Konanduru | ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಯುವಕ ಸಾವು! 
ತೀರ್ಥಹಳ್ಳಿ : ಚಲಿಸುತ್ತಿದ್ದ ಬೈಕ್ ಮೇಲೆ ಅಕೇಶಿಯಾ ಮರಬಿದ್ದು ಸ್ಥಳದಲ್ಲೇ ರಾಮಪ್ಪ ಎಂಬ ಯುವಕ ಮೃತಪಟ್ಟ ಧಾರುಣ ಘಟನೆ ಶುಕ್ರವಾರ ತಡರಾತ್ರಿ ಕೋಣಂದೂರು ಸಮೀಪದ ಹಾದಿಗಲ್ಲಿ ಗ್ರಾಪಂ ವ್ಯಾಪ್ತಿಯ ಮೀನ್ಮನೆಕೊಪ್ಪ ಗ್ರಾಮದಲ್ಲಿ ನಡೆದಿದೆ.
ಹಾದಿಗಲ್ಲು ಸಮೀಪದ ಮೀನ್ಮನೆಕೊಪ್ಪ ಗ್ರಾಮದ ರಾಮಪ್ಪ(26) ಮೃತ ದುರ್ಧೈವಿಯಾಗಿದ್ದಾರೆ.
ಕೋಣಂದೂರಿಗೆ ಕೆಲಸದ ನಿಮಿತ್ತ ತೆರಳಿದ್ದ ಯುವಕ ವಾಪಾಸ್ ಮನೆಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ.  ಚಲಿಸುತ್ತಿರುವಾಗಲೇ ಬೈಕ್ ಮೇಲೆ ಆಕೇಶಿಯ ಮರವೊಂದು ಅಪ್ಪಳಿಸಿದೆ. ಇದರಿಂದ ಸ್ಥಳದಲ್ಲೇ ಯುವಕ ಅಸುನೀಗಿದ್ದಾರೆ. 
ರಾಮಪ್ಪ ಸಕಾಲಕ್ಕೆ ಮನೆಗೆ ಬಾರದೆ ಇರುವುದನ್ನು ಗಮನಿಸಿದ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
		 
                         
                         
                         
                         
                         
                         
                         
                         
                         
                        