ಸೋಮವಾರ ಹೊಸನಗರ , ರಿಪ್ಪನ್ಪೇಟೆ ಮತ್ತು ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚಿತ್ರತಾರೆಯರ ರೋಡ್ ಷೋ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರವಾಗಿ 29-04-2024 ರ ಸೋಮವಾರ ಚಿತ್ರ ತಾರೆಯರು ಕ್ಯಾಂಪೇನ್ ನಡೆಸಲಿದ್ದಾರೆ.
ಮೇ 07 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆ ರಂಗೇರುತಿದ್ದು ವಿವಿಧ ಪಕ್ಷಗಳು ಸ್ಟಾರ್ ಪ್ರಚಾರಕರ ಮೊರೆ ಹೋಗುತ್ತಿವೆ ಅಂತೆಯೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರವಾಗಿ ಚಲನ ಚಿತ್ರ ನಟರಾದ ದುನಿಯಾ ವಿಜಯ್ , ಡಾಲಿ ಧನಂಜಯ , ಸತ್ಯ, ಚಿಕ್ಕಣ್ಣ , ವಿಜಯ್ ರಾಘವೇಂದ್ರ , ನೆನಪಿರಲಿ ಪ್ರೇಮ್ , ಚಂದನ್ ಶೆಟ್ಟಿ , ನಿಶ್ಚಿಕಾ ನಾಯ್ಡು , ಅನುಶ್ರೀ , ಅಕುಲ್ ಬಾಲಾಜಿ ಸೇರಿದಂತೆ ಅನೇಕ ನಟರು ಭಾಗವಹಿಸಲಿದ್ದಾರೆ.
ಸೋಮವಾರ ಸಂಜೆ 5.00 ಗಂಟೆಗೆ ರಿಪ್ಪನ್ಪೇಟೆ , 06.30 ಕ್ಕೆ ತೀರ್ಥಹಳ್ಳಿ ಹಾಗೂ ರಾತ್ರಿ 08.00 ಗಂಟೆಗೆ ರೋಡ್ ಷೋ ನಡೆಯಲಿದೆ.