Headlines

ಬಿದನೂರಿನ ಇತಿಹಾಸ ಪ್ರಸಿದ್ದ ಮಾಷುಂಷಾ ವಲಿಯುಲ್ಲಾ ದರ್ಗಾದ 50ನೇ ವರ್ಷದ ಉರೂಸ್ ಸಂಭ್ರಮ

ಬಿದನೂರಿನ ಇತಿಹಾಸ ಪ್ರಸಿದ್ದ ಮಾಷುಂಷಾ ವಲಿಯುಲ್ಲಾ ದರ್ಗಾದ 50ನೇ ವರ್ಷದ ಉರೂಸ್ ಸಂಭ್ರಮ

ಹೊಸನಗರ: ಸುಮಾರು ಐವತ್ತು ವರ್ಷಗಳಿಂದ ಹಿಂದು, ಮುಸ್ಲಿಂ, ಕ್ರೈಸ್ತರನ್ನು ಒಂದುಗೂಡಿಸಿಕೊಂಡು ಐತಿಹಾಸಿಕ ಹಿನ್ನೆಲೆ ಹೊಂದಿರುವ ನಗರದ ಹಜರತ್ ಶೇಖುಲ್ ಅಕ್ಬರ್ ಅನ್ವರ ಮಅಶುಂಷಾ ವಲಿಯುಲ್ಲಾ ದರ್ಗಾದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಉರೂಸ್ ಉತ್ಸವ ವಿಜೃಂಭಣೆಯಿಂದ ನೆರವೇರುತ್ತಿದೆ. ದೇಶದ ಹಲವು ಕಡೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ ಎಂದು ಉರೂಸ್ ಸಮಿತಿ ಅಧ್ಯಕ್ಷ ವಿನಾಯಕ ಉಡುಪ ಹೇಳಿದರು.


ದರ್ಗಾದ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ತಂದೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎನ್. ವೆಂಕಟರಮಣ ಉಡುಪರಿಗೆ 50 ವರ್ಷದ ಹಿಂದೆ ಅವರ ಕನಸಿನಲ್ಲಿ ಬಂದ ಹಜರತ್‌ರವರು ಜನವಸತಿ ಇರದ ನಿರ್ಜನ ಪ್ರದೇಶವೊಂದರಲ್ಲಿ ನೆಲೆನಿಂತಿದ್ದು ವರ್ಷಂಪ್ರತಿ ಎಲ್ಲಾ ಜಾತಿ ಧರ್ಮ ಮರೆತು ಉರೂಸ್ ಆಚರಿಸಲು ಸೂಚನೆ ನೀಡಿದ್ದರು. ಅಲ್ಲಿಂದ ಇಲ್ಲಿಯ ತನಕವೂ ಉರೂಸ್ ನಡೆಯುತ್ತಾ ಬಂದಿದೆ ಎಂದರು.

