Headlines

ರಿಪ್ಪನ್ ಪೇಟೆ : 54 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಕೊರೋನಾ ಲಸಿಕಾ ಶಿಬಿರ

ರಿಪ್ಪನ್ ಪೇಟೆ : ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿ ರಿಪ್ಪನ್ ಪೇಟೆ ವತಿಯಿಂದ  54 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಕೊರೋನಾ ಲಸಿಕಾ ಶಿಬಿರವನ್ನು  ನಡೆಸಲಾಯಿತು.


ಇಂದು ಪಟ್ಟಣದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಭಾಭವನದ ಆವರಣ ದಲ್ಲಿ 18 ವರ್ಷ ಮೇಲ್ಪಟ್ಟವರಿಗೆ 250 ಲಸಿಕೆ  ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಶ್ರೀ ಸುರೇಶ್, ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ದ ಆರೋಗ್ಯಾಧಿಕಾರಿ ಶ್ರೀ ಅನಿಲ್ ಕುಮಾರ್, ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ದ ಹಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಗಾಯತ್ರಿ, ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ದ ಹಿರಿಯ ವಿಜ್ಞಾನ ಸಹಾಯಕರಾದ ಶ್ರೀ ಆರ್ಯಮಿತ್ರ ರವರನ್ನು ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ರಿಪ್ಪನ್ ಪೇಟೆ ಕರ್ನಾಟಕ ಪ್ರಾಂತೀಯ ಹಿಂದೂರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷರಾದ ಯೋಗೀಶ್,ಕಾರ್ಯದರ್ಶಿಯಾದ ನಾಗರಾಜ್ ಕೆದಲುಗುಡ್ಡೆ ಹಾಗೂ ಸಮಿತಿಯ ಪ್ರಮುಖರಾದ ಸುಧೀಂದ್ರ ಪೂಜಾರಿ,ಎಂ ಬಿ ಮಂಜುನಾಥ್, ಆರ್ ರಾಘವೇಂದ್ರ,ಸುರೇಶ್ ಸಿಂಗ್, ನಾರಾಯಣ,ವೈ ಜೆ ಕೃಷ್ಣ, ಈಶ್ವರ್ ಮಳಕೊಪ್ಪ,ಸುರೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.



About The Author

Leave a Reply

Your email address will not be published. Required fields are marked *