SSLC RESULT | ರಿಪ್ಪನ್ಪೇಟೆ : ರಾಮಕೃಷ್ಣ ವಿದ್ಯಾಲಯಕ್ಕೆ ಸತತ 8ನೇ ಬಾರಿ ಶೇಕಡಾ100% ಫಲಿತಾಂಶ
ರಿಪ್ಪನ್ಪೇಟೆ : 2022 23ನೇ ಸಾಲಿನ ಎಸ್ ಎಸ್
ಎಲ್ ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ರಾಮಕೃಷ್ಣ ವಿದ್ಯಾಲಯ ಈ ಬಾರಿಯೂ ಸಹ ಶೇಕಡ 100% ರಷ್ಟು ಫಲಿತಾಂಶವನ್ನು ಪಡೆದಿದೆ.
ಸತತವಾಗಿ 8ನೇ ಬಾರಿಗೆ 100% ಫಲಿತಾಂಶ ಪಡೆದಿರುವ ರಾಮಕೃಷ್ಣ ವಿದ್ಯಾಲಯದಲ್ಲಿ ಈ ವರ್ಷ 35 ವಿದ್ಯಾರ್ಥಿಗಳು ಪರೀಕ್ಷೆಗೆ
ಕುಳಿತಿದ್ದು 35 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪೋಷಕರಿಗೂ ಹಾಗೂ ಶಿಕ್ಷಣ ಸಂಸ್ಥೆಯವರಿಗೆ ಹೆಮ್ಮೆಯನ್ನು ತಂದಿರುತ್ತಾರೆ.
ರಾಮಕೃಷ್ಣ ಶಾಲೆಯ ದಿಶಾ 625ಕ್ಕೆ 611(96.48%) ಅಂಕ ಗಳಿಸಿದ್ದಾಳೆ.ಇವರು ರಿಪ್ಪನ್ಪೇಟೆಯ ಜ್ಯುವೆಲರ್ಸ್ ಮಾಲೀಕರಾದ ಸುರೇಶ್ ಹಾಗೂ ಸುನೀತಾ ದಂಪತಿಗಳ ಪುತ್ರಿಯಾಗಿದ್ದಾರೆ.
ಕುಮಾರಿ ಗಾನವಿ 625ಕ್ಕೆ 580(93%) ಅಂಕ ಗಳಿಸಿದ್ದು,ಇವರು ಅರಸಾಳು ಸಮೀಪದ ಬೆಕ್ಕೋಡು ನಿವಾಸಿ ಕೃಷ್ಣಮೂರ್ತಿ ಮತ್ತು ಸರಸ್ವತಿ ದಂಪತಿಗಳ ಪುತ್ರಿಯಾಗಿದ್ದಾರೆ.
ಕುಮಾರಿ ಅನ್ವಿತಾ 625ಕ್ಕೆ 577(92.32%) ಅಂಕ ಗಳಿಸಿದ್ದು,ಇವರು ವಡಗೆರೆ ನಿವಾಸಿ ಶ್ರೀನಿವಾಸ್ ಮತ್ತು ದಂಪತಿಗಳ ಪುತ್ರಿಯಾಗಿದ್ದಾರೆ.
ಶಾಲಿನಿ 576(92.16%) , ರಿದ್ದಿ ರಾಮಗೌಡ 625ಕ್ಕೆ 564(90.24%)
ದರ್ಪಣ್ ವೈ ಹಾನಂಬಿ 625 ಕ್ಕೆ 561 ,ನಮಿತಾ 625ಕ್ಕೆ 542 , ದೀಕ್ಷಾ 540 , ಪ್ರಜ್ವಲ್ 531 ಮತ್ತು ರಾಕೇಶ್ 530 ಅಂಕಗಳನ್ನು ಪಡೆದಿರುತ್ತಾರೆ.
ರಾಮಕೃಷ್ಣ ಶಾಲೆಗೆ ಶೇಕಡಾ100% ಫಲಿತಾಂಶ ತಂದುಕೊಟ್ಟು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಮತ್ತು ಪೋಷಕ ವೃಂದ ಅಭಿನಂದಿಸಿ ಶುಭ ಹಾರೈಸಿದೆ.
SSLC ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆ ವತಿಯಿಂದ ಅಭಿನಂದನೆಗಳು…….