Ripponpete | ಪರಿಷತ್ ಚುನಾವಣೆ ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ – ಆರಗ ಜ್ಞಾನೇಂದ್ರ
ರಿಪ್ಪನ್ಪೇಟೆ;-ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಜೂನ್ ೩ ರಂದು ನಡೆಯುಲಿರುವ ಚುನಾವಣೆಯಲ್ಲಿ ಮೈತ್ರಿ ಆಭ್ಯರ್ಥಿಗಳಾದ ಡಾ.ಧನಂಜಯ ಸರ್ಜಿ ಮತ್ತು ಎಸ್.ಎಲ್. ಭೋಜೆ ಗೌಡರ ಗೆಲುವು ನಿಶ್ಚಿತ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ರಿಪ್ಪನ್ಪೇಟೆಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿ ಮೇಲ್ಮನೆ ಹಿರಿಯ ಆನುಭವಿಗಳ ಸದನ ಆಲ್ಲಿಗೆ ಪ್ರಜ್ಞಾವಂತರ ಹಾಗೂ ಪ್ರಮಾಣಿಕ ಸೇವೆಸಲ್ಲಿಸುವ ಮನೋಭಾವ ಹೊಂದಿರುವವರ ಆಯ್ಕೆ ಇಂದಿನ ಅಗತ್ಯವಾಗಿದೆ ಆ ನಿಟ್ಟಿನಲ್ಲಿ ಪಕ್ಷ ಸಮರ್ಥ ಆಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ಪಕ್ಷದ ಕಾರ್ಯಕರ್ತರು ಮತದಾರರ ಮನ ತಲುಪುವಲ್ಲಿ ಸಫಲರಾಗಿದ್ದಾರೆ.ಮೈತ್ರಿ ಆಭ್ಯರ್ಥಿಗಳಾದ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಡಾ.ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಈಗಾಗಲೇ ಮೇಲ್ಮನೆಯಲ್ಲಿ ಸೇವೆ ಸಲ್ಲಿಸಿರುವ ಅನುಭವಿ ರಾಜಕಾರಣಿ ಬೋಜೇಗೌಡರು ಶಿಕ್ಷಕರ ಹಾಗೂ ಉಪನ್ಯಾಸಕರ ಬೇಡಿಕೆಗಳ ಕುರಿತು ಸದನದಲ್ಲಿ ಮಾತನಾಡಿ ಅವರುಗಳ ಅನೇಕ ಬೇಡಿಕೆಗಳನ್ನು ಸರ್ಕಾರದಿಂದ ಅನುಷ್ಠಾನಗೊಳಿಸುವಲ್ಲಿ ಹಾಗೂ ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೆಯೇ ತಮ್ಮ ಕ್ಷೇತ್ರದಲ್ಲಿನ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಅನುದಾನವನ್ನು ನೀಡಿದ್ದಾರೆ.ಈ ಕ್ಷೇತ್ರದ ಮತದಾರರ ಮನಮುಟ್ಟುವಲ್ಲಿ ಸಫಲರಾಗಿದ್ದಾರೆ.
ನಾನು ಈಗಾಗಲೇ ಪ್ರವಾಸ ಮಾಡಿದಡೆಯಲ್ಲಿ ಉತ್ತಮ ವಾತವರಣ ನಿರ್ಮಾಣವಾಗಿದ್ದು ಈ ಆಭ್ಯರ್ಥಿಗಳ ಗೆಲುವು ನಿಶ್ಚಿತವೆಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಪದವಿ ಕಾಲೇಜ್ಗೆ ಭೇಟಿ ನೀಡಿ ಮೈತ್ರಿ ಆಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಪಕ್ಷದ ಮುಖಂಡರು ಕಾರ್ಯಕರ್ತರು ಹಾಜರಿದ್ದರು.