ಬಂಕಾಪುರದಲ್ಲಿ ಬಿ ಆರ್ ಅಂಬೇಡ್ಕರ್ ಜಯಂತಿ – ಸರ್ವರನ್ನು ಸ್ವಾಗತ್ತಿಸುತ್ತಿರುವ ಬಸವರಾಜ್ ಕಟ್ಟಿಮನಿ ಹಾಗೂ ಮುಕ್ತಾ ಕಟ್ಟಿಮನಿ
ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಬಂಕಾಪುರದಲ್ಲಿ  ಡಾ || ಬಿ ಆರ್ ಅಂಬೇಡ್ಕರರವರ 134ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮಾದ್ಯಮದವರೊಂದಿಗೆ ಮಾತನಾಡಿದ ಅವರು ದಿನಾಂಕ  14-04-2024 ನೇ ರವಿವಾರ ಸಮಯ ಬೆಳಿಗ್ಗೆ 11 ಗಂಟೆಗೆ ಸ್ಥಳ : ಡಾ || ಬಿ ಆರ್ ಅಂಬೇಡ್ಕರ ನಗರ ಹರಿಜನಕೆರಿ ಬಂಕಾಪುರ ದಲ್ಲಿ ಕಾರ್ಯಕ್ರಮ ನಡೆಯಲಿದೆ
 ಈ ಕಾರ್ಯಕ್ರಮಕ್ಕೆ ಸರ್ವರಿಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ರಿ )(ಡಿ. ಎಸ್. ಎಸ್ ) ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷರಾದ  ಬಸವರಾಜ  ಕಟ್ಟಿಮನಿ ಹಾಗೂ ಮಾಜಿ ಪುರಸಭೆ ಅಧ್ಯಕ್ಷರಾದ ಮುಕ್ತಾ ಬಸವರಾಜ ಕಟ್ಟಿಮನಿ ಆತ್ಮೀಯವಾಗಿ ಸ್ವಾಗತ ಕೋರುತಿದ್ದಾರೆ.
ಪ್ರತಿವರ್ಷ ಏಪ್ರಿಲ್ 14 ರಂದು ಭಾರತ ದೇಶದಾದ್ಯಂತ ಅಂಬೇಡ್ಕರ್ ಜಯಂತಿ ಅಥವಾ ಭೀಮ್ ಜಯಂತಿಯನ್ನು ಆಚರಿಸಲಾಗುತ್ತದೆ. ಇದು ನಮ್ಮ ದೇಶದ ಸಂವಿಧಾನ ಶಿಲ್ಪಿ ಎಂದೇ ಖ್ಯಾತಿಯಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವಾಗಿದೆ. ವಿಶ್ವದರ್ಜೆಯ ವಕೀಲರು, ಸಮಾಜ ಸುಧಾಕರರೂ ಆಗಿದ್ದ ಅಂಬೇಡ್ಕರ್ ಅವರು ಭಾರತದ ದಲಿತ ಚಳವಳಿಗಳ ಹಿಂದಿನ ಮಹಾನ್ ಶಕ್ತಿ ಎಂದರೂ ತಪ್ಪಾಗಲಿಕ್ಕಿಲ್ಲ. ಶಿಕ್ಷಣ, ಸಮಾನತೆ, ಅರ್ಥಶಾಸ್ತ್ರಕ್ಕೆ ಇವರು ನೀಡಿದ ಕೊಡುಗೆಗಳು ಅಪಾರ. 
1891ರಲ್ಲಿ ಜನಿಸಿದ ಅಂಬೇಡ್ಕರ್ ಅವರು ಭಾರತ ಸಂವಿಧಾನದ ಪ್ರಧಾನ ಶಿಲ್ಪಿ ಮಾತ್ರವಲ್ಲ, ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ, ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ ಮತ್ತು ಸಮಾಜ ಸುಧಾರಕರೂ ಆಗಿದ್ದರು.
ಅವರು ಅಸ್ಪೃಶ್ಯರ ವಿರುದ್ಧದ ತಾರತಮ್ಯವನ್ನು ತೊಡೆದು ಹಾಕಲು ಮತ್ತು ಮಹಿಳೆಯರು ಹಾಗೂ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅದ್ದರಿಂದ ಅವರ ಜನ್ಮ ವಾರ್ಷಿಕೋತ್ಸವವನ್ನು ಸಮಾನತೆಯ ದಿನ ಎಂದೂ ಕರೆಯಲಾಗುತ್ತದೆ.
ಅಂಬೇಡ್ಕರ್ ಅವರು ಕಾನೂನಿನ ದೃಷ್ಟಿಯಲ್ಲಿ ಎಲ್ಲಾ ನಾಗರಿಕರು ಸಮಾನರು, ಎಲ್ಲರಿಗೂ ಸಮಾನ ನ್ಯಾಯ ದೊರಕಬೇಕು ಎಂಬುದನ್ನು ತಮ್ಮ ಜೀವಮಾನವಿಡಿ ಪ್ರತಿಪಾದಿಸಿದರು. ಈ ವರ್ಷ ಬಾಬ್ ಸಾಹೇಬ್ ಅಂಬೇಡ್ಕರ್ ಅವರ 134ನೇ ಜನ್ಮದಿನವಿದೆ.
		 
                         
                         
                         
                         
                         
                         
                         
                         
                         
                        
