Headlines

ಏ.24 ರಂದು ಗುಳಿಗುಳಿ ಶಂಕರೇಶ್ವರ ದೇವಸ್ಥಾನದಲ್ಲಿ 9ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಧಾರ್ಮಿಕ ಧರ್ಮ ಸಮಾರಂಭ

ಏ.24 ರಂದು ಗುಳಿಗುಳಿ ಶಂಕರೇಶ್ವರ ದೇವಸ್ಥಾನದಲ್ಲಿ
9 ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಧಾರ್ಮಿಕ ಧರ್ಮ ಸಮಾರಂಭ


ರಿಪ್ಪನ್‌ಪೇಟೆ;-ಇತಿಹಾಸ ಪ್ರಸಿದ್ದ ಗುಳಿಗುಳಿ ಶ್ರೀ ಶಂಕರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್ 24 ರಂದು ಬುಧವಾರ ಬೆಳಗ್ಗೆ 9 ಗಂಟೆಗೆ ಶಿವಮೊಗ್ಗದ ಆಂದಾಲ್ಸ್ ರಾಘುಭಟ್ರು ನೇತೃತ್ವದಲ್ಲಿ ಹಾರೋಹಿತ್ತಲು ನಾಗಭೂಷಣ ಭಟ್ರು.ಮತ್ತು ಶಿರಸಿಯ ಶ್ರೀಕಾಂತ ಭಟ್ರು ಇವರ ಪುರೋಹಿತ್ವದಲ್ಲಿ 9 ನೇ ವರ್ಷದ ವರ್ಧಂತ್ಯುತ್ಸವ ಅಂಗವಾಗಿ ಕುಂಭಾಭಿಷೇಕ ಹಾಗೂ ಕಲಾ ಹೋಮ ಹಾಗೂ ಧಾರ್ಮಿಕ ಪೂಜಾ ಕೈಂಕರ್ಯಗಳೊAದಿಗೆ ಧಾರ್ಮಿಕ ಧರ್ಮಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಶ್ರೀಶಂಕರೇಶ್ವರ ದೇವಸ್ಥಾನ ಸೇವಾ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಂತರ 12 ಗಂಟೆಗೆ ಧರ್ಮಸಮಾರಂಭ ಏರ್ಪಡಿಸಲಾಗಿದ್ದು ಈ ಸಮಾರಂಭದ ದಿವ್ಯಸಾನಿಧ್ಯವನ್ನು ಮೂಲೆಗದ್ದ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮಿಜಿ  ವಹಿಸಿ ಆಶೀರ್ವಚನ ನೀಡುವರು.

ಸಮಾರಂಭದ ಆಧ್ಯಕ್ಷತೆಯನ್ನು ಶ್ರೀಶಂಕರೇಶ್ವರ ದೇವಸ್ಥಾನ ಸೇವಾ ಸಮಿತಿಯ ಆಧ್ಯಕ್ಷ ವಾಸುದೇವ ಶೇಟ್ ವಹಿಸುವರು ಈ ಧಾರ್ಮಿಕ ಧರ್ಮಸಭೆಯ ನಂತರ ಶ್ರೀಶಂಕರೇಶ್ವರ ಸ್ವಾಮಿಗೆ ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ ಎಂದು ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *