಾಗೂ ಜೀವಸಂಕುಲಕ್ಕೆ ತಂಪೇರದಂತಾಗಿದೆ.
ಕಳೆದ 7 ತಿಂಗಳಿನಿಂದ ರಿಪ್ಪನ್ ಪೇಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯ ಅಭಾವದಿಂದ ಕುಡಿಯುವ ನೀರಿಗೂ ಸಹ ತೊಂದರೆಯಾಗುವ ಸಂಭವವಿತ್ತು. ಇಂದು ಸುರಿದ ಮಳೆಯಿಂದ ಅದರಲ್ಲೂ ವಿಶೇಷವಾಗಿ ಪ್ರಾಣಿ ಸಂಕುಲಕ್ಕೆ ಮತ್ತು ಸಸ್ಯ ಜೀವಿಗಳಿಗೆ ಸ್ವಲ್ಪಮಟ್ಟಿಗಾದರೂ ನೀರಿನ ಜೊತೆಗೆ ತಂಪಿನ ವಾತಾವರಣ ದೊರೆತಂತಾಗಿದೆ.
ಏಕಾಏಕಿ ಸುರಿದ ಮಳೆಯಿಂದಾಗಿ, ಸಾರ್ವಜನಿಕರು ದಿಕ್ಕು ತೋಚದೆ ಪರದಾಡಿದರು. ಮಳೆಗೆ ನೆನೆಯದಂತೆ ಸಮೀಪದ ಅಂಗಡಿ, ಕಟ್ಟಡಗಳ ಬಳಿ ನಿಂತರು. ದ್ವಿಚಕ್ರ ವಾಹನ ಸವಾರರು ಮಳೆಯಲ್ಲೇ ಸವಾರಿ ಮಾಡಿದ ದೃಶ್ಯ ಅಲ್ಲಲ್ಲಿ ಕಂಡುಬಂತು.