Headlines

Ripponpete | ಅನಧಿಕೃತ ಕಟ್ಟಡಗಳ ತೆರವು ವಿಳಂಬ | ಝಣ ಝಣ ಕಾಂಚಾನಕ್ಕೆ ಮರುಳಾದ್ರಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು..!!??

Ripponpete | ಅನಧಿಕೃತ ಕಟ್ಟಡಗಳ ತೆರವು ವಿಳಂಬ | ಝಣ ಝಣ ಕಾಂಚಾನಕ್ಕೆ ಮರುಳಾದ್ರಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು..!!??

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಸಾಗರ ರಸ್ತೆಯಲ್ಲಿ ರಸ್ತೆ ಕಾಮಗಾರಿಗೆ ಅಡ್ಡಲಾಗಿರುವ ಕಟ್ಟಡವನ್ನು ತೆರವುಗೊಳಿಸುವಲ್ಲಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮಲ್ಲಿಕಾರ್ಜುನ್ ನಿರ್ಲಕ್ಷ್ಯ ತೋರುತ್ತಿರುವು ಹಲವಾರು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ..

ಪಟ್ಟಣದ ಪಿಡಿಓ ಮದುಸೂಧನ್ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಲು ಲೋಕೋಪಯೋಗಿ ಇಲಾಖೆಯ ಸಹಕಾರಕ್ಕಾಗಿ ಕಾಯುತಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೆರವು ಕಾರ್ಯಾಚರಣೆ ವಿಳಂಬವಾಗುತ್ತಿದೆ.ಇದೇ ತಿಂಗಳ 20 ರವರೆಗೆ ಕಟ್ಟಡದ ಮಾಲೀಕರಿಗೆ ಪಿಡಿಓ ಸಮಯಾವಕಾಶ ನೀಡಿದ್ದರೂ ತೆರವುಗೊಳಿಸದೇ ಹಠಮಾರಿತನ ಪ್ರದರ್ಶಿಸುತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಕಾರ್ಯ ನಿರ್ವಹಣಾಧಿಕಾರಿಗಳ ನಿರ್ದೇಶನದಂತೆ ಪಟ್ಟಣದ ಗ್ರಾಪ ಪಿಡಿಓ ಮಧುಸೂಧನ್ ಪೊಲೀಸ್ ಇಲಾಖೆಯ ರಕ್ಷಣೆಯೊಂದಿಗೆ ಕೆಲವು ದಿನಗಳ ಹಿಂದೆ ಕಟ್ಟಡ ತೆರವುಗೊಳಿಸಲು ಮುಂದಾದಾಗ ಇದೇ ಮಲ್ಲಿಕಾರ್ಜುನ್ ಸ್ಥಳದಿಂದ ಪಲಾಯನಗೈದದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.

ಈಗ ತೆರವು ಕಾರ್ಯಾಚರಣೆಗೆ ಬನ್ನಿ ಎಂದರೇ ಪ್ರತಿನಿತ್ಯ ಕುಂಟುನೆಪ ಹೇಳಿಕೊಂಡು ತಪ್ಪಿಸಿಕೊಳ್ಳುತ್ತಿರುವುದು ಅಧಿಕಾರಿಗಳು ಪಡೆದ ಲಂಚದ ಹಣದ ನೀಯತ್ತು ಪ್ರದರ್ಶಿಸುವಂತಿದೆ ಎಂದು ಸಾರ್ವಜನಿಕರು ಆಡಿಕೊಳ್ಳುತಿದ್ದಾರೆ.

ಒಟ್ಟಾರೆಯಾಗಿ ಕೆಲವರಿಂದ ಲಂಚ ಪಡೆದು ಅಧಿಕಾರಿ ತೆಪ್ಪಗಾಗಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತಿದ್ದು ಇನ್ನಾದರೂ ಪಿಡಿಓ ರವರಿಗೆ ಸಹಕಾರ ನೀಡಿ ಅನಧಿಕೃತ ಕಟ್ಟಡ ತೆರವುಗೊಳಿಸಿ ಪಟ್ಟಣದ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮಲ್ಲಿಕಾರ್ಜುನ್ ಶ್ರಮಿಸುತ್ತಾರಾ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *