ಏಕಾಏಕಿ ಕಾಡು ಪ್ರಾಣಿ ಅಡ್ಡ ಬಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಜೀಪ್ – ರಿಪ್ಪನ್ಪೇಟೆಯ ಪ್ರಭೀನ್ ಸಾವು | accident
ರಿಪ್ಪನ್ಪೇಟೆ : ಕಾಡು ಪ್ರಾಣಿ ಅಡ್ಡ ಬಂದ ಹಿನ್ನಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಜಿಪ್ಸಿ ಜೀಪ್ ಮರಕ್ಕೆ ಡಿಕ್ಕಿಯಾಗಿ ಪಟ್ಟಣದ ಪ್ರಭೀನ್ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ರಿಪ್ಪನ್ಪೇಟೆ ಸಮೀಪದ ತಳಲೆ ಗ್ರಾಮದ ನಿವಾಸಿ ಪ್ರಬೀನ್ (45) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತ ಪ್ರಭೀನ್ ಪಟ್ಟಣದ ಗುಡ್ ಶೆಪರ್ಡ್ ಚರ್ಚ್ ನ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದರು, ಪಟ್ಟಣದಲ್ಲಿ ಮೈಸ್ ಕಂಪ್ಯೂಟರ್ ತರಬೇತಿ ಕೇಂದ್ರವನ್ನು 2000ನೇ ಇಸವಿಯಲ್ಲಿ ಪ್ರಪ್ರಥಮವಾಗಿ ಪ್ರಾರಂಭಿಸಿದ್ದರು.
ಮೃತರಿಗೆ ತಾಯಿ, ಹೆಂಡತಿ ಹಾಗೂ ಮೂವರು ಮಕ್ಕಳು ಇದ್ದಾರೆ.
ಶಿವಮೊಗ್ಗದಿಂದ ರಿಪ್ಪನ್ ಪೇಟೆ ಕಡೆಗೆ ಬರುತ್ತಿದ್ದ ಜಿಪ್ಸಿ ಜೀಪು ಸೂಡೂರು ಗೇಟ್ ಹಾಗೂ 9ನೇ ಮೈಲಿಗಲ್ಲು ನಡುವಿನ ಶೆಟ್ಟಿಹಳ್ಳಿ ಅಭಯಾರಣ್ಯದ ರಾಜ್ಯ ಹೆದ್ದಾರಿಯಲ್ಲಿ ಏಕಾಏಕಿ ಕಾಡು ಪ್ರಾಣಿ ಅಡ್ಡ ಬಂದ ಹಿನ್ನೆಲೆ ಈ ಅವಘಡ ಸಂಭವಿಸಿತ್ತು, ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿ ಮೂರು ಪಲ್ಟಿ ಹೊಡೆದ ಪರಿಣಾಮ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದ ಹಿನ್ನಲೆಯಲ್ಲಿ ಮೃತದೇಹ ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು.
ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಾಗರಕ್ಕೆ ರವಾನಿಸಲಾಗಿದ್ದು ವಿದೇಶದಲ್ಲಿರುವ ಸಂಬಧಿಕರು ಬರುವ ಹಿನ್ನಲೆಯಲ್ಲಿ ಭಾನುವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ.