Headlines

ಸೋಲಾರ್ ರಿಪೇರಿಗೆ ಬಂದವರಂತೆ ನಟಿಸಿ, ನೀರು ಕೇಳುವ ನೆಪದಲ್ಲಿ ಮಾದಕ ನಶೆಯ ವಸ್ತುವನ್ನು ಎರಚಿ ದರೋಡೆಗೆ ವಿಫಲ ಯತ್ನ..!

ತೀರ್ಥಹಳ್ಳಿ:-ತಾಲ್ಲೂಕಿನ ನೆರಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಬ್ಬಿ ಹೊರಣಿ ಬಳಿಯಲ್ಲಿ ಸೋಮವಾರ  ಸಂಜೆಯ ವೇಳೆಗೆ ಬುಲೆರೋ ಕಾರಿನಲ್ಲಿ  ಬಂದ 6 ಜನರ ದರೋಡೆಕೋರರ ತಂಡ ಮನೆಯೊಂದರ ಬಳಿ ಬಂದು ಸೋಲಾರ್  ರಿಪೇರಿ ಮಾಡುವ ಬಗ್ಗೆ ವಿಚಾರಿಸಿ  ನಂತರ ನೀರನ್ನು ಕೇಳಿದ್ದಾರೆ. 

ಮನೆಯಲ್ಲಿದ್ದ ಗೃಹಿಣಿಯೋರ್ವರು  ನೀರು ತಂದಾಗ ಆಕೆಯ ಮೇಲೆ ಮಾದಕ ದ್ರವ್ಯದ ನಶೆಯ ವಸ್ತುವನ್ನು ಎರಚಿ ದರೋಡೆಗೆ ಮುಂದಾದಾಗ ಮನೆಯವರು ದರೋಡೆಗೆ ಯತ್ನಿಸಿದವರ ಕೈ ಕಚ್ಚಿ, ಕೊಡಲಿಯಿಂದ ಹೊಡೆದಿದ್ದಾರೆ ಎನ್ನಲಾಗಿದೆ. ನಂತರ ಕಿರುಚಾಡಿ, ಕೂಗಾಡಿ, ಅಕ್ಕಪಕ್ಕದವರನ್ನು ಕರೆದಿದ್ದಾರೆ. ಅಕ್ಕಪಕ್ಕದವರು ಬರೋದನ್ನ ನೋಡಿ ದರೋಡೆಕೋರರು ಅಲ್ಲಿಂದ ಓಡಿ ಹೋಗುತ್ತಿರುವಾಗ ಕುಟುಂಬದ ಸದಸ್ಯರೊಬ್ಬರು ಮನೆಗೆ ಪೇಟೆಯಿಂದ ವಾಪಸಾಗಿದ್ದಾರೆ.ಎರಡು ಗಾಡಿಗಳು ಎದುರು ಬದುರಾದರು ಇವರಿಗೆ ದರೋಡೆಕೋರರು ಎಂದು ಗೊತ್ತಾಗಲಿಲ್ಲ. ನಂತರ ಮನೆಗೆ ಬಂದಾಗ ವಿಷಯ ತಿಳಿದು ದರೋಡೆಕೋರರನ್ನು ಹುಡುಕಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಿ ದರೋಡೆಕೋರರು ಪರಾರಿಯಾಗಿರುವ ಘಟನೆ ನಡೆದಿದೆ. ಕಾರಿನ ನಂಬರ್ ಪ್ಲೇಟ್ ಗೆ ಸಗಣಿ ಬಳಿದಿದ್ದರು ಎಂದು ತಿಳಿದುಬಂದಿದೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ದರೋಡೆಗೆ ಯತ್ನಿಸಿದ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶ್ರೀನಿವಾಸ್ ರವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

ಗೃಹ ಸಚಿವರ ಭೇಟಿಯ ವೀಡಿಯೋ ಇಲ್ಲಿ ವೀಕ್ಷಿಸಿ👇👇👇

Leave a Reply

Your email address will not be published. Required fields are marked *