ರಿಪ್ಪನ್‌ಪೇಟೆ : ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ ಪಟ್ಟಣದ MSIL ಮದ್ಯ ಮಾರಾಟ ಮಳಿಗೆಯಲ್ಲಿ ADO ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಸಾಳು ನಿವಾಸಿ ನವೀನ್ ಕುಮಾರ್ ರವರ ಕುಟುಂಬಕ್ಕೆ MSIL ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ಹಾಲಪ್ಪ ರವರು MSIL ವತಿಯಿಂದ 5 ಲಕ್ಷ ರೂ ಪರಿಹಾರ ಧನದ ಚೆಕ್ ಹಸ್ತಾಂತರಿಸಿ ಸಾಂತ್ವನ ಹೇಳಿದರು.
ಇತ್ತೀಚೆಗೆ ಸಮೀಪದ ಅರಸಾಳು – ಬೆನವಳ್ಳಿ ನಡುವಿನ ರಸ್ತೆಯಲ್ಲಿ ಟೊಯೋಟಾ ಇಟಿಯೋಸ್ ಕಾರ್ ಹಾಗೂ ಬಜಾಜ್ ಡಿಸ್ಕವರ್ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನವೀನ್ ಕುಮಾರ್ ರವರು ಮೃತಪಟ್ಟಿದ್ದರು.
ಗುರುವಾರ ಪಟ್ಟಣದ ಗ್ರಾಮ ಪಂಚಾಯತಿಯ ಕುವೆಂಪು ಸಭಾಂಗಣದಲ್ಲಿ ನವೀನ್ ಕುಮಾರ್ ರವರ ತಂದೆ ರಾಮಣ್ಣರವರಿಗೆ MSIL ಅಧ್ಯಕ್ಷರು ಹಾಗೂ ಶಾಸಕರಾದ ಹರತಾಳು ಹಾಲಪ್ಪ 5 ಲಕ್ಷ ರೂ ಪರಿಹಾರದ ಚೆಕ್ ನ್ನು ವಿತರಿಸಿ ಸಾಂತ್ವಾನ ಹೇಳಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ, ಗ್ರಾ.ಪಂ.ಸದಸ್ಯರು ಹಾಗೂ ತಾಲ್ಲೂಕ್ ಬಿಜೆಪಿ ಅಧ್ಯಕ್ಷ ಗಣಪತಿ ಬಿಳಗೋಡು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಉದ್ಯಮಿ ಎಲ್.ನಾಗರಾಜ್ ಶೆಟ್ಟಿ, ಎಂ.ಸುರೇಶ್‌ಸಿಂಗ್, ಜಿ.ಪಂ.ಮಾಜಿ ಸದಸ್ಯೆ ಎ.ಟಿ.ನಾಗರತ್ನಮ್ಮ ಇನ್ನಿತರ ಮುಖಂಡರು ಹಾಜರಿದ್ದರು.