WhatsApp Channel Join Now
Telegram Channel Join Now
ಸಾಗರದ : ಇಲ್ಲಿನ ಶ್ರೀನಗರದ ಎಂಟನೇ ವಾರ್ಡಿನಲ್ಲಿ ಇಂದು ಮಹಾತ್ಮಾ ಗಾಂಧೀಜಿಯವರ 152 ನೇ ಜನ್ಮದಿನ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ 117 ನೇ ಜನ್ಮದಿನದಂದು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮದ ನೇತ್ರತ್ವ ವಹಿಸಿದ್ದ ಶ್ರೀನಗರ ಯುವಜನ ಸಂಘದ ಪ್ರಮುಖರಾದ ಸುಬ್ರಹ್ಮಣ್ಯ ರವರು ಮಾತನಾಡಿ ಗಾಂಧೀಜಿಯ ಜೀವನವೇ ಒಂದು ಸಂದೇಶವಾಗಿದ್ದು ಅವರ ಹೆಸರು ಭಾರತೀಯರ ಮನಸ್ಸಿನಲ್ಲಿ ಇಂದಿಗೂ ಉಳಿದಿದೆ ಭಾರತದಲ್ಲಿ ಮಾತ್ರವಲ್ಲದೇ ದಕ್ಷಿಣ ಆಫ್ರಿಕಾದಲ್ಲೂ  ವರ್ಣಭೇದ ನೀತಿಯ ವಿರುದ್ಧ ಹೋರಾಡಿ ಮನೆಮಾತಾಗಿದ್ದಾರೆ ಎಂದರು.

ಸಾಗರದೊಂದಿಗೆ ಅವಿನಾಭಾವ ಸಂಬಂಧ

ಹೌದು ಆಗಿನ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಲಿಂಗನಮಕ್ಕಿ ಜಲಾಶಯದಿಂದ ತಲಕಳಲೆ ಬ್ಯಾಲೆನ್ಸಿಂಗ್ ರಿಸರ್ವಾಯರ್ ಗೆ ನೀರನ್ನು ಸಾಗಿಸುವ ಸುರಂಗದ ಕಾಮಗಾರಿ ನಡೆದಿದ್ದ ಸ್ಥಳಕ್ಕೆ ಅವರು ಭೇಟಿ ನೀಡಿದ್ದರು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು.

                 ಜಾಹಿರಾತು
ಸಾಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಎಲ್ ಬಿ ಕಾಲೇಜಿಗೆ 1964 ರಲ್ಲಿ  ಭೇಟಿ ನೀಡಿ  ಅಡಿಗಲ್ಲು ಹಾಕುವುದರ ಮೂಲಕ ಚಾಲನೆ ನೀಡಿದರು ಆದ್ದರಿಂದ ಇಂದು ಕಾಲೇಜಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜು ಎಂದು ನಾಮಕರಣ ಮಾಡಲಾಗಿದೆ   ಎಂದು ಉಪನ್ಯಾಸಕ ದಯಾನಂದ್ ನಾಯಕ್ ಹೇಳಿದರು.
  
ಕಾರ್ಯಕ್ರಮದಲ್ಲಿ  ದಿನೇಶ್, ಚೇತನ್, ಗಣೇಶ್ ಕಿಣಿ ,ಜವೀರ್, ಕಲ್ಲೇಶಪ್ಪ,ಅನಿಲ್,ಕಿರಣ್, ಚಂದನ್  ಮತ್ತಿತರರು ಹಾಜರಿದ್ದರು.



ವರದಿ : ಸೂರಜ್ ನಾಯರ್

Leave a Reply

Your email address will not be published. Required fields are marked *