Haveri | ಅಕ್ರಮ ಗಾಂಜಾ ಮಾರಾಟ – 2.96 ಲಕ್ಷ ಮೌಲ್ಯದ ಗಾಂಜಾ ಸಮೇತ ಮೂವರು ಆರೋಪಿಗಳ ಬಂಧನ

Haveri | ಅಕ್ರಮ ಗಾಂಜಾ ಮಾರಾಟ – 2.96 ಲಕ್ಷ ಮೌಲ್ಯದ ಗಾಂಜಾ ಸಮೇತ ಮೂವರು ಆರೋಪಿಗಳ ಬಂಧನ

ಹಾವೇರಿ  :  ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಹಾಗೂ 2.96 ಲಕ್ಷ ಮೌಲ್ಯದ ಗಾಂಜಾವನ್ನು ಶಹರ ಪೊಲೀಸ್ ಠಾಣೆಯ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.

ಸವಣೂರಿನ ಗುಲಾಮರಸೂಲಖಾನ್ ಹಸನ್ ಖಾನ್ ಕಾಂಜಾದ್, ಮಲಿಕ್ ರೆಹಾನ್  ರಿಯಾಜ್ ಅಹಮದ್  ಬಕ್ರಿಯವಾಲೆ  ಹಾಗೂ ಪೂರ್ ಖಾನ್ ಬಾಬಾ ಜಾನ್ ಪಟವೇಗಾರ  ಎಂಬುವವರು ಬಂಧಿತರು. 


ಇವರು ಶುಕ್ರವಾರ ಬೆಳಗ್ಗೆ ನಾಗೇಂದ್ರ ಮಟ್ಟಿಯಿಂದ ಶಾಂತಿನಗರಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ಸುಮಾರು  2.96 ಲಕ್ಷ ರೂ.ಕಿಂತ ಅಧಿಕ ಮೌಲ್ಯದ 11 ಕೆಜಿ 843 ಗ್ರಾಂ ತೂಕದ ಗಾಂಜಾ ಸಾಗಾಣಿ ಮಾಡಿ ಮಾರಾಟ ಮಾಡಲು ಮುಂದಾಗಿದ್ದರು. ಆರೋಪಿತರ ಮೇಲೆ ಸಂಶಯ ವ್ಯಕ್ತಪಡಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶ ಕುಮಾರ್ ನೇತೃತ್ವದಲ್ಲಿ ಹೆಚ್ಚುವರಿ  ಎಸ್ ಪಿ ಸಿ.ಗೋಪಾಲ್, ಹಾವೇರಿ ಉಪ ವಿಭಾಗದ ಪೊಲೀಸ್  ಎಂ.ಎಸ್. ಪಾಟೀಲ ಮಾರ್ಗದರ್ಶನದಲ್ಲಿ ಶಹರ ಠಾಣೆ ಪಿ ಐ ಮೋತಿಲಾಲ್ ಪವಾರ್ ತಂಡದಲ್ಲಿ ಹಾವೇರಿ ಶಹರ ಪೊಲೀಸ್ ಠಾಣೆಯ ತನಿಕಾ ಅಧಿಕಾರಿ ಪಿ ಎಸ್ ಐ ಎಸ್ .ಎಂ. ವನಹಳ್ಳಿ ಸಿಬ್ಬಂದಿಗಳಾದ ಎಂ. ಜಿ.ಏರೇಶಿಮಿ, ಕುಬೇರಪ್ಪ ಲಮಾಣಿ, ಮುತ್ತಪ್ಪ ಲಮಾಣಿ, ಶಂಕ್ರಪ್ಪ ಲಮಾಣಿ, ಚನ್ನಬಸಪ್ಪ ಆರ್ ಬಿ, ನೀಲಕಂಟ ಲಿಂಗರಾಜು,ಚಂದ್ರಕಾಂತ್ ಎಲ್ ಆರ್, ಬಸವರಾಜ್ ಎನ್ ಸಿ, ಮಾಲತೇಶ್ ಕಬ್ಬೂರ, ತಾಂತ್ರಿಕ ವಿಭಾಗದ ಸಿಬ್ಬಂದಿ ಮಾರುತಿ ಹಾಲ್ಬಾವಿ, ಸತೀಶ್ ಮಾರುಕಟ್ಟೆ ಹಾಗೂ ಇತರೆ ಸಿಬ್ಬಂದಿ ಕಾರ್ಯಾಚರಣೆ ಪಾಲ್ಗೊಂಡಿದ್ದರು.

 ವರದಿ :  ನಿಂಗರಾಜ್ ಕೊಡಲ ಹಾವೇರಿ ಜಿಲ್ಲೆ ಬಂಕಾಪುರ.

Leave a Reply

Your email address will not be published. Required fields are marked *