Headlines

ಹಿಂದೂ ಕಾರ್ಯಕರ್ತನಿಗೆ ಕೊಲೆ ಬೆದರಿಕೆ : ಜೈಲ್ ನಿಂದ ಜಾಮೀನಿನ ಮೇಲೆ ಬಂದು ಮತ್ತೆ ಧಮ್ಕಿ ಹಾಕಿದ ಯುವಕರು :

ಶಿವಮೊಗ್ಗ : ನಗರದಲ್ಲಿ ಹಿಂದೂ ಮತ್ತು ಮುಸ್ಲಿಂ ನಡುವಿನ ಸಂಘರ್ಷ ಇನ್ನು ಮುಂದುವರೆಯುವ ರೀತಿ ಕಾಣುತ್ತಿದೆ. ಕಾರಣ ಭಜರಂಗದಳದ ಯುವಕರು ಎಂದು ಹಿಂಬಾಲಿಸಿ ಕೊಲೆಗೆ ಸಂಚು ಮಾಡಿ ಪೊಲೀಸರಿಂದ ಬಂಧನಕ್ಕೊಳಗಾಗಿ ಬಿಡುಗಡೆ ಹೊಂದಿದ್ದ ಮೂವರು ಹುಡುಗರಲ್ಲಿ ಇಬ್ಬರು ಹುಡುಗರು ಮತ್ತೆ ಪುಂಡಾಟಿಕೆ ಮೆರೆದಿದ್ದಾರೆ.

ಈ ಪ್ರಕರಣವನ್ನು ನೋಡುತ್ತಿದ್ದರೆ  ಯಾರೋ ಚಿವುಟಿ ಮಜಾ ತೆಗೆದುಕೊಳ್ಳುತ್ತಿದ್ದಾರಾ ಎಂಬ ಅನುಮಾನ ಸಹ ಹುಟ್ಟಲಾರಂಭಿಸಿದೆ. ಹಿಂದೂ ಕಾರ್ಯಕರ್ತ ಎಂದು ನ್ಯೂ ಮಂಡ್ಲಿಯಲ್ಲಿಯಲ್ಲಿ ಸುಮಂತ್ ನನ್ನ
ಹುಡುಕಿಕೊಂಡು ಬಂದು ಆತನ ತಮ್ಮ ಭರತನಿಗೆ ಕೊಲೆ ಬೆದರಿಕೆ ಹಾಕಿ ಬಂಧನಕ್ಕೊಳಗಾದ ಸಲ್ಮಾನ್,ಅಬ್ಬಾಸ್ ಮತ್ತು ಉಸ್ಮಾನ್ ರಲ್ಲಿ ಉಸ್ಮಾನ್ ಮತ್ತು ಅಬ್ಬಾಸ್ ಭರತನ ಚಿಕ್ಕಮ್ಮನಿಗೆ ಧಮ್ಮಿ ಹಾಕಿ ಕೊಲೆ ಬೆದರಿಕೆ ಹಾಕಿದ್ದಾರೆ.

ಜಾಮೀನಿನ ಹಿನ್ನಲೆಯಲ್ಲಿ ಮೂವರು ಜೈಲಿನಿಂದ ಬಿಡುಗಡೆಯಾಗಿ ನ್ಯೂ ಮಂಡ್ಲಿ  ಶಿವಶಂಕರ್ ರೈಸ್ ಮಿಲ್ ಬಳಿಯಿರುವ ಭರತ್ ನ ಚಿಕ್ಕಮ್ಮನ ಮನೆ ಹತ್ತಿರ ಹೋಗಿ ಭರತ್ ನ  ಚಿಕ್ಕಮ್ಮ ಕಲಾವತಿಯನ್ನ ಅಡ್ಡಗಟ್ಟಿ ನಮ್ಮ ಮೇಲೆ ಭರತ್ ಪೋಲಿಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾನೆ. ಭರತ್ ಮತ್ತು ಸುಮಂತ್ ಇಬ್ಬರಿಗೂ ಹೇಳಿ ಎಷ್ಟೇ ದೂರು ಕೊಟ್ಟರೂ ಅವರು ಉಳಿಯೋಲ್ಲ ಅಂತ ಇಬ್ಬರನ್ನೂ ಮುಗಿಸುತ್ತೇವೆ ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು ನೀವು  ನಮ್ಮನ್ನ ಏನೂ ಮಾಡಿಕೊಳ್ಳಲು ಆಗುವುದಿಲ್ಲವೆಂದು ಬೆದರಿಕೆ ಹಾಕಿ ಹೋಗಿದ್ದಾರೆ. ಈ ಬಗ್ಗೆ ಭರತನ ಚಿಕ್ಕಮ್ಮ ಮತ್ತೊಂದು ಎಫ್‌ಐಆರ್ ದಾಖಲಿಸಿದ್ದಾರೆ.

ಏ.23 ರಂದು ಸಲ್ಮಾನ್, ಅಬ್ಬಾಸ್ ಮತ್ತು ಉಸ್ಮಾನ್ ಹಿಂದೂ  ಕಾರ್ಯಕರ್ತರಾದ  ಸುಮಂತನನ್ನ ಹುಡುಕಿಕೊಂಡು ಬಂದು ಸಿಗದಿದ್ದ ಕಾರಣಕ್ಕೆ ಅವರ ಸಹೋದರ ಭರತ್ ಗೆ ಲಾಂಗು ಮಚ್ಚು ತೀರಿಸಿ ಆತನ ಮೇಲೆ ಎಷ್ಟು ಹೊತ್ತಾದರೂ ಕೊಲೆ ಮಾಡುವೆ ಎಂದು ಬೆದರಿಸಿದ ಘಟನೆ ಮತ್ತು ಈ ಮೂವರು ಗಾಂಜಾ ಸೇವಿಸಿ ಧಮ್ಮಿ ಹಾಕಿದ್ದರು ಎಂಬ ಪ್ರಕರಣದಲ್ಲಿ ಪೊಲೀಸರು ಬಂಧಿಸಿ ಅರೆಸ್ಟ್ ಮಾಡಿದ್ದರು.

Leave a Reply

Your email address will not be published. Required fields are marked *