Accident | ಜವರಾಯನಂತೆ ಅಡ್ಡ ಬಂದ ನಾಯಿ – ಕಾರು ಪಲ್ಟಿಯಾಗಿ ಯುವಕ ಸಾವು
ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಬಳಿಯಲ್ಲಿ ಕಾರಿಗೆ ನಾಯಿ ಅಡ್ಡ ಬಂದು ಕಾರು ಪಲ್ಟಿಯಾಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಶಿವಮೊಗ್ಗ ನಗರದ ಪ್ರಜ್ವಲ್ ವಾಲ್ಮಿಖಿ(23) ಮೃತಪಟ್ಟ ಯುವಕನಾಗಿದ್ದಾನೆ.
ಮಂಡಗದ್ದೆಗೆ ಭಾನುವಾರದ ಜಾಲಿ ರೈಡ್ ಗೆ ಮುಂದಾಗಿದ್ದ ಶಿವಮೊಗ್ಗ ನಗರದ ಯುವಕರು ಎರಡು ಕಾರಿನಲ್ಲಿ ತೆರಳಿದ್ದಾರೆ. ಮಂಡಗದ್ದೆಯಲ್ಲಿ ಊಟ ಮುಗಿಸಿ ವಾಪಾಸ್ ಶಿವಮೊಗ್ಗಕ್ಕೆ ಬರುವಾಗ ಕಾರಿಗೆ ನಾಯಿಯೊಂದು ಅಡ್ಡ ಬಂದಿದೆ.
ನಾಯಿಯನ್ನ ತಪ್ಪಿಸಲು ಹೋಗಿ ಒಂದು ಕಾರು ಪಲ್ಟಿ ಹೊಡೆದಿದೆ. ಕಾರುಪಲ್ಟಿ ಹೊಡೆದ ಪರಿಣಾಮ ಕಾರು ಚಲಾಯಿಸುತ್ತಿದ್ದ ಯುವಕ ಮೃತಪಟ್ಟಿದ್ದಾನೆ.
ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.