Ripponpete | ಕುಡಿಯುವ ನೀರಿನ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲು – ಗ್ರಾಮಾಡಳಿತ ನಿರ್ಲಕ್ಷ್ಯ
ರಿಪ್ಪನ್‌ಪೇಟೆ : ಪಟ್ಟಣದ ಸಾಗರ ರಸ್ತೆಗೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದ ಪೈಪ್‌ಲೈನ್ ಏಕಾಏಕಿ ಒಡೆದ ಪರಿಣಾಮವಾಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ.ಭೀಕರ ಬರಗಾಲದಿಂದ ಹನಿ ಹನಿ ನೀರಿಗೂ ಸಹ ಆಹಾಕರ ಇದೆ. ಪ್ರತಿಯೊಂದು ವಾರ್ಡ್ ಗೆ ಹೋದರೂ ಸಹ ನೀರಿನ ಸಮಸ್ಯೆ ಇದ್ದೆ ಇದೆ.
ಪಟ್ಟಣದ ವಿನಾಯಕ ನಗರ,ಕೆರೆಹಳ್ಳಿ ಪ್ರದೇಶಗಳಿಗೆ ನೀರು ಪೂರೈಸುವ ಮುಖ್ಯ ಪೈಪ್ ಸಾಗರ ರಸ್ತೆಯ ಹೆಬ್ಬಾರ್ ಶಾಪಿಂಗ್ ಮಾಲ್ ಮುಂಭಾಗದಲ್ಲಿ ಒಡೆದಿರುವ ಹಿನ್ನಲೆಯಲ್ಲಿ ನೀರು ಸರಬರಾಜು ಆಗುವುದರಲ್ಲಿ ತೊಂದರೆ ಆಗಲಿದೆ. ಜೊತೆಗೆ ಪೈಪ್ ಒಡೆದಿರುವುದಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ ಎನ್ನಲಾಗುತಿದೆ.
ಕುಡಿಯುವ ನೀರು ಪೂರೈಕೆಯಾಗುವ ಪೈಪ್ ಒಡೆದು 24 ಗಂಟೆ ಕಳೆದರೂ ಸಹ ಗ್ರಾಮಾಡಳಿತದ ಅಧಿಕಾರಿಗಳು ಮಾತ್ರ ನೀರು ಸ್ಥಗಿತ ಮಾಡುವ ಅಥವಾ ಪೈಪ್ ಲೈನ್ ದುರಸ್ಥಿ ಪಡಿಸುವ ಗೋಜಿಗೆ ಹೋಗಿಲ್ಲ. ಇದರಿಂದಾಗಿ ನಿರಂತರವಾಗಿ ನೀರು ಪೋಲಾಗುತ್ತಿದ್ದರೂ ಸಹ ಅಧಿಕಾರಿಗಳ ಕಣ್ಮುಚ್ಚಿ ಕುಳಿತಿರುವುದು ನೋಡಿದರೆ ಅವರ ನಿರ್ಲಕ್ಷ್ಯ ಎದ್ದು ತೋರುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದರ ಮಧ್ಯೆ ಅಪಾರ ಪ್ರಮಾಣದ ಕುಡಿಯುವ ನೀರು ಪೋಲಾಗುತ್ತಿದ್ದರೂ ಸಹ ನೀರು ಪೋಲಾಗುತ್ತಿರುವುದನ್ನು ತಡೆಗಟ್ಟುವ ಕೆಲಸಕ್ಕೆ ಗ್ರಾಮಾಡಳಿತ ಮುಂದಾಗಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೇತ್ತು ಶೀಘ್ರವೇ ನೀರು ಪೋಲಾಗುತ್ತಿರುವುದನ್ನು ತಡೆಗಟ್ಟಬೇಕಿದೆ.