ದರ್ಗಾ ಸಮಿತಿ ಕಾರ್ಯದರ್ಶಿ ಸಾದಿಕ್ ಅಲಿ ಮಾತನಾಡಿ, ಸಾಮರಸ್ಯ ಸೌಹಾರ್ಧತೆಗೆ ದರ್ಗಾ ಪ್ರಸಿದ್ಧಿ ಪಡೆದಿದೆ. ಎಲ್ಲಾ ಧರ್ಮದವರೂ ಇಲ್ಲಿಗೆ ಆಗಮಿಸುತ್ತಾರೆ. 50ನೇ ವರ್ಷದ ಉರೂಸ್ ಆಚರಣೆ ಹಿನ್ನಲೆಯಲ್ಲಿ ಅದ್ದೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ರಾಷ್ಟ್ರ-ರಾಜ್ಯ ಜಿಲ್ಲೆ ತಾಲ್ಲೂಕುಗಳಿಂದ ಸಾಕಷ್ಟು ಭಕ್ತಾರು ಆಗಮಿಸಿ ಉರೂಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿದ್ದು ಈ ವರ್ಷವೂ ಅದ್ದೂರಿಯಾಗಿ ಆಚರಿಸಲು ನಿರ್ದಾರಿಸಿದ್ದು ಎಲ್ಲಾ ಜನಾಂಗದವರು ಆಗಮಿಸಿ ಈ ಉರೂಸ್ ಯಶಸ್ವಿಗೊಳಿಸಿಕೊಡಬೇಕೆಂದು ಸ್ಥಳೀಯರಿಗೆ ದರ್ಗಾ ಸಮಿತಿಯಲ್ಲಿ ಕಡೆಗಣನೆ ಮಾಡಲಾಗಿದೆ ಎನ್ನುವುದು ಸರಿಯಲ್ಲ. ತಾಲೂಕು ವ್ಯಾಪ್ತಿಯ ಎಲ್ಲಾ ಮುಸ್ಲಿಂ ಜಮಾತ್‌ಗಳಿಂದಲೂ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಸ್ಥಳೀಯ ಜಮಾತ್ ನವರು ಸಮಿತಿಯಿಂದ ಹೊರಗುಳಿದಿರುವುದು ದುರದೃಷ್ಠಕರ. ಆದರೆ ಅವರಿಗೂ ಎಂದಿಗೂ ಸ್ವಾಗತವಿದೆ. ಎಲ್ಲರೂ ಒಟ್ಟಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸೋಣ ಎನ್ನುವುದು ನಮ್ಮ ಇಚ್ಚೆಯಾಗಿದೆ ಎಂದರು.


ಗೋಷ್ಠಿಯಲ್ಲಿ ದರ್ಗಾ ಸಮಿತಿ ಅಧ್ಯಕ್ಷ ಜಿ.ಮಹಮದ್ ಸಾಬ್, ಪ್ರಮುಖರಾದ ಇಬ್ರಾಹಿಂ, ಯೂಸೂಫ್ ಸಾಬ್, ಜಿ.ಎನ್.ರೆಹಮಾನ್ ಸಾಬ್, ಅಬ್ದುಲ್ ಸಾಬ್, ಇಸಾಕ್, ಎಸ್.ಕೆ.ಮಹಮದ್ ಸಾಬ್, ಅಬ್ದುಲ್ ಖಾದರ್ ಬುಕಾರಿ ಮತ್ತಿತರರು ಇದ್ದರು.

ಉರೂಸ್‌ಗೆ ಚಾಲನೆ :

ಕಾರ್ಗಲ್‌ನ ಧರ್ಮಗುರು ಸಿರಾಜ್ ತಂಗಳ್ ಉರೂಸ್ ಸಮಾರಂಭಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಲಾಗಿದ್ದು ಶನಿವಾರ, ಭಾನುವಾರ ಹಾಗೂ ಸೋಮವಾರದವರೆಗೂ ಅದ್ದೂರಿಯಾಗಿ ಸಮಾರಂಭ ನಡೆಯಲಿದ್ದು ಪ್ರತಿ ದಿನ ಭಕ್ತರಿಗೆ ಸಾರ್ವಜನಿಕ ಅನ್ನಸಂತರ್ಪಣೆ ವಿಶೇಷ ಪ್ರಾರ್ಥನೆ ಮೇ 27ರ ವರೆಗೆ ಪ್ರತಿದಿನ, ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ವಿವಿಧೆಡೆಯಿಂದ ಆಗಮಿಸುವ ಧರ್ಮಗುರುಗಳು ಭಕ್ತರಿಗೆ ಪ್ರವಚನ ನೀಡಲಿದ್ದಾರೆ. ಮಗ್ರಿಬ್ ನಮಾಜ್, ಸಂದಲ್ ಮೆರವಣಿಗೆ, ದುವಾ, ಅನ್ನಸಂತರ್ಪಣೆ ನೆರವೇರಲಿವೆ.

Leave a Reply

Your email address will not be published. Required fields are marked *