Headlines

ಲಖಿಂಪುರದ ರೈತರ ಹತ್ಯೆ ಖಂಡಿಸಿ ಸಾಗರ ಕಾಂಗ್ರೆಸ್ ಪಕ್ಷದ ವತಿಯಿಂದ ಶ್ರದ್ಧಾಂಜಲಿ ಹಾಗು ‘ಮೌನಚಾರಣೆ …!

 

ಸಾಗರ: ಇಲ್ಲಿನ  ಕಾಂಗ್ರೆಸ್ ಪಕ್ಷದ ಕಛೇರಿ ಮುಂಭಾಗದಲ್ಲಿ   ಸಾಗರ ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ವತಿಯಿಂದ ಇಂದು ಸಂಜೆ ನಗರ ಅಧ್ಯಕ್ಷರಾದ  ಸುರೇಶ್ ಬಾಬು ರವರ ನೇತೃತ್ವದಲ್ಲಿ ಉತ್ತರ ಪ್ರದೇಶದ ಲಖೀಂಪುರ ಗ್ರಾಮದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಅಜಯ್ ಮಿಶ್ರಾ ಅವರ ಪುತ್ರನಾದ ಆಶಿಶ್ ಮಿಶ್ರಾ ವಾಹನವನ್ನು ಚಲಾಯಿಸಿ ಹತ್ಯೆಯನ್ನು ಖಂಡಿಸಿ ಹಾಗೂ ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಮೇಣದ ಬತ್ತಿ ಬೆಳಗಿಸಿ  ಶ್ರದ್ಧಾಂಜಲಿ ಹಾಗು ಮೌನಚಾರಣೆ  ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ , ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಶ್ರೀಮತಿ ರಾಜನಂದಿನಿ ಕಾಗೋಡು ರವರು ಹಾಗೂ ಸಾಗರ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಅರ್ ಜಯಂತ್ ರವರು ಮಾತನಾಡಿದರು. 

ನಗರಸಭೆ ಸದಸ್ಯರಾದ ಶ್ರೀಮತಿ ಮಧುಮಾಲತಿ, ತಸ್ರೀಫ್, ಗಣಪತಿ ಮಂಡಗಳಲೆ, , ಪ್ರಮುಖರಾದ ಮೈಕಲ್, ಅಶೋಕ ಬೇಳೂರು.ಮಹಾಬಲ ಕೌತಿ, ಅಜೀಂ .ಸಲೀಂ . ಐ.ಜಿ. ಸ್ವರೂಪ್. ನಾಗರಾಜ ಸ್ವಾಮಿ. ಮನೋಜ್ ಕುಗ್ವೆ.ರಮೇಶ್ ಚಂದ್ರಗುತ್ತಿ. ಕಬೀರ್ ಚಿಪ್ಲಿ. ಸಫ್ವಾನ್.ಸಂಜಯ್. ವೆಂಕಟೇಶ್ ಮೆಳವರಿಗೆ. ಕಿರಣ್ ದೊಡ್ಮನೆ.ಜಿಲಾನಿ. ಇನ್ನಿತರ ಕಾರ್ಯಕರ್ತರು  ಇದ್ದರು.



ಕೃಪೆ : ಮಲೆನಾಡ ರಹಸ್ಯ





Leave a Reply

Your email address will not be published. Required fields are marked *