ಅಜ್ಜಿಯನ್ನೇ ಸ್ನೇಹಿತರೊಂದಿಗೆ ಸೇರಿ ಉಸಿರುಗಟ್ಟಿಸಿ ಕೊಲೆಗೈದ ಮೊಮ್ಮಗ | Crime News
ಹಣಕ್ಕಾಗಿ ಮೊಮ್ಮಗನೊಬ್ಬ ತನ್ನ ಅಜ್ಜಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನಲ್ಲಿ ನಡೆದಿದೆ.
ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದಲ್ಲಿ ರಾಮಕ್ಕ (75) ಎಂಬ ಕೂಲಿ ಕೆಲಸ ಮಾಡಿಕೊಂಡಿದ್ದ ವಯೋ ವೃದ್ದೆಯನ್ನು ಕೊಲೆಮಾಡಲಾಗಿದೆ. ಸ್ವತಃ ಆಕೆಯ ಮೊಮ್ಮಗ ಮತ್ತು ಆತನ ಸಂಗಡಿಗರು ವೃದ್ಧೆಯನ್ನು ಉಸಿರುಗಟ್ಟಿಸಿ ಸಾಯಿಸಿರುವ ಘಟನೆ ಇದಾಗಿದೆ.
ಕೊಲೆ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಹಣಕೊಡಲು ಅಜ್ಜಿ ನಿರಾಕರಿಸಿದ್ದಕ್ಕೆ ಚೇತನ್ ತನ್ನ ಸ್ನೇಹಿತರಾದ ಭರತ, ಲೋಹಿತ್, ಆದರ್ಶ ಎಂಬುವರ ಜತೆ ಸೇರಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ರಾಮಕ್ಕ 20 ಸಾವಿರಕ್ಕೂ ಅಧಿಕ ಹಣ ಕೂಡಿಟ್ಟುಕೊಂಡಿದ್ದನ್ನು ನೋಡಿದ ಮೊಮ್ಮಗ ಚೇತನ್ ಅಜ್ಜಿಯ ಬಳಿ ಹಣ ಇರುವುದನ್ನ ನೋಡಿ ಈ ಕೃತ್ಯವೆಸಗಿದ್ದಾನೆ.
ಸದ್ಯ ಪ್ರಕರಣದ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.