January 11, 2026

ಕುಮಾರ್ ಬಂಗಾರಪ್ಪನವರಿಗೆ ಸಚಿವ ಸ್ಥಾನ ನೀಡಿ:ಸೊರಬ ಬಿಜೆಪಿ ಮುಖಂಡರ ಆಗ್ರಹ:

ಸೊರಬ:ಶಾಸಕ ಕುಮಾರ್ ಬಂಗಾರಪ್ಪರವರಿಗೆ ಸಚಿವ ಸ್ಥಾನ ನೀಡಬೇಕೆಂದು ಸೊರಬ ತಾಲೂಕ್ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.

 ಬಂಗಾರಪ್ಪನವರ ಪುತ್ರರಾದ ಕುಮಾರ ಬಂಗಾರಪ್ಪ ಸೊರಬ ತಾಲೂಕು ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದು ,ತಾಲೂಕಿನ ರಸ್ತೆ, ಕುಡಿಯುವ ನೀರು, ಸಮುದಾಯ ಭವನ, ದೇವಸ್ಥಾನ, ಸೇತುವೆ,ಮುಗೂರು,ಮೂಡಿ,ಕಚವಿ ಏತ ನೀರಾವರಿ ಹಾಗೂ ಶ್ರೀ ರೇಣುಕಾಂಬ ದೇವಸ್ಥಾನ ಚಂದ್ರಗುತ್ತಿ,ಮೊರಾರ್ಜಿ ವಸತಿ ಶಾಲೆಗೆ ಸಾವಿರಾರು ಕೋಟಿ ಅನುದಾನವನ್ನು ಸ್ವ ಪ್ರಯತ್ನದಿಂದ ತಂದು ಕಾಮಗಾರಿಗಳು ನಡೆಯುತ್ತಿವೆ.
ಸೊರಬ ಪಟ್ಟಣ ಪಂಚಾಯತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಿದ್ದು ಮತ್ತು ಆನವಟ್ಟಿ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಕುಮಾರ್ ಬಂಗಾರಪ್ಪರವರು ಶುದ್ಧ ಹಸ್ತರು,ಮೇಧಾವಿಯೂ ಮತ್ತು ಬಡವರಪರ ಕಾಳಜಿ ಇರುವಂತಹ ನಾಯಕರು,ಒಮ್ಮೆ ಸಚಿವರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಈ ಸಂಧರ್ಭದಲ್ಲಿ ಹೇಳಿದರು.

ಸುದ್ದಿ ಗೋಷ್ಟಿಯಲ್ಲಿ ಮುಖಂಡರಾದ ಕಡಸೂರು ಶಿವಕುಮಾರ್, ಬೋಗೇಶ್,ಬಗರ್ ಹುಕುಂ ಸದ್ಯಸರಾದ ದೇವೇಂದ್ರಪ್ಪ,ಈಶ್ವರಪ್ಪ ಚನ್ನಪಟ್ಟಣ,ಪರಮೇಶ್ವರ ಮಣ್ಣತ್ತಿ,ಫಕೀರಪ್ಪ
ಕನಕ ಗುಡವಿ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.



ವರದಿ : ವೆಂಕಟೇಶ್ ಚಂದ್ರಗುತ್ತಿ

ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..


About The Author

Leave a Reply

Your email address will not be published. Required fields are marked *