ಶಿವಮೊಗ್ಗ ಹಾಗೂ ಕುಂಸಿ ರೈಲ್ವೆ ನಿಲ್ದಾಣಗಳ ನಡುವೆ ಹಳಿ ಮೇಲೆ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ವಾರಸುದಾರರು ಇದ್ದರೆ ರೈಲ್ವೆ ಪೊಲೀಸರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿವಮೊಗ್ಗದಿಂದ ಕುಂಸಿಗೆ ಹೋಗುವ ರೈಲ್ವೆ ಮಾರ್ಗದ ಮಧ್ಯೆ ಇವತ್ತು ಬೆಳಗ್ಗೆ ರೈಲ್ವೆ ಇಲಾಖೆ ಸಿಬ್ಬಂದಿ ಹಳಿ ಪರಿಶೀಲನೆಗೆ ತೆರಳಿದ್ದಾಗ ಅಚ್ಚರಿ ಕಾದಿತ್ತು ರೈಲ್ವೆ ಹಳಿ ಮೇಲೆ ಮೃತದೇಹ ಪತ್ತೆಯಾಗಿದೆ.
ಕುಂಸಿ ರೈಲ್ವೆ ಹಳಿ ಮೇಲೆ ಅನಾಮಧೇಯ ಶವ ಪತ್ತೆ :
ಮೃತ ವ್ಯಕ್ತಿಯು ಒಂದು ಸಿಮೆಂಟ್ ಬಣ್ಣದ ಸ್ವೆಟರ್, ಬಿಳಿ ಮತ್ತು ಕೆಂಪು ಬಣ್ಣದ ಚೆಕ್ಸ್ ಶರ್ಟ್, ಕೆಂಪ ಬಣ್ಣದ ನೈಟ್ ಪ್ಯಾಂಟ್, ಎಡಗಾಲಿನಲ್ಲಿ ಕಪ್ಪು ಬಣ್ಣದ ದಾರ ಕಟ್ಟಿರುತ್ತಾನೆ ಎಂದು ರೈಲ್ವೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೃತ ವ್ಯಕ್ತಿಯು ಅಂದಾಜು 45 ರಿಂದ 50 ವರ್ಷ ವಯಸಿನವರು ಎಂದು ಅಂದಾಜಿಸಲಾಗಿದೆ.