Headlines

ಆನಂದಪುರ : ಲಾರಿಯ ಸೈಡ್ ಡೋರ್ ಕಟ್ಟಾಗಿ ರೈಲ್ವೆ ಹಳಿಯ ಮೇಲೆ ಬಿದ್ದ ಮರದ ಪೋಲ್ಸ್ ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್.!

ಶಿವಮೊಗ್ಗ : ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಎಡೆಹಳ್ಳಿಯ ರೈಲ್ವೆ ಕ್ರಾಸಿಂಗ್ 105 ಲೆವೆಲ್ ನಲ್ಲಿ ಬಟ್ಟೆಮಲ್ಲಪ್ಪ ದಿಂದ ದಾಂಡೇಲಿಗೆ ಹೋಗುತ್ತಿದ್ದ ಮರದ ಪೋಲ್ಸ್ ತುಂಬಿದ ಲಾರಿಯ ಸೈಡ್ ಡೋರ್ ಕಟ್ಟಾಗಿ ನೂರಾರು ಮರದ ಪೋಲ್ಸ್ ಗಳು ರೈಲ್ವೆ ಹಳಿ ಮೇಲೆ ಬಿದ್ದು 1ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. 
ಸ್ಥಳಕ್ಕೆ ಆಗಮಿಸಿದ ರೈಲ್ವೆ ಸಿಬ್ಬಂದಿಗಳು ಹಾಗೂ ಆನಂದ ಪುರದ ಪೊಲೀಸ್ ಸಿಬ್ಬಂದಿಗಳು ಮತ್ತು ಸ್ಥಳೀಯ ನೂರಕ್ಕೂ ಹೆಚ್ಚು ಗ್ರಾಮಸ್ಥರ ನೆರವಿನಿಂದ ರೈಲ್ವೆ ಹಳಿಯ ಮೇಲೆ ಬಿದ್ದಿದ್ದಂತಹ ಪೋಲ್ಸ್ಗಳನ್ನು ಸ್ಥಳೀಯ ಗ್ರಾಮಸ್ಥರು ಹಾಗೂ ಯುವಕರು ಹೆಗಲ ಮೇಲೆ ಹೊತ್ತು ರೈಲ್ವೆ ಹಳಿಯಿಂದ ತೆಗೆದು ರಸ್ತೆಯ ಪಕ್ಕದ ಬದಿಗೆ ಹಾಕಿ ಮಾನವೀಯತೆ ಮೆರೆದಿದ್ದಾರೆ.

ಸ್ಥಳೀಯ ಗ್ರಾಮಸ್ಥರು ಹಾಗೂ ಲಾರಿ ಚಾಲಕ ಹೇಳುವ ಪ್ರಕಾರ ರೈಲ್ವೆಯ ಈ ರಸ್ತೆಯು ತುಂಬಾ ಅಂಕುಡೊಂಕಾಗಿದ್ದ ಕಾರಣ ಭಾರ ತಾಳಲಾರದೆ ಲಾರಿಯ ಸೈಡ್ ಡೋರ್ ಕಟ್ಟಾಗಿದ್ದು ರೈಲ್ವೆ ಹಳಿಯ ಮೇಲೆ ಪೋಲ್ಸ್ ಗಳು ಬಿದ್ದಿದ್ದು ದಯಮಾಡಿ ರೈಲ್ವೆ ಇಲಾಖೆಯವರು ಈ ರಸ್ತೆಯ ಬಗ್ಗೆ ಸ್ವಲ್ಪ ಗಮನ ಹರಿಸಬೇಕೆಂದು ಈ ಸಂದರ್ಭದಲ್ಲಿ ರೈಲ್ವೆ ಸಿಬ್ಬಂದಿಯ ಹತ್ತಿರ ಗ್ರಾಮಸ್ಥರು ಮೌಖಿಕ ಮನವಿ ನೀಡಿದರು.



ವರದಿ: ಪವನ್ ಕುಮಾರ್ ಕಠಾರೆ.

Leave a Reply

Your email address will not be published. Required fields are marked *