ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈವರೆಗಿನ ಶೇಕಡವಾರು ಮತದಾನದ ವಿವರ |
ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದ್ದು ಬಿಸಿಲು ಝಳಕ್ಕೆ ಬೆದರಿ ಮತದಾರರು ಬೆಳಗ್ಗೆಯೇ ಮತಗಟ್ಟೆಗಳತ್ತ ಉತ್ಸಾಹದಿಂದ ಧಾವಿಸಿ ಮತ ಚಲಾಯಿಸುತ್ತಿದ್ದಾರೆ. ಮಧ್ಯಾಹ್ನ 03 ಗಂಟೆವರೆಗೆ ಒಟ್ಟು ಶೇ.58.04 ಮತದಾನವಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು ?
ಬೈಂದೂರು : 58.41
ಭದ್ರಾವತಿ : 53.28
ಸಾಗರ : 59.26
ಶಿಕಾರಿಪುರ : 60.75
ಶಿವಮೊಗ್ಗ : 53.16
ಶಿವಮೊಗ್ಗ ಗ್ರಾಮಾಂತರ : 61.63
ಸೊರಬ : 59.58
ತೀರ್ಥಹಳ್ಳಿ : 60.01
ಉತ್ಸಾಹದಿಂದ ಮತಗಟ್ಟೆಯಲ್ಲಿ ಜಮಾಯಿಸಿದ ಮತದಾರರು | ಮತಗಟ್ಟೆಗೆ ಬಂದು ಮತ ಚಲಾಯಿಸಿದ 96ವರ್ಷದ ನಾಗಮ್ಮ
ರಿಪ್ಪನ್ಪೇಟೆ;-ಶಿವಮೊಗ್ಗ ಲೋಕಸಭಾ ಚುನಾವಣೆಯ ಅಂಗವಾಗಿ ಇಂದು ಬೆಳಗ್ಗೆ ಮತದಾರರು ಮತಗಟ್ಟೆಯಲ್ಲಿ ಮುಂಜಾನೆಯಿAದಲೇ ಸರತಿಸಾಲಿನಲ್ಲಿ ಮತದಾನಕ್ಕೆ ಉತ್ಸುಕರಾಗಿ ನಿಂತು ಮತದಾನ ಮಾಡುತ್ತಿದ್ದು ವಿಶೇಷವಾಗಿತು.
ಬೇಸಿಗೆ ಬಿಸಿಲ ಕಾರಣ ಮತದಾರರು ತಂಪಾದ ಸಮಯದಲ್ಲಿ ಮತಹಾಕಿ ಮನೆ ಸೇರಿಕೊಂಡರಾಯಿತು ಎಂದು ಮುಂಜಾನೆಯೇ ವಯೋವೃದ್ದರು ಮಹಿಳೆಯರು ಹೊಸದಾಗಿ ಸೇರ್ಪಡೆಯಾದ ಹೊಸ ಮತದಾರರು ಸರತಿ ಸಾಲಿನಲ್ಲಿ ಮತಗಟ್ಟೆಯಲ್ಲಿ ನಿಂತು ಮತದಾನ ಮಾಡಿ ಮತಹಾಕಿದ ಬಗ್ಗೆ ತಮ್ಮ ಬೆರಳನ್ನು ಎತ್ತಿ ಹಿಡಿದುಕೊಂಡು ಹೊರಬರುತ್ತಿದ್ದುದ್ದು ವಿಶೇಷವಾಗಿತು.
ಇಲ್ಲಿನ ಬರುವೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ಮೂರು ಮತಗಟ್ಟೆಗಳಿದ್ದು ಈ ಎಲ್ಲ ಮತದಾನ ಕೇಂದ್ರದಲ್ಲಿ ಮತದಾನ ಮಾಡಲು ಬಂದು ಹೋಗುವವರನ್ನು ರಾಷ್ಟ್ರೀಯ ಪಕ್ಷಗಳಾ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರುಗಳು ಹಸ್ತಲಾಘವ ಮಾಡಿ ಶುಭಕೋರುತ್ತಿದ್ದರು.
ಇನ್ನೂ ಪಕ್ಷೇತರ ಅಭ್ಯರ್ಥಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ಕಡೆಯವರು ನಾವುಗಳು ಏನು ಕಡಿಮೆ ಎಂಬಂತೆ ಮತದಾನಕ್ಕೆ ಬರುವವರನ್ನು ಸ್ವಾಗತಿಸಿ ತಮ್ಮ ಪರ ಮತಮಾಡಲು ಪ್ರೇರಪಿಸುತ್ತಿರುವುದು ಕಂಡು ಬಂತು.
ಇಲ್ಲಿನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ತಳಲೆ ಮತಗಟ್ಟೆಯಲ್ಲಿ 96 ವರ್ಷದ ನಾಗಮ್ಮ ಶಿವಪ್ಪಗೌಡ ಕಗ್ಗಲಿ ರವರು ಮತಗಟ್ಟೆಗೆ ಬಂದು ಮತ ಚಲಾಯಿಸಿ ತಮ್ಮ 96 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ವಿಶೇಷವಾಗಿತ್ತು.