ಪ್ರಹ್ಲಾದ್ ಜೋಷಿ ರೋಡ್ ಷೋ ವೇಳೆಯಲ್ಲಿ ವನಹಳ್ಳಿ ಗ್ರಾಮಸ್ಥರು ಧಿಕ್ಕಾರ ಕೂಗಿದ್ದೇಕೆ..!!?? — ಈ ಸುದ್ದಿ ನೋಡಿ
ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ವನಹಳ್ಳಿ ಗ್ರಾಮದಲ್ಲಿ ಪ್ರಹ್ಲಾದ್ ಜೋಶಿಯವರ ಪ್ರಚಾರದ ವೇಳೆ ರೋಡ್ ಷೋ ವೇಳೆಯಲ್ಲಿ ಗ್ರಾಮಸ್ಥರು ವಾಹನ ಅಡ್ಡಗಟ್ಟಿ ದಿಕ್ಕಾರ ಕೂಗಿರುವ ಘಟನೆ ನಡೆದಿದೆ.
ಚುನಾವಣಾ ಪ್ರಚಾರದ ವೇಳೆಯಲ್ಲಿ ನಮ್ಮ ಗ್ರಾಮಕ್ಕೆ ಏನು ಅನುದಾನ ಕೊಟ್ಟಿದ್ದೀರಿ ಎಂದು ಜನರು ಆಕ್ರೋಶಿತರಾಗಿ ಪ್ರಶ್ನಿಸಿದ್ದಾರೆ.
ಜಲಜೀವನ್ ಮಷೀನ್ ಯೋಜನೆಯಲ್ಲಿ 1 ಕೋಟಿ 80 ಲಕ್ಷ ರೂಪಾಯಿ ಅನುದಾನ ಕೊಟ್ಟಿರುವುದಾಗಿ ಪ್ರಹ್ಲಾದ್ ಜೋಶಿ ಸಮಜಾಯಿಸಿಕೊಟ್ಟರು.
ಇದರಿಂದ ಆಕ್ರೋಶಿತಗೊಂಡ ವನಹಳ್ಳಿ ಗ್ರಾಮದ ಜನರು ಜೋಶಿಯವರಿಗೆ ಮೂಗಿಗೆ ತುಪ್ಪ ಹಚ್ಚಬೇಡಿ ನಮ್ಮ ಊರಿಗೆ ವಿಶೇಷ ಅನುದಾನ ಏನು ಕೊಟ್ಟಿದ್ದೀರಿ ಎಂದು ಜನರು ಪ್ರಶ್ನೆ ಮಾಡಿದ್ದಾರೆ. ಗ್ರಾಮಸ್ಥರ ಪ್ರಶ್ನೆಗೆ ಪ್ರಹ್ಲಾದ್ ಜೋಷಿ ಒಂದು ಕ್ಷಣ ತಬ್ಬಿಬ್ಬಾದರು.
ನಮ್ಮ ಗ್ರಾಮಕ್ಕೆ ಸ್ಪಂದಿಸದ ನಿಮಗ್ಯಾಕೆ ವೋಟ್ ಹಾಕಬೇಕು ಎಂದು ಜನರು ಪ್ರಶ್ನಿಸಿದರು.
ವರದಿ : ನಿಂಗರಾಜ್ ಕೊಡಲ್ ( ಬಂಕಾಪುರ್ ) ಹಾವೇರಿ ಜಿಲ್ಲೆ.