ಈಶ್ವರಪ್ಪ ಪರ ಪ್ರಚಾರಕ್ಕೆ ತೆರಳಿದ್ದವರಿಗೆ ಜೀವ ಬೆದರಿಕೆ ,ಹಲ್ಲೆ ಆರೋಪ – ಪ್ರಕರಣ ದಾಖಲು | KSE
ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣೆಯ ಕಾವು ರಂಗೇರುತಿದೆ, ರಾಜಕೀಯವಾಗಿ ಅಲ್ಲದೇ ಸಾಹಿತ್ಯ ,ಸಂಸ್ಕ್ರತಿಯ ಮತ್ತು ಶೈಕ್ಷಣಿಕವಾಗಿ ಸುಸಂಸ್ಕ್ರತರ ನೆಲೆಬೀಡು,ಪ್ರಜ್ಞಾವಂತರ ಜಿಲ್ಲೆ ಎಂದೆಲ್ಲಾ ಹೆಸರುಗಳಿಸಿದ ಶಿವಮೊಗ್ಗದಲ್ಲಿ ರಾಜಕೀಯ ಮುಖಂಡರ ಮಾತುಗಳು ಲಯ ತಪ್ಪುತ್ತಿವೆ.
ಚುನಾವಣೆಯಲ್ಲಿ ಬಿಜೆಪಿ ಬಂಡಾಯವಾಗಿ ಸ್ಪರ್ಧಿಸಿರುವ ಕೆ ಎಸ್ ಈಶ್ವರಪ್ಪ ಪರವಾಗಿ ಪ್ರಚಾರಕ್ಕೆ ತೆರಳಿದ್ದ ವ್ಯಕ್ತಿಗಳ ಮೇಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಕೆಎಸ್ ಈಶ್ವರಪ್ಪ ನವರ ಪರ ಪ್ರಚಾರಕ್ಕೆ ಬಂದವರನ್ನ ನಿಂಧಿಸಿ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಐಪಿಸಿ : IPC 1860 (U/s-504,506,323,34) ಅಡಿಯಲ್ಲಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕಳೆದ 20 ನೇ ತಾರೀಖು ಕಾಮಾಕ್ಷಿ ಬೀದಿಯಲ್ಲಿ ಈಶ್ವರಪ್ಪನವರ ಪರ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕಾಗಿ ಜನರನ್ನ ಸಂಘಟಿಸಬೇಕಿತ್ತು. ಈ ಜವಾಬ್ದಾರಿಯನ್ನ ಓರ್ವ ದಂಪತಿ ಹೊತ್ತಿದ್ದಾರೆ. ತಮ್ಮ ಜವಾಬ್ದಾರಿಯಂತೆ ಕಾಮಾಕ್ಷಿ ಬೀದಿಯಲ್ಲಿ ಜನರನ್ನ ಆಯೋಜಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಮನೆಮನೆಗೆ ತೆರಳಿ ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಕೇರಿಯ ಮಹಿಳೆಯೊಬ್ಬರು ಆಕ್ಷೇಪ ಎತ್ತಿದ್ದಾರೆ. ನಮ್ಮ ಮನೆಯ ಬಳಿ ಬಂದು ಈಶ್ವರಪ್ಪನವರ ಪರ ಏಕೆ ಪ್ರಚಾರ ಮಾಡ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದೇ ವಿಚಾರಕ್ಕೆ ಜಗಳ ಆರಂಭವಾಗಿದೆ. ಜಗಳ ತಾರಕಕ್ಕೇರಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಹಲ್ಲೆ ಮಾಡಿ, ನಿಂದಿಸಿ, ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ಕೇಸ್‌ನ ತನಿಖೆ ನಡೆಸುತಿದ್ದಾರೆ.