ಆಗುಂಬೆ ಘಾಟ್ ನಲ್ಲಿ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ – ಪ್ರಯಾಣಿಕರ ಪರದಾಟ | agumbe Ghat traffic
ಎರಡು ಸ್ಥಳಗಳಲ್ಲಿ ವಾಹನಗಳು ಹಾಳಾಗಿ ಕೆಟ್ಟು ನಿಂತಿರುವ ಕಾರಣ ಆಗುಂಬೆ(agumbe ghat) ನಲ್ಲಿ ಮೊದಲ ತಿರುವಿನಿಂದ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿರುವ ಘಟನೆ ನಡೆದಿದೆ.
ಭಾನುವಾರ ಸಂಜೆ ವೇಳೆಯಲ್ಲಿ ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ನೂರಾರು ವಾಹನಗಳು ಸಿಲುಕಿಕೊಂಡು ಪ್ರಯಾಣಿಕರು ಪರದಾಡುವಂತಾಗಿದೆ.
ರಜೆ ದಿನದ ಹಿನ್ನಲೆಯಲ್ಲಿ ಬೇರೆ ಬೇರೆ ಕಡೆ ಪ್ರವಾಸಕ್ಕೆ ತೆರಳಿದ್ದವರು ಸಂಜೆ ವೇಳೆ ವಾಪಾಸ್ ಆಗುತ್ತಿದ್ದು ಘಾಟಿಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದೆ. ಕಳೆದ ಅರ್ಧ ಗಂಟೆಯಿಂದ ವಾಹನಗಳು ನಿಂತಲ್ಲಿಯೇ ನಿಂತಿವೆ ಎಂದು ಹೇಳಲಾಗುತ್ತಿದೆ.
ಕೆಟ್ಟು ನಿಂತಿರುವ ವಾಹನಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.