Headlines

ಬೇಳೂರು ಗೋಪಾಲಕೃಷ್ಣ ಒಬ್ಬ ಶೋಕಿಲಾಲ ರಾಜಕಾರಣಿ:: ವೀರೇಶ್ ಆಲುವಳ್ಳಿ

ಹೊಸನಗರ: ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಒಬ್ಬ ಶೋಕಿಲಾಲ ರಾಜಕಾರಣಿ ಅವರಿಗೆ ಕಿಂಚಿತ್ತು ಸಾಮಾಜಿಕ ಬದ್ದತೆ ಇಲ್ಲ ಎಂದು ತಾಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ ರವರು ವಾಗ್ದಾಳಿ ನಡೆಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿ, ಮಾಜಿ ಶಾಸಕರು ಸುತ್ತಾ ಗ್ರಾಮದಲ್ಲಿ  ಮರಳು ಮಾಫ಼ಿಯ ನಡೆಯುತ್ತಿದೆ ಎಂದು ತಮ್ಮ ಹಾಗೂ ಸುರೇಶ್ ಸ್ವಾಮಿರಾವ್ ವಿರುದ್ದ ಗಂಭೀರ ಆರೋಪ ಹೊರಿಸಿದಲ್ಲದೇ ಇದರ ಹಿಂದೆ ಶಾಸಕರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ ಇದು ಸತ್ಯಕ್ಕೆ ದೂರವಾಗಿದ್ದು ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.

ತಾಲೂಕಿನಲ್ಲಿ ಅನೇಕ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಈ ಕಾಮಗಾರಿಗಳು ಸುಗಮವಾಗಿ ನಡೆಯುವ ಸಲುವಾಗಿ ಸರ್ಕಾರದ ಆದೇಶದಂತೆ ಸುತ್ತಾ ಗ್ರಾಮದ ಮರಳು ಕ್ವಾರಿ ಗೆ ಅನುಮತಿ ನೀಡಲಾಗಿದೆ.ಇದರಲ್ಲಿ ತಮ್ಮದಾಗಲಿ ಸುರೇಶ್ ಸ್ವಾಮಿರಾವ್ ರವರದಾಗಲಿ ಯಾವುದೇ ಪಾತ್ರವಿಲ್ಲ ಎಂದರು.

ಮಾಜಿ ಶಾಸಕರ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ವರ್ತನೆ:

ಹೆಣ್ಣು ಮಕ್ಕಳ ಬಗ್ಗೆ ಗೋಪಾಲಕೃಷ್ಣ ಬೇಳೂರ್ ರವರಿಗೆ ಕಿಂಚಿತ್ತು  ಕನಿಷ್ಠ ಗೌರವ ಇಲ್ಲ ಎಂಬುವುದು ಸಾಮಾಜಿಕ ಜಾಲತಾಣದಲ್ಲಿ ಅವರ ವರ್ತನೆಯಿಂದ ತಿಳಿಯುತ್ತದೆ.

ಮಾಜಿ ಶಾಸಕರು “ಸೂಡುರು ಶಿವಣ್ಣ ಬಳಗ” ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಅಶ್ಲೀಲ ಫೋಟೋ ಹರಿಬಿಟ್ಟಿದ್ದು ಕೈತಪ್ಪಿನಿಂದ ಅದನ್ನು ಕಳುಹಿಸಿದ್ದರೂ ಅದನ್ನು ಅಳಿಸಿ ಹಾಕುವ ಸೌಜನ್ಯ ಕೂಡ ಇಲ್ಲದೇ ಇರುವುದು ಹೆಣ್ಣುಮಕ್ಕಳ ಮೇಲೆ ಅವರಿಗೆ ಇರುವ ಗೌರವವನ್ನು ಸೂಚಿಸುತ್ತದೆ ಎಂದು ಘಟನೆಯ ಬಗ್ಗೆ ಇರುವ ದಾಖಲೆಗಳನ್ನು ಸುದ್ದಿಗೋಷ್ಟಿಯಲ್ಲಿ ವೀರೇಶ್ ಬಿಡುಗಡೆ ಮಾಡಿದರು

ಬೇಳೂರು ಗೋಪಾಲ ಕೃಷ್ಣ ರವರು, 2 ಅವಧಿಗೆ ಶಾಸಕರಾದವರು, ರಾಷ್ಟ್ರೀಯ ಪಕ್ಷದ ವಕ್ತಾರಾಗಿರುವವರು, ಮಹಿಳೆ ಬಗ್ಗೆ ಈ ರೀತಿ ಅವಹೇಳನಕಾರಿ ಪೋಸ್ಟ್ ಹಾಕಿರುವುದು, ಅವರ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಮಾಡಿದ ಅವಮಾನ. 

ಈ ರೀತಿ ಮಂಗಾಟ ಮಾಡಿದ್ದರಿಂದಲೇ ಯಾವ ಪಕ್ಷದವರು ಇವರನ್ನು ಸೇರಿಸಿಕೊಂಡಿಲ್ಲ ಈಗ ಕಾಂಗ್ರೆಸ್ ಸೇರಿದ್ದಾರೆ. ಕೊರೋನ ಸಮಯದಲ್ಲಿ ಕ್ಷೇತ್ರದ ಜನರು ಹಾಗೂ ಮತದಾರರಿಂದ ಕಣ್ಮರೆಸಿಕೊಂಡಿದ್ದು, ಲಾಕ್ ಡೌನ್ ಸಡಿಲಿಕೆಯಾದ ನಂತರ ಕ್ಷೇತ್ರಕ್ಕೆ ಬಂದು ಈ ರೀತಿ ಮಂಗಾಟ ಮಾಡುತ್ತಿದ್ದಾರೆ.

KPCC ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರು, ಹಾಗೂ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ನವರು ಇದರ ಬಗ್ಗೆ ಕೂಡಲೇ ಕ್ರಮ ಕೈಗೊಂಡು, ಇಂತಹ ಕುಚೇಷ್ಟೆ ಮಾಡುವ ವ್ಯಕ್ತಿಯನ್ನು ಪಕ್ಷದಿಂದ ಉಚ್ಛಾಟಿಸಬೇಕೆಂದು ವೀರೇಶ್ ಒತ್ತಾಯಿಸಿದರು.

ಸುತ್ತಾ ಗ್ರಾಮದ ಮರಳುಗಾರಿಕೆ ವಿಚಾರದಲ್ಲಿ ನನ್ನ ಹಾಗೂ ಸುರೇಶ್ ಸ್ವಾಮಿರಾವ್ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡಿರುವ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಒಂದು ಟಿ ವಿ ಚಾನೆಲ್ ವಿರುದ್ದ ಮುಂದಿನ ದಿನಗಳಲ್ಲಿ ಕಾನೂನು ರೀತಿಯ ಹೋರಾಟ ಮಾಡಲು ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಹೇಳಿದರು.

ಒಂದು ವೇಳೆ ಮರಳು ಮಾಫ಼ಿಯದಲ್ಲಿ ತಾನು ಭಾಗಿಯಾಗಿರುವುದನ್ನ ಸಾಬೀತು ಪಡಿಸಿದರೇ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದೂ ಈ ಸಂಧರ್ಭದಲ್ಲಿಹೊಸನಗರ ತಾ ಪಂ ಮಾಜಿ ಅಧ್ಯಕ್ಷ
ವೀರೇಶ್ ಆಲವಳ್ಳಿ ಸುದ್ಧಿಘೋಷ್ಠಿಯಲ್ಲಿ ತಿಳಿಸಿದರು.

Leave a Reply

Your email address will not be published. Required fields are marked *